Uncategorized

ಸರಕಾರ ಹಾಗೂಅಧಿಕಾರಿ ವರ್ಗ, ಸಂತರ ಭೂಮಿಯ ಮೇಲೆ ದೌರ್ಜನ್ಯ ಮಾಡುತ್ತಿದೆ,,* *ಕೊರ್ಟ್ ತಡೆ ಆದೇಶದ ಮದ್ಯೆಯು ಪ್ರಜಾಸೌಧ ಕಟ್ಟಡ ಭೂಮಿ ಪೂಜೆ ನಡೆಸಿದ ಜಿಲ್ಲಾಡಳಿ : ಪ್ರಭುಲಿಂಗ ದೇವರು ಆರೋಪ,,*

* ಸರ್ಕಾರ ಹಾಗೂ ಅಧಿಕಾರಿ ವರ್ಗ, ಸಂತ ಭೂಮಿಯ ಮೇಲೆ ದೌರ್ಜನ್ಯ ನಡೆಯುತ್ತಿದೆ,,*

*ಕೋರ್ಟ್ ತಡೆ ಆದೇಶದ ಮದ್ಯೆಯು ಪ್ರಜಾಸೌಧ ಕಟ್ಟಡ ಭೂಮಿ ಪೂಜೆ ನಡೆಸಿದ ಜಿಲ್ಲಾಡಳಿ : ಪ್ರಭುಲಿಂಗ ದೇವರು ಆರೋಪ,

ಕುಕನೂರು : ಹಿಂದುಗಳ ಆಸ್ತಿಗಳನ್ನು ಗುರುಯಾಗಿಸಿಕೊಂಡು ಹೇಳುವವರು ಕೇಳುವವರು ಯಾರು ಇಲ್ಲವೆಂದು ಸರ್ಕಾರ ಗುದ್ನೇಶ್ವರ ಮಠದ ಆಸ್ತಿಯ ಮೇಲೆ ತುಘಲಕ್ ದರ್ಬಾರ್ ನಡೆಸುತ್ತಿದೆ ಎಂದು ಗುದ್ನೇಪ್ಪನಮಠ ಹಾಗೂ ನಿಲಗುಂದಮಠದ ಪ್ರಭುಲಿಂಗ ದೇವರು ಆಕ್ರೋಶ ವ್ಯಕ್ತಪಡಿಸಿದರು.

ಅವರು ಶನಿವಾರದಂದು ಗುದ್ನೇಪ್ಪನಮಠದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೇವಾದಾರರು ಸಾಗುವಳಿ ಭೂಮಿಯನ್ನು ಮಾತನಾಡಿದರು ಸಾಗುವಳಿದಾರರಿಗೆ ನೀಡದೇ, ಅಧಿಕಾರಿಗಳು ಸೂಚಿಸಿದ ಜಾಗೆಯಲ್ಲಿ ಸೇವಾದಾರರಿಗೆ ಭೂಮಿ ಮಾಹಿತಿ ನೀಡಲಾಗಿದೆ. ನಾವು ಸಾಗುವಳಿ ಮಾಡುತ್ತಿರುವ ಜಾಗೆಗಳಲ್ಲಿ ಬೋರ್ ಗಳನ್ನು ಹಾಕಿದ್ದು, ಸಾಗುವಳಿ ಮಾಡುತ್ತಿರುವ ಎಲ್ಲಾ ದಾಖಲಾತಿಗಳು ನಮ್ಮ ಬಳಿ ಇವೆ ಎಂದು ಹೇಳಿದರು.

ಕೆರೆ, ತಿಪ್ಪೆ, ಒಡ್ಡುಗಳನ್ನು ಸೇವಾದಾರರ ಭೂಮಿ ಎಂದು ನಮೂದಿಸಿರುವುದು ಖಂಡನೀಯ. ಇದನ್ನು ಪ್ರಶ್ನಿಸಿ ಮೇಲ್ಮನವಿಗೆ ಹೋಗಿದ್ದೇವೆ. ಇದರ ಮದ್ಯೆ ಪ್ರಜಾಸೌಧಕ್ಕೆ ಭೂಮಿ ಪೂಜೆ ಮಾಡಿರುವುದು ಕಾನೂನು ಸಮ್ಮತವಲ್ಲ, ಈ ಭಕ್ತರ ಆಸ್ತಿ ಇದಕ್ಕೆ ಹಾನಿಯಾದರೇ ಅವರ ನಿರ್ಣಾಮ ಖಂಡಿತ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ನವೋದಯ ಶಾಲೆಗೆ 30ಎಕರೆಗೆ 40ಎಕರೆ ಉತಾರ ಹುಟ್ಟಿಸಿ ಭೂಮಿ ಕಬಳಿಕೆ ಮಾಡಿದೆ. ಆದರೆ ನವೋದಯ ಶಾಲೆಗೆ ಮುಜರಾಯಿ ಇಲಾಖೆಯಿಂದ ಬಾಡಿಗೆ ಹಣ ಎಲ್ಲಿ ಜಮೆಯಾಗುತ್ತಿದೆ ಎಂಬುದರ ಕುರಿತು ಇಲ್ಲಿಯವರೆಗೆ ತಿಳಿದಿಲ್ಲ, ಆದರೆ ಸ್ಪಷ್ಟೀಕರಣವಾಗಬೇಕು. ಧಾರ್ಮಿಕ ದತ್ತಿ ದೇಗುಲಗಳ ಹಣವನ್ನು ಅನ್ಯ ಕಾರ್ಯಗಳಿಗೆ ಉಪಯೋಗಿಸುವುದು ಕಾನೂನು ಅಪರಾಧವಾಗಿದೆ.

ಪ್ರಜಾ ಸೌಧ ಮಾಡಲು ಚೆಕಬಂದಿ ಇಲ್ಲವೇ ಇಲ್ಲ, ಸರಕಾರ ಅಧಿಕಾರಿ ವರ್ಗ, ಸಂತ ಭೂಮಿಯ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಖೇದಕರ ಸಂಗತಿಯಾಗಿದೆ. ಸಬಲರನ್ನು ಬಿಟ್ಟು ಅಬಲರನ್ನು ಗುರುತಿಸಿ ದೌರ್ಜನ್ಯ ಎಸಗುತ್ತಿರುವುದು ಸರಿಯಾದ ಕ್ರಮವಲ್ಲ. ಈ ಆಸ್ತಿ ಯಾವುದೇ ಕಾರಣಕ್ಕೂ ಖರೀದಿ ಅಥವಾ ಲಿಸ್ ಕೊಡಲು ಬರುವುದಿಲ್ಲ, ತಮಗೆ ಬೇಕಾದಂತೆ ನಕಾಶೆ ಸೃಷ್ಟಿಸಿ ನಮ್ಮ ಸೇವಾದಾರರಿಗೆ ಮೋಸ ಎಂದು ಆರೋಪಿಸಿದರು. ಕಾರ್ಟ್ ನಲ್ಲಿ ಕೇಸ್ ನಡೆಯುತ್ತಿತ್ತು, ಭೂಮಿ ಪೂಜೆ ನಡೆಸುತ್ತಾರೆ ಎಂದರೇ ಎಲ್ಲಾದರೂ ನ್ಯಾಯ.

ಆಭಿವೃದ್ದಿ ಹರಿಕಾರ ಸರಿಯಾಗಿದೆ, ಆದರೆ ಅಭಿವೃದ್ದಿ ಹೆಸರಿನಲ್ಲಿ ಮಠದ ಆಸ್ತಿಯಲ್ಲಿ ಸರ್ಕಾರಿ ಕಟ್ಟಡ ನಿರ್ಮಿಸಲು ಹೊರಟಿರುವುದು ಸರಿ ಕ್ರಮವಲ್ಲ, ತಾವು ಮನಸ್ಸು ಮಾಡಿದರೇ ಸರಕಾರಿ ಭೂಮಿ ಸಾಕಷ್ಟಿದ್ದು, ಅಲ್ಲಿ ಮಾಡಬಹುದು. 60ಎಕರೆ ಪರಾಭಾರೆಯಾದರು ಆದರ ಬಾಡಿಗೆ ಹಣ ಇಲ್ಲಿಯವರೆಗೆ ಎಲ್ಲಿದೆ ಎಂಬುದೇ ಗೊತ್ತಿಲ್ಲಾ ಎಂದರು.

ದೇಶದ ಧಾರ್ಮಿಕ ದತ್ತಿ ಇಲಾಖೆ ಜಾಗವನ್ನು ಧಾರ್ಮಿಕ ಕಾರ್ಯಕ್ಕೆ ಮಾತ್ರ ಬಳಕೆ ಮಾಡಬೇಕು ಎಂಬ ಆದೇಶವಿದೆ. ಆ ಪ್ರಕಾರ ಮೊದಲಿನಂತೆಯೇ ಗುದ್ನೇಶ್ವರ ಮಠದ ಎಲ್ಲಾ ಜಾಗವನ್ನು ಮಠಕ್ಕೆ ಒಪ್ಪಿಸುವ ಕಾರ್ಯವನ್ನು ಸರ್ಕಾರ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶರಣಯ್ಯ ಹುಣಸಿಮರದ, ವೀರಯ್ಯ ಬಂಡಿ, ರುದ್ರಯ್ಯ ಇನಾಮದಾರ, ಶರಣಯ್ಯ ಹಳೆಮನಿ, ಸಿದ್ದಲಿಂಗಯ್ಯ ಬಂಡಿ, ಚನ್ನಬಸಯ್ಯ ಧೂಪದ, ವೀರಯ್ಯ ಬಂಡಿ ಸೇರಿದಂತೆ ಇತರರು.

 

ವರದಿ ಚನ್ನಯ್ಯ ಹಿರೇಮಠ ಕುಕನೂರು

Related Articles

Leave a Reply

Your email address will not be published. Required fields are marked *

Back to top button
error: Content is protected !!