Uncategorized

ಸಂಸ್ಕಾರವೇ ಬದುಕಿನ ಬೆಳಕು- ಮಹಾದೇವ ಶ್ರೀ.

ಸಂಸ್ಕಾರವೇ ಬದುಕಿನ ಬೆಳಕು- ಮಹಾದೇವ ಶ್ರೀ.

ಸಂಸ್ಕಾರವೇ ಬದುಕಿನ ಬೆಳಕು- ಮಹಾದೇವ ಶ್ರೀ.

ಬೇಟಗೇರಿ (ಕೊಪ್ಪಳ ತಾ.), ಜುಲೈ 14: “ಮನುಷ್ಯನಿಗೆ ಸಂಪತ್ತು ಇಲ್ಲದಿದ್ದರೂ ನಡೆಯುತ್ತದೆ, ಆದರೆ ಸಂಸ್ಕಾರ ಇಲ್ಲದಿದ್ದರೆ ಬದುಕೇ ಬರಡು” ಎಂದು ಕುಕನೂರು ಬೇಟಗೇರಿಯ ಪೂಜ್ಯ ಡಾ. ಮಹಾದೇವ ಮಹಾಸ್ವಾಮಿಗಳು ಹೇಳಿದರು.
ಬೇಟಗೇರಿ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ಜರುಗಿದ 13ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡುತ್ತಾ ಬಸವಣ್ಣನವರು ‘ದಯವಿಲ್ಲದ ಧರ್ಮವು ಯಾವುದಯ್ಯಾ’ ಎಂದು ಪ್ರಶ್ನಿಸಿದರು. ದಯೆ, ಕರುಣೆ, ತ್ಯಾಗ, ಸಹನೆ ಇವೆಲ್ಲವೂ ಸಂಸ್ಕಾರದ ಮುಖಗಳು. ಶಾಲೆಯಲ್ಲಿ ಅಂಕ ಗಳಿಸುವುದನ್ನು ಮಾತ್ರ ಕಲಿತರೆ ಸಾಲದು. ಅಕ್ಕ-ಪಕ್ಕದವರ ಕಷ್ಟಕ್ಕೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕು. ಸಂಸ್ಕಾರವಿಲ್ಲದ ವಿದ್ಯೆ ಎಂದರೆ ಕತ್ತಿ ಹಿಡಿದ ಮಂಗನಂತೆ” ಎಂದು ಮಾರ್ಮಿಕವಾಗಿ ನುಡಿದರು.
ಮೈನಹಳ್ಳಿಯ ಪೂಜ್ಯ ಸಿದ್ದೇಶ್ವರ ಮಹಾಸ್ವಾಮಿಗಳು ಮಾತನಾಡಿ, “ಸಂಸ್ಕಾರವೆಂದರೆ ಕೇವಲ ದೊಡ್ಡವರಿಗೆ ನಮಸ್ಕಾರ ಮಾಡುವುದಲ್ಲ. ಮಾತಿನಲ್ಲಿ ವಿನಯ, ನಡೆಯಲ್ಲಿ ನೀತಿ, ಮನದಲ್ಲಿ ಮಾನವೀಯತೆ ಇರುವುದೇ ನಿಜವಾದ ಸಂಸ್ಕಾರ. ಇಂದು ಮೊಬೈಲ್ ಸಂಸ್ಕೃತಿಯಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆಯಾಗಬೇಕು. ಅಪ್ಪ-ಅಮ್ಮ ದಿನಾ 10 ನಿಮಿಷ ಮಕ್ಕಳ ಜೊತೆ ಕುಳಿತು ನೀತಿ ಕಥೆ, ವಚನ ಹೇಳಿಕೊಟ್ಟರೆ ಸಾಕು, ಸಂಸ್ಕಾರದ ಬೀಜ ಬಿತ್ತಿದಂತೆ” ಎಂದರು.
ಗುರುಬಸಯ್ಯ ಬೃಹನಮಠ ಅವರು, “ಹಿಂದಿನ ಕಾಲದಲ್ಲಿ ಅಜ್ಜ-ಅಜ್ಜಿಯ ಕಥೆಗಳೇ ಸಂಸ್ಕಾರದ ಗಣಿ ಆಗಿದ್ದವು. ಈಗ ಟಿವಿ, ಸೋಶಿಯಲ್ ಮೀಡಿಯಾ ಮಕ್ಕಳನ್ನು ಆವರಿಸಿದೆ. ಹೀಗಾಗಿ ಮಠ-ಮಾನ್ಯಗಳು ಸಂಸ್ಕಾರದ ಜವಾಬ್ದಾರಿ ಹೊರಬೇಕಾಗಿದೆ. ಪ್ರತಿ ಮನೆಯಲ್ಲಿ ವಾರಕ್ಕೊಮ್ಮೆ ‘ಸಂಸ್ಕಾರದ ಒಂದು ಗಂಟೆ’ ಮೀಸಲಿಡಿ. ಮಕ್ಕಳಿಗೆ ಹಿರಿಯರ ಪಾದ ಪೂಜೆ, ದೀಪ ನಮಸ್ಕಾರ, ವಚನ ಕಂಠಪಾಠ ಅಭ್ಯಾಸ ಮಾಡಿಸಿ” ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಿಂದಗಿಯ ಬಸವನಗೌಡ ದೇಸಾಯಿ, ತಳಕಲ್ ಗ್ರಾಮದ ಮಲ್ಲೇಶಪ್ಪ ಸಿಂಗಾಪೂರ, ಪ್ರಭು ಶಿಂಪರ, ಮುತ್ತಯ್ಯ ಹಿರೇಮಠ, ಶಂಕ್ರಪ್ಪ ಬಡಿಗೇರ, ಬಳಗೇರಿ ಪ್ರಭು, ಬಸವರಡ್ಡಿ, ಮುತ್ತಣ್ಣ ಮತ್ತು ಇತರರು ಇದ್ದರು. ದಾಸೋಹವನ್ನ ಬೇಟಗೇರಿ ಗ್ರಾಮದ ಬಳಗೇರಿ ಬಂಧುಗಳು ಮಾಡಿಸಿದ್ದರು.

ವರದಿ ಚನ್ನಯ್ಯ ಹಿರೇಮಠ ಕುಕುನೂರು

Related Articles

Leave a Reply

Your email address will not be published. Required fields are marked *

Back to top button
error: Content is protected !!