ಶ್ರೀಹುಲಿಗೆಮ್ಮದೇವಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರಾಗಿ ವೀರೇಶ್ ಅಧಿಕಾರ ಸ್ವೀಕಾರ ಶಾಸಕ ಹಿಟ್ನಾಳ್‌ಗೆ ತೀವ್ರ ಮುಖಭಂಗ
ಶ್ರೀಹುಲಿಗೆಮ್ಮದೇವಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ
ಅಧ್ಯಕ್ಷರಾಗಿ ವೀರೇಶ್ ಅಧಿಕಾರ ಸ್ವೀಕಾರ ಶಾಸಕ ಹಿಟ್ನಾಳ್‌ಗೆ ತೀವ್ರ ಮುಖಭಂಗ
ಸಮರ್ಥವಾಣಿ ವಾರ್ತೆ
ಕೊಪ್ಪಳ,ಜ.10: ನ್ಯಾಯಾಲಯದ ನಿರ್ದೇಶನದಂತೆ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಬಿಜೆಪಿ ಮುಖಂಡ ವೀರೇಶ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಶಾಸಕ ರಾಘವೇಂದ್ರ ಹಿಟ್ನಾಳ್‌ಗೆ ತೀವ್ರ ಮುಖಭಂಗವಾಗಿದೆ.
ಕಲ್ಯಾಣ ಕರ್ನಾಟಕ ಭಾಗದ ಶಕ್ತಿ ದೇವತೆ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಎ ದರ್ಜೆ ಗೆ ಸೇರಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ವ್ಯವಸ್ಥಾಪನ ಸಮಿತಿ ರಚಿಸಲಾಗಿತ್ತು. ಸಮಿತಿಯಲ್ಲಿ ಪರಶುರಾಮ, ಸುಜಾತಾ, ಅನಿತಾ, ವೀರೇಶ್, ಶೇಖರಪ್ಪ ಶಿಂದೋಗಿ ಹಾಗೂ ಪಂಪಮಗೌಡ ಪಾಟೀಲ್ ಅವರನ್ನು ಸದಸ್ಯರನ್ನಾಗಿ ಅಂದಿನ ಸರ್ಕಾರ ಆದೇಶ ಹೊರಡಿಸಿತ್ತು.
ಈ ನಡುವೆ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಪ್ರಭಾವ ತೋರಿಸಲು ಮುಂದಾದ ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ಸರ್ಕಾರ ಆದೇಶದ ಪ್ರಕಾರ ವ್ಯವಸ್ಥಾಪನ ಸಮಿತಿ ರದ್ದು ಆಗಿದೆ. ಹೊಸ ಸಮಿತಿ ರಚಿಸಬೇಕು ಎಂದು ತಮ್ಮ ಲೆಟರ್‌ಹೆಡ್ ನಲ್ಲಿ ಉಲ್ಲೇಖಿಸಿ ಸರ್ಕಾರಕ್ಕೆ ಕಳುಹಿಸಿದ್ದರು.
ಯಾವುದೇ ಸರ್ಕಾರದ ಅವಧಿ ಯಲ್ಲಿ ರಚನೆಯಾದ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧಿಕಾರದ ಅವದಿ ಮೂರು ವರ್ಷಗಳು ಎಂಬ ಕಡ್ಡಾಯ ನಿಯಮವನ್ನು ಗಾಳಿಗೆ ತೂರಿದ ಶಾಸಕ ರಾಘವೇಂದ್ರ ಹಿಟ್ನಾಳ್ ಸಮಿತಿಗೆ ನೂತನ ಸದಸ್ಯರನ್ನು ನೇಮಿಸಬೇಕು ಎಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. ಇದನ್ನು ಪ್ರಶ್ನಿಸಿ ಸಮಿತಿಯ ಸದಸ್ಯರು ನ್ಯಾಯಾಲಯದ ಮೊರೆ ಹೋಗಿ ದ್ದರು. ನ್ಯಾಯಾಲಯವು ಸಮಿತಿ ಯನ್ನು ಮುಂದುವರಿಸಿ, ಅಧ್ಯಕ್ಷರ ಆಯ್ಕೆ ಮಾಡಲು ನಿರ್ಧರಿಸಿತ್ತು. ಅದರಂತೆ ಬುಧವಾರ ಅಧ್ಯಕ್ಷರ ಅಯ್ಕೆ ಜರುಗಿದ್ದು, ವೀರೇಶ್ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ದೇವಸ್ಥಾನ ಆಡಳಿತದಲ್ಲಿ ರಾಜಕೀಯ ಬೆರೆಸಲು ಮುಂದಾದ ಶಾಸಕ ರಾಘವೇಂದ್ರ ಹಿಟ್ನಾಳ ಅವರು ತೀವ್ರ ಮುಖಭಂಗ ಅನುಭವಿಸುವಂತಾಗಿದೆ.
ಈ ಸಂದರ್ಭsಲ್ಲಿ ತಾಲೂಕು ಪಂಚಾಯತ ಮಾಜಿ ಸದಸ್ಯ ಪಾಲಾಕ್ಷಪ್ಪ ಗುಂಗಾಡಿ ಇದ್ದರು.