Blog

ಲಿಂಗಸುಗೂರಿನಲ್ಲಿ ರಾಜ್ಯಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನಕ್ಕೆ ಸಚಿವ ಸತೀಶ ಜಾರಕಿಹೊಳಿ ಚಾಲನೆ:ಮೌಢ್ಯ ಮುಕ್ತ ಹೊಸ ಭಾರತ ನಿರ್ಮಾಣ ಅಗತ್ಯ

ಲಿಂಗಸುಗೂರಿನಲ್ಲಿ ರಾಜ್ಯಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನಕ್ಕೆ ಸಚಿವ ಸತೀಶ ಜಾರಕಿಹೊಳಿ ಚಾಲನೆ
ಮೌಢ್ಯ ಮುಕ್ತ ಹೊಸ ಭಾರತ ನಿರ್ಮಾಣ ಅಗತ್ಯ

ಸಮರ್ಥವಾಣಿ ವಾರ್ತೆ
ಲಿಂಗಸುಗೂರು,ಡಿ.29: ಮೌಢ್ಯದಿಂದ ಹೊರಬಂದು ಹೊಸ ಭಾರತ ನಿರ್ಮಾಣ ಮಾಡಬೇಕಾಗಿದೆ, ಭಾರತ ಮೌಢ್ಯ ಬಿಟ್ಟು ವಿಜ್ಞಾನದಡೆಗೆ ಸಾಗಬೇಕಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ರಾಜ್ಯ ವ್ಶೆಜ್ಞಾನಿಕ ಸಂಶೋಧನಾ ಪರಿಷತ್ ಶುಕ್ರವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ೩ನೇ ವೈಜ್ಞಾನಿಕ ಸಮ್ಮೇಳನದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಸವಾದಿ ಶರಣರು, ಬುದ್ಧ ಬಸವ ಅಂಬೇಡ್ಕರ್ ವೈಜ್ಞಾನಿಕ ಸಮಾಜ ಕಟ್ಟುವ ಕೆಲಸ ಮಾಡಿದ್ದರು ಅವರ ದಾರಿಯಲ್ಲೇ ನಾವೆಲ್ಲರೂ ಸಾಗಬೇಕಾಗಿದೆ. ನಂಬಿಕೆಗಳು ಮೂಢನಂಬಿಕೆಯಾಗಿ ಪರಿವರ್ತನೆಯಾಗಿದೆ. ಮೂಡನಂಬಿಕೆ ವಿರುದ್ಧ ಕಳೆದ ೩೦ ವರ್ಷಗಳಿಂದ ಒಂಟಿಯಾಗಿ ಹೋರಾಟ ಮಾಡುತ್ತಿದ್ದೇನೆ. ನನ್ನ ಹೋರಾಟ ಮನಸ್ಸ ನೋಯಿಸಬೇಕೆಂಬ ಉದ್ದೇಶವಿಲ್ಲ ಮೌಢ್ಯಮುಕ್ತ ಸಮಾಜ ಕಟ್ಟುವ ಕನಸು ನನ್ನದಾಗಿದೆ. ವಿಜ್ಞಾನ ಇನ್ನೂ ಮತ್ತಷ್ಟು ವೈಜ್ಞಾನಿಕ ಸಮ್ಮೇಳನ ಇನ್ನೂ ಪ್ರತಿವರ್ಷವೂ ನಡೆಯಬೇಕು ರಾಜ್ಯದಲ್ಲಿ ಪ್ರತಿ ವರ್ಷ ವಿವಿಧ ನೂರು ಸಮ್ಮೇಳನಗಳು ನಡೆಯುತ್ತಿವೆ ಅದರಲ್ಲಿ ವೈಜ್ಞಾನಿಕ ಸಮ್ಮೇಳನ ಒಂದನೇಯ ಸ್ಥಾನದಲ್ಲಿರಬೇಕು. ಈ ಸಮ್ಮೇಳನಕ್ಕೆ ಸರ್ಕಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮೂಲಕ ೨೦ ಲಕ್ಷ ರೂ ಅನುದಾನ ನೀಡಿದೆ ಮುಂದಿನ ವರ್ಷದಿಂದ ೫೦ ಲಕ್ಷ ರೂ ಅನುದಾನ ನೀಡಬೇಕು. ನಾನು ಕೂಡಾ ಈ ಸಮ್ಮೇಳನದಿಂದ ಇನ್ನೂ ಮುಂದೆ ಪ್ರತಿ ವರ್ಷದ ಸಮ್ಮೇಳನಕ್ಕೆ ೨೫ ಲಕ್ಷ ರೂ ದೇಣಿಗೆ ನೀಡುತ್ತೇನೆ ಎಂದರು. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಲ್ಲಿ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ೧೦ ಎಕರೆ ಜಾಗದಲ್ಲಿ ವಿಜ್ಞಾನ ಗ್ರಾಮ ನಿರ್ಮಾಣ ಮಾಡುತ್ತಿದೆ ಅಲ್ಲಿ ಲೋಕೋಪಯೋಗಿ ಇಲಾಖೆವತಿಯಿಂದ ಸಮುದಾಯ ಭವನ ನಿರ್ಮಾಣಕ್ಕೆ ೫ ಕೋಟಿ ರೂ ಅನುದಾನ ಒದಗಿಸಲಾಗಿದೆ. ವಿಜ್ಞಾನ ಗ್ರಾಮಕ್ಕೆ ಸರ್ಕಾರ ಇನ್ನೂ ಹೆಚ್ಚಿನ ಅನುದಾನ ನೀಡಬೇಕು ಎಂದರು. ಮಾನವ ಬಂಧತ್ವ ವೇದಿಕೆವತಿಯಿಂದ ಬಡ ವಿದ್ಯಾರ್ಥಿಗಳಿಗಾಗಿ ಐಎಎಸ್,ಐಪಿಎಸ್, ಕೆಎಎಸ್, ಸೈನಿಕ, ಪೋಲಿಸ್ ನಂತಹ ಸ್ಪರ್ದಾತ್ಮಕ ತರಬೇತಿ ನೀಡಲು ಬೆಳಗಾವಿ ಜಿಲ್ಲೆಯ ಘಟಪ್ರಭ, ಹರಿಹರ ಹಾಗೂ ಕುಷ್ಟಗಿ ತಾಲೂಕಿನ ತಾವರಗೇರಾದಲ್ಲಿ ತರಬೇತಿ ಕೇಂದ್ರಗಳನ್ನು ತೆರೆಯಲಾಗಿದೆ. ಇನ್ನೂ ಕಲಬುರಗಿ, ಮೈಸೂರು, ತುಮುಕೂರು ಸೇರಿದಂತೆ ೬ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ಜನರ ಸೇವೆ ಮಾಡಲು ಇಚ್ಛೆ ಹೊಂದಿದ್ದೇನೆ ಎಂದರು.
ಸಮ್ಮೇಳನವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜ್ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಮುಖ ನಗರವಾಗಿ ಹೊರ ಹೊಮ್ಮುತ್ತಿರುವ ಬೆಂಗಳೂರಿನಲ್ಲಿ ವಿಜ್ಞಾನ ನಗರ [ಸೈನ್ಸ್ ಸಿಟಿ] ಸ್ಥಾಪನೆ ಮಾಡುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇ ನಮ್ಮ ಮನವಿಗೆ ಸ್ಪಂದಿಸಿ ಕೇಂದ್ರ ಸರ್ಕಾರ ವಿಜ್ಞಾನ ನಗರ ಸ್ಥಾಪನೆಗೆ ಅನುಮೋಧನೆ ನೀಡಿದೆ ಅತಿ ಶೀಘ್ರವೇ ೨೫ ಎಕರೆಯಲ್ಲಿ ವಿಜ್ಞಾನ ನಗರ ಸ್ಥಾಪನೆ ಮಾಡಲಾಗುವುದು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಟಗರಿ -೩ ವಿಜ್ಞಾನ ಕೇಂದ್ರ, ಮತ್ತು ರಾಯಚೂರು ಜಿಲ್ಲೆಯಲ್ಲಿ ೨೨.೨೫ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೆಟಗರಿ- ೨, ಟೈಪ್ ಬಿ ವಿಜ್ಞಾನ ಕೇಂದ್ರ ಸ್ಥಾಪನೆ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಟೈಪ್ ಬಿ ಕೆಟಗರಿ – ೩ ವಿಜ್ಞಾನ ಕೇಂದ್ರ ಸ್ಥಾಪನೆಯ ಪ್ರಸ್ತಾಪಗಳನ್ನ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಈ ಪ್ರಸ್ತಾವನೆಗಳಿಗೆ ಶೀಘ್ರದಲ್ಲಿ ಒಪ್ಪಿಗೆ ದೊರೆಯಲಿದೆ. ಜನರಲ್ಲಿರುವ ಮೂಢನಂಬಿಕೆ ಮತ್ತು ಅಂಧಶ್ರದ್ಧೆಯನ್ನು ತೊಲಗಿಸಲು, ಸಂಪತ್ತನ್ನು ವೃದ್ಧಿಸಲು ಹಾಗೂ ನೈಸರ್ಗಿಕ ಸಂಪನ್ಮೂಲಗಳು ಮತ್ತು ಜೀವ ವೈವಿಧ್ಯತೆಯನ್ನು ಕಾಪಾಡಿಕೊಳ್ಳಲು ಬಹಳ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿಯ ಎಲ್ಲಾ ರಂಗಗಳಲ್ಲೂ ಮುಖ್ಯವಾಹಿನಿಗೆ ತರುವುದು ಅವಶ್ಯವಿದ್ದು, ವೈಜ್ಞಾನಿಕ ಮುನ್ನಡೆ ಮತ್ತು ತಂತ್ರಜ್ಞಾನದ ಆವಿ?ರಗಳನ್ನು ಸಮಾಜದ ಒಳಿತಿಗಾಗಿ, ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಳಸಿಕೊಳ್ಳುವಂತಾಗಬೇಕಾಗಿದೆ. ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ವೈಚಾರಿಕ ದಿನವನ್ನಾಗಿ ಘೋಷಣೆ ಮಾಡಿದ್ದಾರೆ ಎಂದರು.
ಸಮ್ಮೇಳನದಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್. ಕಿರಣಕುಮಾರ ಮಾತನಾಡಿ, ಚಂದ್ರನ ದಕ್ಷಿಣ ದ್ರುವದಲ್ಲಿ ಲ್ಯಾಂಡರ್ ಇಳಿಸುವ ಮೂಲಕ ವಿಶ್ವದ ಯಾವ ರಾ?ವೂ ಮಾಡದ ಸಾಧನೆಯನ್ನು ಭಾರತ ಮಾಡಿದೆ. ಇದು ಭಾರತೀಯರು ಹೆಮ್ಮೆ ಪಡುವ ವಿ?ಯವಾಗಿದೆ. ಚಂದ್ರಯಾನ-೩ ಅತ್ಯಂತ ವಿಶಿ? ಕಾರ್ಯಾಚರಣೆ. ನಿಜಕ್ಕೂ ಭಾರತೀಯ ವಿಜ್ಞಾನಿಗಳ ಕಾರ್ಯ ಈ ಜಗತ್ತು ಕೊಂಡಾಡಿದೆ. ಈ ಮೊದಲು ಚಂದ್ರಯಾನ-೧ ದಲ್ಲಿ ಚಂದ್ರನ ಅಂಗಳದಲ್ಲಿ ನೀರಿನ ಕುರುಹು, ನೀರಿನ ಅಂಶಗಳನ್ನು ಪತ್ತೆ ಮಾಡಿದೆ. ಜಗತ್ತಿನಲ್ಲಿ ಈ ಕಾರ್ಯ ಮಾಡಿದ ಮೊದಲ ದೇಶ ಭಾರ ಸೂರ್ಯನ ಅಧ್ಯಯನಕ್ಕೆ ಮುಖ ಮಾಡಿದ್ದು, ಅನೇಕ ಕ?ಗಳ ಮಧ್ಯೆಯೂ ಭಾರತೀಯ ಬಾಹ್ಯಾಕಾಶ ಸಂಸ್ಥೆ ತನ್ನ ವಿಶಿ? ಕಾರ್ಯಗಳ ಮೂಲಕ ಜಗತ್ತಿನ ಗಮನ ಸೆಳೆದಿದೆ. ದೇಶ ಪ್ರಸ್ತುತ ೫ನೇ ಆರ್ಥಿಕತೆಗೆ ಬಂದಿದೆ. ಆರ್ಥಿಕತೆ ಮೊದಲ ಸ್ಥಾನದಲ್ಲಿ ಬರಬೇಕಾದರೆ ದೇಶದ ವಿಜ್ಞಾನ ಮತ್ತುಷ್ಟು ಬೆಳವಣಿಗೆಯಾಗಬೇಕು. ವಿದ್ಯಾರ್ಥಿಗಳಿಗೆ ವಿಜ್ಞಾನದ ಪರಿಕಲ್ಪನೆ ಹೊಂದಬೇಕಾಗಿದೆ ಎಂದರು.
ಸಮ್ಮೇಳನದಲ್ಲಿ ಕಲ್ಯಾಣಸಿರಿ ಸ್ಮರಣ ಸಂಚಿಕೆ, ವಿಜ್ಞಾನ ಸಿರಿ ಮಾಸಪತ್ರಿಕೆ, ಹೊಸ ಕ್ಯಾಲೆಚಿಡರ್, ೨೦೨೪ರ ದಿನಚರಿ ಬಿಡುಗಡೆಗೊಳಿಸಲಾಯಿತು. ಹಿರಿಯ ಸಾಹಿತಿ ಬಿ.ಟಿ.ಲಲಿತಾ ನಾಯಕ್, ಅಚಿತರಾಷ್ಟ್ರೀಯ ಕೌಶಲ್ಯ ತರಬೇತುದಾರ ಚೇತನ್‌ರಾಮ್, ಲೈಂಗಿಕ ಅಲ್ಪಸಂಖ್ಯಾತರ ಪರ ಹೋರಾಟಗಾರ್ತಿ ಅಕಾಲಿ ಪದ್ಮಶಾಲಿ, ಹಿರಿಯ ಹೋರಾಟಗಾರ ಆರ್.ಮಾನಸಯ್ಯ ಅವರಿಗೆ ಜೀವಮಾನ ಸಾಧನ ಪ್ರಶಸ್ತಿ, ಬಸಮ್ಮ ತೆಗ್ಗಿನಮನಿ, ಜಯಪ್ರಸಾದ್, ರಕ್ಷಿತಾ ಭರತ್‌ಕುಮಾರ ಈಟಿ, ಸುಧಾ, ಸೇರಿದಂತೆ ಇನ್ನಿತರರಿಗೆ ವಿಶಿಷ್ಟ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮ್ಮೇಳನದಲ್ಲಿ ಶಾಸಕರಾದ ಮಾನಪ್ಪ ವಜ್ಜಲ್, ಹಂಪಚಿi ನಾಯಕ, ಮಾಜಿ ಸಚಿವ ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕ ಡಿ.ಎಸ್.ಹೂಲಗೇರಿ, ಮುಖಂಡರಾದ ಅಮರಗುಂಡಪ್ಪ ಮೇಟಿ, ವೈಜ್ಞಾನಿಕ ಸಂಶೋಧನಾ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್, ಅಪರ ಜಿಲ್ಲಾಧಿಕಾರಿ ಡಾ.ದುರಗೇಶ, ಸಹಾಯಕ ಆಯುಕ್ತ ಅವಿನಾಶ ಶಿಂಧೆ, ತಹಶೀಲ್ದಾರ ಶಂಶಾಲಂ, ಲೇಪಾಕ್ಷಿ, ಕೆ.ನಾಗೇಶ, ಭೀಮಣ್ಣ ನಾಯಕ, ಚಂದ್ರಶೇಖರ್ ರೆಡ್ಡಿ, ವಿ.ಟಿಸ್ವಾಮಿ, ಚಿಕ್ಕಹನುಮಂತೇಗೌಡ, ಚಿರಂಜೀವಿ ರೋಡಕರ್, ನಬಿಸಾಬ ಆನಾಹೊಸೂರು ಹಾಗೂ ಇನ್ನಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button