ಸೋಲಿಗ ಸಮುದಾಯದ ನೀಡಬೇಕಾದ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಗಮನ ಹರಿಸುತ್ತೇನೆ ಶಾಸಕ ಎಂ ಆರ್ ಮಂಜುನಾಥ್
ಚಾಮರಾಜನಗರ :ಶಾಗ್ಯ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ ಗಾಣಿಗ ಮಂಗಲ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಅದಿವಾಸಿ ಬುಡಕಟ್ಟು ವಸತಿ ಶಾಲೆ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಜಿಲ್ಲಾಡಳಿತ ಜಿಲ್ಲಾ ಪಂಚಾಯ್ತಿ, ಪರಿಶಿಷ್ಟ ಕಲ್ಯಾಣ ಇಲಾಖೆ ವತಿಯಿಂದ ಮಾಡುತ್ತಿರುವ ಈ ಕಾಮಗಾರಿ ಬೇಗ ಮುಗಿದು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಬೇಕು ಯಾರು ಕೂಡ ಶಿಕ್ಷಣದಿಂದ ವಂಚಿತರಾಗಿರಬಾರದು ಇಲ್ಲಿನ ಅಧಿಕಾರಿಗಳು ಮುಖಂಡರುಗಳು ಸೋಲಿಗ ಸಮಾಜದ ನಾಯಕರು ಗಮನ ಹರಿಸಬೇಕು , ಕಟ್ಟಡ ಪೂರ್ಣ ಆಗುವ ತನಕ ಮಕ್ಕಳ ದಾಖಲಾತಿ ಮಕ್ಕಳ ಅಂಕಿ ಅಂಶದ ಮಾಹಿತಿ ನೀಡಬೇಕು ಪಿ ಜಿ ಪಾಳ್ಯ ಹಾಗೂ ಹುತ್ತೂರು ಭಾಗಕ್ಕೂ ವಸತಿ ಶಾಲೆ ಅವಶ್ಯಕತೆ ಇದೆ ಎಂದು ತಿಳಿದು ಬಂದಿದೆ ಇದರ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಬೇಕು, ಸೋಲಿಗ ಜನಾಂಗಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಬೇಕಾಗಿದೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿದ ವೇಳೆ ಗಮನಕ್ಕೆ ತರಲಾಗಿತ್ತು ಅದರಂತೆ ಮಹದೇಶ್ವರ ಬೆಟ್ಟದ ಭಾಗದ ಕೆಲವು ಹಳ್ಳಿಗಳಿಗೆ ರಸ್ತೆ ವಿದ್ಯುತ್ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ ಇನ್ನು ಯಾವುದಾದರೂ ಸಮಸ್ಯೆಗಳು ಇದ್ದರು ಅದನ್ನ ನಮ್ಮ ಗಮನಕ್ಕೆ ತಗೆದು ಕೊಂಡು ಬನ್ನಿ ಎಂದು ತಿಳಿಸಿದ್ದರು.
ಈ ಸಂಧರ್ಭದಲ್ಲಿ ಪರಿಶಿಷ್ಟ ವರ್ಗದ ಜಿಲ್ಹಾ ಅಧಿಕಾರಿ ಮಂಜುಳಾ, ತಾಲ್ಲೂಕು ಅಧಿಕಾರಿ ನವೀನ್ ಮಠದ್, ಶಾಗ್ಯ ಬಾಬು, ಮಣಿಗರ್ ಪ್ರಸಾದ್, ಶಿವಮೂರ್ತಿ, ಹನೂರು ಮಂಜೇಶ್, ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರುಗಳು ಇನ್ನಿತ್ತರು ಇದ್ದರು.
ಸುರೇಶ್ ಗುಂಡಾಪುರ
ಚಾಮರಾಜನಗರ ಜಿಲ್ಲಾ ವರದಿಗಾರ
ಮೊಬೈಲ್ no 7022991304