ಕುಡಿಯುವ ನೀರಿಗೆ ತೊಂದರೆ ಉಂಟಾದರೆ ಆಯಾ ಗ್ರಾ.ಪಂ. ವಿರುದ್ಧ ಶಿಸ್ತು ಕ್ರಮ
ಕುಡಿಯುವ ನೀರಿಗೆ ತೊಂದರೆ ಉಂಟಾದರೆ ಆಯಾ ಗ್ರಾ.ಪಂ. ವಿರುದ್ಧ ಶಿಸ್ತು ಕ್ರಮ
ದೇವದುರ್ಗ ತಾಲೂಕು ಟಾಸ್ಕ್‌ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಕರೆಮ್ಮ ನಾಯಕ ಖಡಕ್ ಎಚ್ಚರಿಕೆ
ಸಮರ್ಥವಾಣಿ ವಾರ್ತೆ
ದೇವದುರ್ಗ,ಜ.11: ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿಗೆ ತೊಂದರೆಯಾದರೆ ಗ್ರಾ.ಪಂ. ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕಿ ಕರೆಮ್ಮ ಗೋಪಾಲಕೃಷ್ಣ ನಾಯಕ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ನಡೆದ ಟಾಸ್ಕ್‌ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು. ಗ್ರಾಮ ಪಂಚಾಯಿತಿಗೆ ಬಿಡುಗಡೆಯಾದ ೧೫ನೇ ಹಣಕಾಸು ಯೋಜನೆಯ ಹಣವನ್ನು ಖರ್ಚು ಮಾಡುವಾಗ ಕುಡಿಯುವ ನೀರಿಗೆ ಮೊದಲು ಆದ್ಯತೆ ನೀಡಬೇಕು ಹಾಗೂ ಎಲ್ಲಾ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಎಲ್ಲವೂ ಸರಿ ಇದೆ ಎಂಬಂತೆ ತಿಳಿಸುತ್ತಿದ್ದೀರಿ ನಾನು ಇನ್ನುಮೇಲೆ ಗ್ರಾ.ಪಂ. ಮತ್ತು ಗ್ರಾಮಗಳಿಗೆ ಭೇಟಿ ನೀಡಿದಾಗ ಕುಡಿಯುವ ನೀರಿನ ಸಮಸ್ಯೆಗಳು ಕಂಡುಬಂದಲ್ಲಿ ತಮ್ಮನ್ನೇ ಹೊಣೆ ಗಾರರನ್ನಾಗಿ ಮಾಡಲಾಗುವುದೆಂದು ಎಚ್ಚರಿಸಿದರು.
ಆರೋಗ್ಯ ಇಲಾಖೆಯ ವೈದ್ಯರ ಕಾರ್ಯವೈಕರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು ಗಲಗ ಮತ್ತು ಅರಕೆರ ಆರೋಗ್ಯ ಕೇಂದ್ರಗಳ ಲ್ಲಿ ವೈದ್ಯರೆ ಇಲ್ಲವೆಂದು ಸಾಕಷ್ಟು ದೂರು ಗಳು ಬಂದಿವೆ ತಾಲೂಕ ಆರೋಗ್ಯ ಅಧಿಕಾರಿ ಡಾ. ಬನದೇಶ್ ಅವರಿಗೆ ಸೂಚಿಸಿದರು. ಡಾ.ಬನದೇಶ್ ಅವರು ತಾಲೂಕಿನಲ್ಲಿ ೧೦೮ ಸೇರಿದಂತೆ ಒಟ್ಟು ೧೪ ಅಂಬುಲೆನ್ಸ್ ಗಳಿವೆ ಆದರೆ ಒಂದು ಆಂಬುಲೆನ್ಸ್ ದುರಸ್ತಿ ಯಲ್ಲಿದೆ ಎಂದು ಸಭೆಗೆ ತಿಳಿಸಿದರು ಇನ್ನು ಜೆಜೆ ಎಂ ಕಾಮಗಾರಿ ಕಳಪೆಯಿಂದ ಮತ್ತು ಅರ್ಧಂಬರ್ಧ ಕಾಮಗಾರಿ ಮಾಡಲಾಗಿದೆ ಎಂದು ಸಭೆಯಲ್ಲಿ ಪ್ರಸ್ತಾಪವಾಯಿತು.
ಚಿಕ್ಕಬೂದೂರು ಮತ್ತು ಸರ್ಕ್ಯಾಪುರ್ ಗ್ರಾಮಗಳಲ್ಲಿ ಜೆಜೆಎಮ್ ಕಾಮಗಾರಿ ಪೂರ್ಣ ಮಾಡದೇ ಗ್ರಾಮ ಪಂಚಾಯಿತಿಗೆ ಮಾಡಿದ್ದು ಯಾರು ಮತ್ತು ಮಾಡಿಕೊಂಡು ಯಾರು ಎಂದು ಶಾಸಕರು ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರ ಬರದೆ ಅಧಿಕಾರಿ ಗಳು ಬಿಟ್ಟರು ಮತ್ತು ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಮೂರು ಆರ್ ಓ ಕೂಡಿಸದೆ ಮಾಡಿದ್ದು ಕಳೆದ ಸಭೆಯಲ್ಲಿ ಪ್ರಸ್ತಾಪವಾಗಿತ್ತು. ಈ ಸಭೆಯಲ್ಲಿ ಅಧಿಕಾರಿಗಳು ಈ ವಿಷಯದಲ್ಲಿ ಏಜೆನ್ಸಿ ಡಿಪಾಸಿಟನ್ನು ಜಪ್ತಿ ಮಾಡಿಕೊಂಡು ಉಳಿದ ಮೂರು ಆರ್ ಓ ಪ್ಲಾಂಟ್ ಗಳನ್ನು ಸ್ಥಾಪಿಸ ಲಾಗುವುದು ಎಂದರು. ತಾಲೂಕಿನಲ್ಲಿ ಒಟ್ಟು ೯೪ ಆರು ಪ್ಲಾಂಟ್ ಗಳು ಚಾಲ್ತಿಯಲ್ಲಿ ಮತ್ತು ೫೨ ದುರಸ್ತಿಯಲ್ಲಿವೆ ಎಂದು ಕುಡಿ ಯುವ ನೀರು ಮತ್ತು ಜಲ ನೈರ್ಮಲ್ಯ ಅಧಿಕಾರಿಗಳು ತಿಳಿಸಿದರು ಪ್ರತಿ ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಬೇಕೆಂದು ಸೂಚಿಸಿದರು
ತಹಶೀಲ್ದಾರ್ ಚನ್ನಮಲ್ಲಪ್ಪ ಗಂಟೆ ತಾ.ಪಂ. ಇಓ ಬಸವರಾಜ ಹಟ್ಟಿ ಸಹಾಯಕ ನಿರ್ದೇಶಕ ಅಣ್ಣ ರಾವ್ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪ ವಿಭಾಗದ ಎ ಇ ಇ ಮತ್ತು ಜೆಸ್ಕಾಂ ಎ ಡಬಲ್ ಪಶು ವೈದ್ಯಕೀಯ ಸಹಾಯಕ ನಿರ್ದೇಶಕ ಕೃಷಿ ಸಹಾಯಕ ನಿರ್ದೇಶಕ ಸೇರಿದಂತೆ ಗ್ರಾ.ಪಂ. ಅಭಿವೃದ್ಧಿ ಸಭೆಯಲ್ಲಿ ಉಪಸ್ಥಿತರಿದ್ದರು