24ರಂದು ನಡೆಯುವ ಕೊಪ್ಪಳ ಬಂದ್ ಗೆ ಸಂಪೂರ್ಣ ಬೆಂಬಲ;ಮುಸ್ತಫಾ ಪಠಾನ್

ಗಂಗಾವತಿ: ಕೊಪ್ಪಳ ನಗರಕ್ಕೆ ಸಮೀಪ ಎಂಎಸ್‌ಪಿಎಲ್‌ನಿoದ ಬೃಹತ್ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ವಿರೋಧಿಸಿ ಇದೇ ದಿ ೨೪ ರಂದು ಕೊಪ್ಪಳ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸದರಿ ಬಂದ್‌ಗೆ ಕಲ್ಯಾಣ ಕರ್ನಾಟಕ ಕಟ್ಟಡ ನಿರ್ಮಾಣ ಹಾಗೂ ಇತರೆ ಕಾರ್ಮಿಕರ ಸೇವಾ ಸಂಘದಿoದ ಸಂಪೂರ್ಣ ಬೆಂಬಲ ನೀಡಿರುವದಾಗಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುಸ್ತಫಾ ಪಠಾನ್ ತಿಳಿಸಿದ್ದಾರೆ.
ಕೊಪ್ಪಳ ಸುತ್ತಮುತ್ತ ಈಗಾಗಲೇ ವಿವಿಧ ಕಾರ್ಖಾನೆಗಳಿಂದ ಹೊರಸೂಸುತ್ತಿರುವ ಧೂಳು, ಹೊಗೆ ಕೊಪ್ಪಳ ನಗರ ಹಾಗೂ ಸುತ್ತಮುತ್ತಲ ಗ್ರಾಮಗಳನ್ನು ಸಂಪೂರ್ಣ ಅವರಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸದ ಸರ್ಕಾರ ವಿಸ್ತರಣೆಗೆ ನೀಡಿದ ಅನುಮತಿ ಸಾಕಷ್ಟು ಸಂಶಯವನ್ನುAಟು ಮಾಡಿದೆ. ಕಾರ್ಖಾನೆ ಸ್ಥಾಪಿಸುವುದರಿಂದಾಗುವ ಸಮಸ್ಯೆಗಳ ಕುರಿತು ಸಾಧಕ-ಭಾದಕಗಳ ಕುರಿತು ಚರ್ಚಿಸಿ ಎಲ್ಲಾ ಸಂಘಟನೆಗಳು, ಪ್ರಗತಿಪರರ, ಸಾಹಿತಿಗಳು, ಸಾರ್ವಜನಿಕರು ಸರ್ಕಾರಕ್ಕೆ ಪರಿಣಾಮಕಾರಿಯಾಗಿ ತಿಳಿಸಲು ಕೊಪ್ಪಳ ಬಂದ್‌ಗೆ ಕರೆ ನೀಡಿದ್ದು, ಕಲ್ಯಾಣ ಕರ್ನಾಟಕ ಕಟ್ಟಡ ನಿರ್ಮಾಣ ಹಾಗೂ ಇತರೆ ಕಾರ್ಮಿಕರ ಸೇವಾ ಸಂಘದಿoದ ಸಂಪೂರ್ಣ ಬೆಂಬಲ ನೀಡಿರುವದಾಗಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುಸ್ತಫಾ ಪಠಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.