ಮದ್ಯ ವಯಸ್ಕನನ್ನು ಕೊಂದ ಕಲಿಯುಗದ ಉತ್ತರಕುಮಾರರು ಅಂದರ
ಹುಬ್ಬಳ್ಳಿ: ಕಳೆದ ಎರಡು ದಿನಗಳ ಹಿಂದೆ ತಾರಿಹಾಳದ ವಾಜಪೇಯಿನಗರ ಲೋಟಸ್ ಬಾರ್ ಹತ್ತಿರ ಇರುವ ಚಿಕ್ಕು ತೋಟದಲ್ಲಿ ಷಣ್ಮುಖಪ್ಪ ಬಸಪ್ಪ ಹಡಪದ( 55 ) ಎಂಬ ಮಧ್ಯ ವಯಸ್ಕನನ್ನು ಬಿಯರ ಬಾಟಲ ನಿಂದ ಹೊಡೆದು ಕೊಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.
ಮೂರು ಜನ ಇಟಿಗಟ್ಟಿಯ ನಿವಾಸಿಗಳಾದ
- ಪ್ರವೀಣ ಈರಪ್ಪ ಕುಬಿಹಾಳ (25)
- ಹನಮಂತ ದ್ಯಾಮಣ್ಣ ಮಾಳಗಿಮನಿ(25)
- ಸಹದೇವ ಹನಮಂತಪ್ಪ ನೂಲ್ವಿ (24)
ಈ ಮೂವರು ಇದೆ ತಿಂಗಳ ದಿನಾಂಕ 7 ರಂದು ರಾತ್ರಿ ಸಮಯದಲ್ಲಿ ಆರೋಪಿಗಳು ತೋಟದಲ್ಲಿ ಸಾರಾಯಿ ಕುಡಿಯುವ ವಿಷಯಕ್ಕೆ ಸಂಬಂಧಿಸಿದಂತೆ ಜಗಳ ಮಾಡಿ ಷಣ್ಮುಖಪ್ಪ ನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ ಮತ್ತು ನಾಲ್ಕು ಮೊಬೈಲಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪೊಲೀಸ್ ಇನ್ಸಪೆಕ್ಟರ ಮುರಗೇಶ ಚನ್ನಣ್ಣವರ, ಹಾಗೂ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪೊಲೀಸ್ ಅಧೀಕ್ಷಕರಾದ ಡಾ|| ಗೋಪಾಲ ಬ್ಯಾಕೋಡ, ಹೆಚ್ಚುವರಿ ಎಸ್.ಪಿ ಎನ್.ವಿ.ಭರಮನಿ ಡಿ.ಎಸ್.ಪಿ ಶಿವಾನಂದ ಕಟಗಿ ಅವರ ಮಾರ್ಗದರ್ಶನದಲ್ಲಿ ತನಿಖೆ ಕೈಗೊಳ್ಳಲಾಗಿದೆ.