

*ಕುಕನೂರಿನಲ್ಲಿ ಜಿಲ್ಲಾ ವಕೀಲರ ಸಂಘದ ನೂತನ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ*
*ಕುಕನೂರು*, ಜುಲೈ 25: ಅಖಿಲ ಭಾರತ ವಕೀಲರ ಪರಿಷತ್ ಉತ್ತರ ಕರ್ನಾಟಕ ಘಟಕ ಹಾಗೂ ನೂತನವಾಗಿ ಆಯ್ಕೆಯಾದ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭವನ್ನು ಜುಲೈ 26ರಂದು ಬೆಳಿಗ್ಗೆ 10 ಗಂಟೆಗೆ ಕುಕನೂರಿನ ಶ್ರೀ ಮುಂಡರಗಿ ಅನ್ನದಾನೇಶ್ವರ ಶಾಖಾಮಠದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವು ಡಾ. ಮಹಾದೇವ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿದ್ದು, ಸುಭಾಷ್ ಹೊಂಬಳ, ವಕೀಲರ ಸಂಘದ ತಾಲೂಕು ಅಧ್ಯಕ್ಷರು, ಕುಕುನೂರು–ಯಲಬುರ್ಗಾ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಜಿಲ್ಲಾ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎಂ.ಜಿ. ಕಣವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಪ್ರಕಾಶ ಆನಂದಳ್ಳಿ (ನೂತನ ವಕೀಲರ ಸಂಘದ ಅಧ್ಯಕ್ಷರು, ಕೊಪ್ಪಳ), ಜಿ.ವಿ. ಸಜ್ಜನ (ಪ್ರಧಾನ ಕಾರ್ಯದರ್ಶಿ, ವಕೀಲರ ಸಂಘ ಕೊಪ್ಪಳ), ಅಂದಾನಗೌಡ ಮಾಲಿಪಾಟೀಲ (ಉಪಾಧ್ಯಕ್ಷರು, ವಕೀಲರ ಸಂಘ ಕೊಪ್ಪಳ), ಬಸವರಾಜ ಮೇಲಸಕೇರಿ (ಜಂಟಿ ಕಾರ್ಯದರ್ಶಿ, ವಕೀಲರ ಸಂಘ ಕೊಪ್ಪಳ), ಶ್ರೀಮತಿ ಪುಷ್ಪಾ ಬೇವೂರು (ಖಜಾಂಚಿ, ವಕೀಲರ ಸಂಘ ಕೊಪ್ಪಳ), ಶ್ರೀ ಆನಂದ ಉಳ್ಳಾಗಡ್ಡಿ (ಮಾಜಿ ಅಧ್ಯಕ್ಷರು, ವಕೀಲರ ಸಂಘ ಯಲಬುರ್ಗಾ– ಕುಕನೂರು), ಮಹಾಂತೇಶ ಬೂದಗುಂಪಿ (ಪ್ರಧಾನ ಕಾರ್ಯದರ್ಶಿ, ವಕೀಲರ ಸಂಘ ಯಲಬುರ್ಗಾ– ಕುಕನೂರು) ಹಾಗೂ ಬಸವರಾಜ ಜಂಗ್ಲಿ (ವಕೀಲರು, ಕುಕನೂರ) ಭಾಗವಹಿಸಲಿದ್ದಾರೆ.
ಸಭಾ ಸಂಚಾಲಕರಾಗಿ ರವಿ ನಿಂಗಪ್ಪ ಆಗೋಲಿ ಕಾರ್ಯನಿರ್ವಹಿಸಲಿದ್ದು, ಯಲಬುರ್ಗಾ ಹಾಗೂ ಕುಕನೂರು ವಕೀಲರ ಸಂಘದ ಸರ್ವ ಪದಾಧಿಕಾರಿಗಳು ಮತ್ತು ವಕೀಲ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ವರದಿಗಾರರು: ಚನ್ನಯ್ಯ ಹಿರೇಮಠ, ಕುಕನೂರು.


