ನವನಗರದ ವಿರಾಟ್ ಫೌಂಡೇಶನ್ ವತಿಯಿಂದ ವಿಶಿಷ್ಟವಾಗಿ ಹೋಳಿ ಹುಣ್ಣಿಮೆಯ ಆಚರಣೆ
ಪಬ್ಲಿಕ್ ರೈಡ್ ನ್ಯೂಸ್
ಹುಬ್ಬಳ್ಳಿ: ಸುಮಾರು ಆರು ವರ್ಷಗಳಿಂದ ಪ್ರತಿವರ್ಷ ವೃದ್ಧಾಶ್ರಮಗಳಲ್ಲಿ ಉಚಿತ ವೈದ್ಯಕೀಯ ಉಪಚಾರ, ಶುಗರ್ , ಬಿಪಿ ತಪಾಸಣೆ, ಆಶ್ರಮದ ವಾಸಿಗಳೊಂದಿಗೆ ಕೌನ್ಸಿಲಿಂಗ್, ಇಂತಹ ಕಾರ್ಯಕ್ರಮ ನಡೆಸುತ್ತಾ ಬಂದಿದೆ.
ಈ ಬಾರಿ ನವನಗರದ ಮೈತ್ರಿ ವೃದ್ಧಾಶ್ರಮದಲ್ಲಿ ಆಶ್ರಮಕ್ಕೆ ಬೇಕಾಗುವಂತ ಎರಡು ನೀರಿನ ಟ್ಯಾಂಕ್ ಗಳನ್ನು ಕೊಡುಗೆಯಾಗಿ ನೀಡಲಾಯಿತು.
ಮತ್ತು ಆಶ್ರಮದ ವಾಸಿಗಳಿಗೆ ಉಪಹಾರ, ಫಲಹಾರ, ಉಚಿತ ವೈದ್ಯಕೀಯ ತಪಾಸಣೆ, ಬಿಪಿ , ಶುಗರ್ ತಪಾಸಣೆ,
ಅವರೊಂದಿಗೆ ಓಕಳಿ ಆಟ ಆಡಿ ಅವರ ಜೀವನ ಚೈತನ್ಯವನ್ನು ಇಮ್ಮಡಿಸಲು ಪ್ರಯತ್ನಿಸಿದರು
ವಿರಾಟ್ ಫೌಂಡೇಶನ್ ಉಪಾಧ್ಯಕ್ಷ ಲಿಂಗರಾಜ ಧಾರವಾಡ ಶೆಟ್ಟರ್ ಮಾತನಾಡುತ್ತಾ ಭಾರತೀಯ ಸಂಸ್ಕೃತಿಯಾದ ಹೋಳಿ ಹುಣ್ಣಿಮೆಯನ್ನು ವಿಶಿಷ್ಟವಾಗಿ ವೃದ್ದಾಶ್ರಮದ ಹಿರಿಯ ನಾಗರಿಕರೊಂದಿಗೆ ಆಚರಿಸುತ್ತ ಇರುವುದು ನಮಗೆಲ್ಲ ಬಹಳ ಖುಷಿಯ ವಿಚಾರ ಅವರು ಕುಟುಂಬದಿಂದ ದೂರವಿದ್ದು ಮಾನಸಿಕ ಯಾತನೆ ಅನುಭವಿಸುವ ಅವರಲ್ಲಿ ಅವರಿಗೆ ಜೀವನೋತ್ಸಾಹ ತುಂಬುವ ಪ್ರಯತ್ನ ನಮ್ಮ ವಿರಾಟ್ ಫೌಂಡೇಶನ್ ಸದಸ್ಯರು ಮಾಡುತ್ತಿರುವುದು ಇನ್ನೊಬ್ಬರಿಗೆ ಮಾದರಿಯಾಗಿದೆ ಎಂದರು
ಇಂದಿನ ಆಚರಣೆಯಲ್ಲಿ ಉಪಾಧ್ಯಕ್ಷ ಲಿಂಗರಾಜ ಧಾರವಾಡ್ ಶೆಟ್ಟರ್ ಮಲ್ಲಿಕಾರ್ಜುನ ಜವಳಿ, ಪ್ರಸನ್ನ ದೇಶಪಾಂಡೆ, ನಾಗರಾಜ್ ಪತ್ತೆಪುರ್, ಶ್ರೀನಿವಾಸ ಸರ್ವದೆ, ವಿಲಾಸ್ ದೇಸಾಯಿ, ಅಶೋಕ್ ಪಿತಾಂಬರ್ ಶೆಟ್ಟಿ, ಸಂಜೀವ ಕೋರಿ, ರುದ್ರಪ್ಪ ವಿರುಪಣ್ಣವರ್, ರೇಖಾ, ಸವಿತಾ, ಶಂಭು ಮುಂತಾದವರು ಭಾಗವಹಿಸಿದ್ದರು.