ಕಬ್ಬಿನ ಗದ್ದೆಯಲ್ಲಿ ಗಾಂಜಾ ಬೆಳೆದ ರೈತ
ಪಬ್ಲಿಕ್ ರೈಡ್ ನ್ಯೂಸ್ ಬೆಳಗಾವಿ
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ, ಕೋಡಣಿ ಗ್ರಾಮದಲ್ಲಿ ರೈತನೋಬ್ಬ, ಎತ್ತರವಾಗಿ ಬೆಳೆದಿರುವ ತನ್ನ ಕಬ್ಬಿನ ಗದ್ದೆಯಲ್ಲಿ, ಗಾಂಜಾ ಬೆಳೆದಿದ್ದರು ಪ್ರಕರಣ ಬೆಳಕಿಗೆ ಬಂದಿದೆ, ನಿಪ್ಪಾಣಿ ಪೊಲೀಸರ ವಿಶೇಷ ತಂಡ ಮಂಗಳವಾರ, ದಾಳಿ ನಡೆಸಿ ರೈತನನ್ನು ಬಂಧಿಸಿದೆ ಬಂಧಿತ ಆರೋಪಿಯಾದ, ಸದಾಶಿವ ಧೋಂಡಿರಾಮ್ ಖವ್ರೆ (55 ವರ್ಷ) ಎಂದು ಗುರುತಿಸಲಾಗಿದ್ದು, ಆತನಿಂದ ಸುಮಾರು 3 ಲಕ್ಷ ರೂಪಾಯಿ, ಕ್ಕಿಂತ ಅಧಿಕ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಅಂದಾಜಿಸಿ ಖವ್ರೆ ಅವರು ಕಬ್ಬಿನ ಜೊತೆಗೆ, ಗಾಂಜಾ ಮಾಧಕ್ ನಶೆ ಪದಾರ್ಥ ಎಂದು ತಿಳಿದ ನಂತರ, ಆ ಪ್ರದೇಶದ ರೈತರು ಸ್ಥಳದಲ್ಲಿ ಹೆಚ್ಚಿನ, ಸಂಖ್ಯೆಯಲ್ಲಿ ಗಾಬರಿಆಗಿ ಜಮಾಯಿಸಿದ್ದರು.
ಈ ಘಟನೆಯಿಂದಾಗಿ ಸ್ಥಳದಲ್ಲಿ ಬಾರಿ ಸಂಚಲನ ಮೂಡಿದೆ,ನಿಪ್ಪಾಣಿ ಗ್ರಾಮಾಂತರ ಪೊಲೀಸರ ಹೆಚ್ಚಿನ ಮಾಹಿತಿ, ಮೇರೆಗೆ ಸಿಪಿಐ ಬಿ ಎಸ್ ತಳವಾರ, ಚುನಾವಣಾಧಿಕಾರಿ ಜಗದೀಶ್ ಹುಲಗೆಜ್ಜಿ, ಹಾಗೂ ಇನ್ನುಳಿದ ಸಿಬ್ಬಂದಿ ವರ್ಗದವರು ಮಂಗಳವಾರ, ಮಧ್ಯಾಹ್ನ 1 ಗಂಟೆ ಸುಮಾರಿಗೆ, ಸುರೇಖಾ ವಿಜಯ್ ಕಾನಡೆ ಎಂಬವರ ಜಮೀನಿನಲ್ಲಿ, ಗಾಂಜಾ ಇದೆ ಎಂದು ದಾಳಿ ನಡೆಸಿ ಜಮೀನಿನಲ್ಲಿದ್ದ, ಸಮಾರು 8 ಕೆಜಿ 628 ಗ್ರಾಂ ಗಾಂಜಾ, ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. ಸದಾಶಿವ ಧೋಂಡಿರಾಮ್ ಖವ್ರೆ ಅವನನ್ನು ಬಂಧಿಸಿ,ನಿಪ್ಪಾಣಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ,ಈ ವೇಳೆ ನಿಪ್ಪಾಣಿ ಗ್ರಾಮಾಂತರ ಉಪ ನಿರೀಕ್ಷಕ ಮಣಿಕಂಠ ಪೂಜಾರಿ, ಹವಾಲ್ದಾರ್ ಶೇಖರ್ ಅಸೂದೆ, ಹೇಡ ಕಾನ್ಸ್ಟೇಬಲ್ ವಿನೋದ ಅಸೋದೆ, ರಾಘು ಮೇಲಗಡೆ, ಪ್ರಶಾಂತ ಕುದ್ರಿ, ಪ್ರಭು ಸಿದ್ಧಿಗಿಮಠ ಸೇರಿದಂತೆ, ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಬೆಳಗಾವಿ ವರದಿ
ಸಂತೋಷ್ ನಿರ್ಮಲೆ