ಕಲಘಟಗಿ ಪಟ್ಟಣ ಪಂ.ಮುಖ್ಯ ಅಧಿಕಾರಿ ವಿರುದ್ಧ ಧಾರವಾಡಲ್ಲಿ ಪ್ರೊಟೆಸ್ಟ್…ಅಧಿಕಾರಿ ದಾನೇಶ್ವರಿ ಪಾಟೀಲ ವಜಾ ಮಾಡಲು ದಲಿತ ಸಂಘಟನೆ ಅಗ್ರಹ.
ಪಬ್ಲಿಕ್ ರೈಡ್ ನ್ಯೂಸ್ ಧಾರವಾಡ
ಧಾರವಾಡ: ಜಿಲ್ಲೆಯ ಕಲಘಟಗಿ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ದಾನೇಶ್ವರಿ ಪಾಟೀಲರು ದಲಿತರನ್ನು ಅವಮಾನಿಸುತ್ತಿದ್ದಾರೆ ಎಂದು ಆರೋಪಿಸಿ ಹಾಗೂ ಕೂಡಲೇ ವಜಾ ಮಾಡಬೇಕು ಎಂದು ಅಗ್ರಹಿಸಿ, ಧಾರವಾಡದಲ್ಲಿ ದಲಿತ ಸಂಘಟನೆಯ ಪದಾಧಿಕಾರಿಗಳು ಬೀದಿಗೆ ಇಳಿದು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ್ದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ದಲಿತ ಸಂಘರ್ಷ ಸಮಿತಿ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ದಾನೇಶ್ವರಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಅಧಿಕಾರಿಯಾಗಿರೋ ದಾನೇಶ್ವರಿ ಪಾಟೀಲರು ದಲಿತ ವಿರೋಧಿ ನಡೆಯನ್ನು ಪಟ್ಟಣ ಪಂಚಾಯತಿಯಲ್ಲಿ ಅನ್ನುಸರಿಸುತ್ತಿದ್ದಾರೆ, ಇದು ಖಂಡನೀಯ. ದಲಿತರು ಯಾರೇ ಹೊದರು ಅವರಿಗೆ ಸ್ಪಂದನೆ ನೀಡುವುದಿಲ್ಲ. ಇವರ ಈ ನಡೆಯಿಂದಾಗಿ ದಲಿತರು ಸರ್ಕಾರಿ ಸೌಲಭ್ಯದಿಂದ ದೂರ ಉಳಿಯುವ ಆಂತಕದ ವಾತವರಣ ಸೃಷ್ಟಿಯಾಗುತ್ತಿದೆ. ಹಾಗಾಗಿ ಈ ಕೂಡಲೇ ದಲಿತ ವಿರೋಧಿಯಾಗಿ ನಡೆದುಕೊಳ್ಳುತ್ತಿರುವ ದಾನೇಶ್ವರಿ ಪಾಟೀಲರನ್ನು ವಜಾ ಮಾಡಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಒಂದು ವೇಳೆ ನಿರ್ಲಕ್ಷ್ಯವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.