Uncategorizedಜಿಲ್ಲಾ ಸುದ್ದಿ

ಸಂಘಟನೆ ಶೋಷಣೆಗೆ ಒಳಪಟ್ಟವವರಿಗೆ ಆಸರೆಯಾಗಿ ನಿಲ್ಲುತ್ತದೆ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ದೊಡ್ಡಿ ಇಂದವಾಡಿ ಸಿದ್ದರಾಜು

ಪಬ್ಲಿಕ್ ರೈಡ್ ನ್ಯೂಸ್

ಹನೂರು : ತಾಲ್ಲೂಕಿನ ರಾಮಪುರ ಹೋಬಳಿ ಗೆಜ್ಜೆಲಾನಾಥ ಗ್ರಾಮದಲ್ಲಿ ಹನೂರು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಹನೂರು ತಾಲ್ಲೂಕು ಸಂಘಟನೆ ಸಂಚಾಲಕರಾದ ಗೋಪಿಶೆಟ್ಟಿ ಪುರ ಗ್ರಾಮದ ಮಾರಿಯನ ನೇತೃತ್ವದಲ್ಲಿ ನೆಡೆದ ಸೇರ್ಪಡೆ ಕಾರ್ಯಕ್ರಮವನ್ನು ಅವರು ಉದ್ಘಾಟನೆ ಮಾಡಿ ಮಾತನಾಡಿದರು.

ಸಂಘಟನೆಯಿಂದ ಅನೇಕ ಉಪಯೋಗಗಳು ಇದ್ದು ಅವುಗಳನ್ನ ಸದುಪಯೋಗ ಪಡಿಸಿಕೊಳ್ಳಬೇಕು, ಸಂಘಟನೆ ಶೋಷಣೆಗೆ ಒಳಪಟ್ಟವವರಿಗೆ ಆಸರೆಯಾಗಿ ನಿಲ್ಲುತ್ತದೆ, ಬಾಬಾ ಸಾಹೇಬ್ ಅಂಬೇಡ್ಕರ್ ರವರ ಹೋರಾಟದಂತೆ ನಮ್ಮ ಹೋರಾಟಗಳು ಇರಬೇಕು ಅವರು ಇಲ್ಲದಿದ್ದರೆ ನಮ್ಮ ದಿನ ದಲಿತರ ಜೀವನ ಇನ್ನು ಕಷ್ಟದಲ್ಲಿ ಇರುತ್ತಿತ್ತು, ಅದರಂತೆ ನಾವು ಕೂಡ ಅವರ ಮಾರ್ಗದಲ್ಲಿ ಸಂಘಟನೆಯನ್ನು ಬಲವಾಗಿ ಕಟ್ಟಿ ತುಂಬಾ ಎತ್ತರಕ್ಕೆ ಬೆಳಸಬೇಕು, ನಿಮ್ಮ ನೋವು ಸಂಕಷ್ಟಗಳಿಗೆ ಸಮಸ್ಯೆಗಳನ್ನು ಪರಿಹಾರಿಸುವ ನಿಟ್ಟಿನಲ್ಲಿ ಸಂಘಟನೆ ಕೆಲಸ ಮಾಡುತ್ತದೆ, ಹಿಂದೆ ಈ ಭಾಗದಲ್ಲಿ ಸ್ಮಶಾನಕ್ಕೆ ಸ್ಥಳಗಳು ಇರಲಿಲ್ಲ, ನಮ್ಮ ಸಂಘಟನೆ ಹೋರಾಟದಿಂದ ದೊರಕುವಂತೆ ಮಾಡಲಾಗಿದೆ ಹೀಗೆ ಅನೇಕ ಸಾಮಾಜಿಕ ಸಮಸ್ಯೆಗಳನ್ನ ಪರಿಹಾರ ಮಾಡಲಾಗುತ್ತದೆ, ಹಾಗೆ ನಾವು ಸಂಘಟನೆಯಲ್ಲಿ ಇದ್ದೀವಿ ಎಂದು ದಬ್ಬಾಳಿಕೆ ದೌರ್ಜನ್ಯ ಅನ್ಯಾಯದ ಪರ ಹೋಗಬಾರದು ನಾವು ಯಾವಾಗಲು ನ್ಯಾಯದ ಪರವಾಗಿ ಇರಬೇಕು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಆಶಯಗಳನ್ನು ಅರಿತು ಒಳ್ಳೆ ಉದ್ದೇಶಗಳಿಗೆ ಸಂಘಟನೆಯನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಸಭೆಯ ಆಯೋಜಕರು ಗೋಪಿಶೆಟ್ಟಿ ಪುರದ ಮಾರಿಯನ್ ಮಾತನಾಡಿ ಹಿಂದೆ ಅನೇಕ ಸಾಮಾಜಿಕ ಸಮಸ್ಯೆಗಳು ನಮ್ಮಲ್ಲಿ ಇದ್ದವು ಇಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯಿಂದ ಪರಿಹಾರ ಸಿಕ್ಕಿದೆ ನಾವು ಸತ್ತರೆ ಹೂಳುವುದಕ್ಕೆ ಜಾಗ ಇರಲಿಲ್ಲ ಆದ್ರೆ ಇಂದು ನಮಗೆ ಸ್ಮಶಾನಕ್ಕೆ ಜಾಗ ಕೊಡಿಸಲಾಗಿದೆ ಇದ್ದರಿಂದ ನಮ್ಮ ಸಂಘಟನೆ ನಮಗೆ ಧೈರ್ಯ ತುಂಬಿದೆ ಎಂದು ತಿಳಿತಿಳಿದರು.

ಈ ಸಂಧರ್ಭದಲ್ಲಿ ಸ್ವ ಇಚ್ಛೆಯಿಂದ ಯುವಕರು ಯುವತಿಯರು ಪುರುಷರು ಮಹಿಳೆಯರು ಸೇರ್ಪಡೆಗೊಂಡರು ಅದರಲ್ಲಿ ಪ್ರಮುಖವಾಗಿ ಪೂವಯ್ಯ,ಚಿನ್ನಾರಾಜು, ಸಂತೋಷ್,ಸತ್ಯ ,ಕುಮಾರ , ಗುರುಮೂರ್ತಿ,ಕೃಷ್ಣ,ಸಲೀಂ,ಮಾದೇವ,ಚಿತ್ರ,ರಾಜೇಶ್ವರಿ, ಈಶ್ವರಿ, ಸೌಂದರ್ಯ, ಪಳನಿಯಮ್ಮ, ಮಹದೇವಮ್ಮ,,ಕಂದಮ್ಮ, ರಫೀಕ್, ಹರೀಶ್,ಸಂಪತ್,ಮಹೇಶ್, ಸೇರ್ಪಡೆ ಗೊಂಡರು.

ಈ ಸಂಧರ್ಭದಲ್ಲಿ ಸೇರ್ಪಡೆಗೊಂಡ ಯುವಕರು ಮಾತನಾಡಿ ಸಂಘಟನೆ ಬಲ ಗೊಳಿಸುವ ನಿಟ್ಟಿನಲ್ಲಿ ಅನ್ಯಾಯಕ್ಕೆ ತುಳಿತಕ್ಕೆ ಒಳಗಾದವರ ಪರವಾಗಿ ಹೋರಾಟ ಮಾಡುತ್ತೇವೆ ಎಂದು ಮಾತನಾಡಿದ್ದರು,

ಈ ಸಂಧರ್ಭದಲ್ಲಿ, ಹನೂರು ತಾಲ್ಲೂಕು ಸಂಚಾಲಕ ಮಾದೇಶ್ ಬೈರಾನಾಥ್, ಜಿಲ್ಲಾ ಸಂಘಟನೆ ಸಂಚಾಲಕ ಮಂಬಳ್ಳಿ ಹಿಂಡಿಗಯ್ಯ, ಹನೂರು ನಾಗರಾಜು, ಭಾಗ್ಯಮ್ಮಾ, ಎಂ ಜಿ ದೊಡ್ಡಿ ಮೂರೇಗೇಶ್, ವೀರ, ಹಾಗೂ ಇನ್ನಿತ್ತರು ಇದ್ದರು.

ವರದಿಗಾರರು, ಪಿ ಸುರೇಶ್ ಕುಮಾರ್, ಬಿ ಗುಂಡಾಪುರ 7022991304

Related Articles

Leave a Reply

Your email address will not be published. Required fields are marked *

Back to top button