ಜ.21ಕ್ಕೆ ಅಂಜನಾದ್ರಿಗೆ ಶೋಭಾ ಕರಂದ್ಲಾಜೆ.. ಬೆಟ್ಟದ ಮೇಲೆ ಪೂಜೆ: ಪರಣ್ಣ ಮುನವಳ್ಳಿ

ಗಂಗಾವತಿ.
ಕೇಂದ್ರ ಸಚಿವರಾಗಿರುವ ಶೋಭಾ ಕರಂದ್ಲಾಜೆ ಅವರು ಜ.೨೧ ರಂದು ತಾಲೂಕಿನ ಐತಿಹಾಸಿಕ ಅಂಜನಾದ್ರಿ ಪರ್ವತಕ್ಕೆ ಆಗಮಿಸಲಿದ್ದು, ಮೆಟ್ಟಿಲು ಹತ್ತಿ ಬೆಟ್ಟದ ಮೇಲೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ ಪರ್ವತದ ಕೆಳಗಡೆ ಗ್ರಾಮದಲ್ಲಿ ನಡೆಯುವ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ತಿಳಿಸಿದ್ದಾರೆ.
ಜ.೨೨ ರಂದು ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮ ಮಂದಿರ ಉದ್ಘಾಟನೆ ನಿಮಿತ್ಯ ಅವರು ನಮ್ಮ ತಾಲೂಕಿನ ಅಂಜನಾದ್ರಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ ಆನೆಗೊಂದಿ ಅಥವಾ ಅಂಜನಾದ್ರಿ ಪರ್ವತದ ಕೆಳಗಡೆ ಕೇಂದ್ರ ಸರಕಾರದ ಕಾರ್ಯಕ್ರಮವಾಗಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಸಂಸದರು ಸೇರಿದಂತೆ ಜಿಲ್ಲೆ ಮತ್ತು ತಾಲೂಕಿನ ಅಧಿಕಾರಿಗಳು ಉಪಸ್ಥಿತರಿಲಿದ್ದಾರೆ. ನಮ್ಮ ಪಕ್ಷದ ನಾಯಕರಾಗಿರುವ ಸಚಿವ ಶೋಭಾ ಕರಾಂದ್ಲಾಜೆ ಅವರನ್ನು ಸ್ವಾಗತಿಸಲು ನಮ್ಮ ತಾಲೂಕಿನ ಬಿಜೆಪಿಯ ಎಲ್ಲಾ ಮುಖಂಡರು, ಕಾರ್ಯಕರ್ತರು ಪರ್ವತಕ್ಕೆ ಆಗಮಿಸಬೇಕು ಎಂದು ಪರಣ್ಣ ಮುನವಳ್ಳಿ ಕರೆ ನೀಡಿದ್ದಾರೆ.