ರಾಜ್ಯ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿ ನೋಡಿ ಜನ ಬೇಸತ್ತಿದ್ದಾರೆ- ಪ್ರಹ್ಲಾದ್ ಜೋಶಿ ಕಿಡಿ..
ಧಾರವಾಡ: ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿಯನ್ನು ಜನ ಗಮನಿಸಿದ್ದಾರೆ. ಜೊತೆಗೆ ಈಗಿನ ರಾಜ್ಯ ಸರ್ಕಾರದ ತುಷ್ಟೀಕರ ಹಾಗೂ ಅಭಿವೃದ್ಧಿ ವಿರೋಧಿ ನೀತಿಯನ್ನು ಜನ ನೋಡಿ ಈಗಾಗಲೇ ಬೇಸತ್ತು ಹೋಗಿದ್ದಾರೆ. ಹಾಗಾಗಿ ನಮಗೆ ಉತ್ತಮವಾದ ಬೆಂಬಲ ಸಿಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗುಟುರು ಹಾಕಿದ್ದಾರೆ.
ವೈ ಧಾರವಾಡ ತಾಲೂಕಿನ ಕಣವಿ ಹೊನ್ನಾಪುರ ಗ್ರಾಮದಲ್ಲಿ ಲೋಕಸಭಾ ಚುನಾವಣೆ ಪ್ರಚಾರದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಂದು ಮೂರು ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಮಾಡಲಾಯಿತು. ನಮಗೆ ಉತ್ತಮವಾದ ಬೆಂಬಲ ಸಿಗುತ್ತಿದೆ. ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ಜನತೆಯನ್ನು ತಪ್ಪು ದಾರಿಗೆ ಎಲಕೆಯುವ ಪ್ರಯತ್ನ ಮಾಡುತ್ತಿದೆ. ಜೊತೆಗೆ ಇತ್ತೀಚೆಗೆ ನಡೆದ ರಾಮೇಶ್ವರ ಕೆಫೆ ಘಟನೆಯಲ್ಲಿನ ಇವರ ನಡೆಯೇ ಅದಕ್ಕೆ ಸಾಕ್ಷಿಯಾಗಿದೆ. ಘಟನೆ ನಡೆದ ತಕ್ಷಣ ರಾಜ್ಯ ಸರ್ಕಾರದವದರು ಈ ಘಟನೆ ಸಿಲಿಂಡರ್ ಸ್ಫೋಟ ಎಂದು ಹೇಳಿತ್ತು, ಅಲ್ಲದೆ ಗೃಹ ಸಚಿವರು ವೃತಿಪರ ಕಾಂಪೀಟೇಶನ್‌ದಿಂದ ಆಗಿದೆ ಎಂದು ಘಟನೆ ಮುಚ್ಚಿ ಹಾಕುವ ಪ್ರಯತ್ನ ನಡೆಸಿದರು. ನಾವು ಶೂನ್ಯ ಸಹಿಷ್ಣುತೆಯೊಂದಿಗೆ ಘಟನೆ ಆರೋಪಗಳನ್ನು ಹಿಡಿದು ಹೆಡೆಮುರಿ ಕಟ್ಟಿದ್ದೇವೆ. ಆದರೆ ರಾಜ್ಯದಲ್ಲಿ ಮತ ಬ್ಯಾಂಕ್‌ಗಾಗಿ ಕಾಂಗ್ರೆಸ್ ಸರ್ಕಾರ ಉಗ್ರಗಾಮಿಗಳಿಗೂ ಅನುಕಂಪ ತೋರಿಸುವ ಕೆಲಸ ಮಾಡುತ್ತಿದೆ. ಸರಿಯಾದ ಮಾಹಿತಿಯೊಂದಿಗೆ ಬರುವ ದಿನಗಳಲ್ಲಿ ಜನರಿಗೆ ಈ ಸರ್ಕಾರದ ಉಗ್ರಗಾಮಿ ಪ್ರೇಂಡ್ಲೀ ನಡೆ ತಿಳಿಸುತ್ತೇವೆ. ಜೊತೆಗೆ ರಾಜ್ಯ ಸರ್ಕಾರದ ಗ್ಯಾರಂಟಿಗಳು ಚುನಾವಣೆಯ ನಂತರ ಮುಕ್ತಾಯವಾಗುತ್ತವೆ. ಈಗಾಗಲೇ ರಾಜ್ಯ ಅರ್ಥಿಕ ಸ್ಥಿತಿ ಅದೋಗತಿ ತಲುಪ್ಪಿದೆ. ಚುನಾವಣೆಉ ನಂತರ ಇದನ್ನು ಜನರೇ ನೋಡುತ್ತಾರೆ ಎಂದು ಕುಟುಕಿದರು.
ಹುಬ್ಬಳ್ಳಿ ಧಾರವಾಡ
ವರದಿ ಕಿರಣ ಬಳ್ಳಾರಿ