ನಂದಿ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿ ಅವಮಾನ ಮಾಡಿದ ಆಸಾಮಿ ಪೊಲೀಸರ ವಶಕ್ಕೆ

ವಿಜಯಪುರ ನ್ಯೂಸ್

ದೇವರ ಮೇಲಿನ ಕೋಪಕ್ಕೆ ನಂದಿ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ ಆಸಾಮಿ ಕೊನೆಗೂ ಅಂದರ್.

ಜಿಲ್ಲಾದ್ಯಂತ ಸಂಚಲನ ಮೂಡಿಸಿದ್ದ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಗೋಳಸಂಗಿ ಗ್ರಾಮದ ನಂದಿ ಬಸವೇಶ್ವರ ಮೂರ್ತಿಗೆ ಅವಮಾನ ಮಾಡಿದ ಆರೋಪಿಯನ್ನು ಪೋಲಿಸರು ಬಂದಿಸಿ ವಿಚಾರಿಸಿದಾಗ ಕಾರಣ ಬಿಚಿಟ್ಟಿದ್ದಾನೆ.

ಗೋಳಸಂಗಿ ಗ್ರಾಮದ ಬಸಪ್ಪ ಚಂದ್ರಾಮಪ್ಪ ದೊಡ್ಡಮನಿ (32)ಬಂಧಿತ ಆರೋಪಿಯಾಗಿದ್ದು ತನ್ನ ಸಮಸ್ಯೆ ಬಗೆಹರಿಸದ ದೇವರ ಮೇಲೆ ಸಿಟ್ಟು ಬಂದು ಈ ರೀತಿ ದೇವರ ಮೂರ್ತಿಗೆ ಚಪ್ಪಲಿ‌ ಹಾರ ಹಾಕಿರುವುದಾಗಿ ಬಾಯ್ಬಿಟ್ಟಿದ್ದಾನೆ.

ಆರೋಪಿ ಬಸಪ್ಪ 3ಲಕ್ಷ ಸಾಲ ಮಾಡಿದ್ದ ಜೊತೆಗೆ ಹೆಂಡತಿ ಜೋತೆ ಸಂಬಂಧವೂ ಹಾಳಾಗಿತ್ತು.ಈ ಸಮಸ್ಯೆ ಬಗೆಹರಿಸುವಂತೆ ನಂದಿ ಬಸವೇಶ್ವರ ಮೊರೆ ಹೋಗಿದ್ದ.ಸಮಸ್ಯೆ ಬಗೆಹರಿಯದ ಕಾರಣ ಹೀನ ಕೃತ್ಯ ಎಸಗಿದ್ದಾನೆ.

ಕಳೆದ ಶನಿವಾರ ದೇವಸ್ಥಾನದ ನಂದಿ ಮೂರ್ತಿಗೆ ಚಪ್ಪಲಿ ಹಾರ ಹಾಕಿ ಅವಮಾನ ಮಾಡಿದ್ದ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಕಲಿಸಿಕೊಂಡ ಬಸವನ ಬಾಗೇವಾಡಿ ಪೋಲಿಸರು,ಚಂದ್ರಾಮಪ್ಪ ದೊಡ್ಡಮನಿಯನ್ನು ಬಂದಿಸಿದ್ದರು.

ವರದಿ- ಬಿ ಹೊಸೂರು

Tags :

Leave a Reply

Your email address will not be published.

ಪಿಎಫ್ ಐ ಸೇರಿ ಹಲವು ಸಂಘಟನೆಗಳು ಭಾರತದಲ್ಲಿ ಬ್ಯಾನ್ - ಪಿಎಫ್ ಐ ಸೇರಿ ಹಲವು ಸಂಘಟನೆಗಳು ಭಾರತದಲ್ಲಿ ಬ್ಯಾನ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ
error: Content is protected !!