ಅಂಜನಾದ್ರಿ ಯಾತ್ರಿಕರಿಗೆ ಕಿರಕ್. ಕಿಡಿಗೆಡಿಗಳಿಂದ ಹಲ್ಲೆ: ದೂರು ಸಲ್ಲಿಕೆ ಬಸ್ ಸಮೇತ ಠಾಣೆಗೆ ಬಂದ ಯುಪಿ ಪ್ರವಾಸಿಗರು
ಗಂಗಾವತಿ.
ಅಂಜನಾದ್ರಿ, ಪಂಪಾಸರೋವರ ಮತ್ತಿತ್ತರ ಕಿಷ್ಕಿಂಧಾ ಭಾಗದ ತೀರ್ಥ ಕ್ಷೇತ್ರಗಳ ದರ್ಶನಕ್ಕೆ ಬಂದಿರುವ ಉತ್ತರ ಭಾರತದ ಝಾನ್ಸಿ ಜಿಲ್ಲೆಯ ಯಾತ್ರಾರ್ತಿಗಳಿಗೆ ಕೆಲವು ಸ್ಥಳಿಯ ಕಿಡಿಗೆಡಿಗಳು ಹಲ್ಲೆ ಮಾಡಿರುವ ಘಟನೆ ನಡೆದಿದೆ. ಘಟನೆ ನಡೆಯುತ್ತಿದ್ದಂತೆ ಐದಾರು ಬಸ್ ಗಳಲ್ಲಿದ್ದ ಯುಪಿಯ ನೂರಾರು ಪ್ರವಾಸಿ ಯಾತ್ರಿಕರು ನಗರದ ಗ್ರಾಮೀಣ ಪೊಲೀಸ್ ಠಾಣೆಗೆ ಬಂದು ತಮ್ಮ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿದ್ದಾರೆ.
ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶ ರಾಜ್ಯದಿಂದ ಧಾರ್ಮಿಕ ಕ್ಷೇತ್ರಗಳ ವೀಕ್ಷಣೆಗೆ ಐದು ಬಸ್ ಗಳಲ್ಲಿ ಬಂದಿದ್ದು ದಿನಾಂಕ:-02-01-2024 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಕೊರಮ್ಮ ಕ್ಯಾಂಪ್ (ಬಸವನದುರ್ಗ) ಹತ್ತಿರ ಬರುತ್ತಿರುವಾಗ KA-37A-0069 ಆಟೋಕ್ಕೆ ತಾಗಿದೆ ಎಂಬ ಕಾರಣಕ್ಕೆ ಆಟೋದ ಚಾಲಕ ಹಾಗೂ ಇತರರು ಹೊರರಾಜ್ಯದ ಬಸ್ ಚಾಲಕರೊಂದಿಗೆ ವಾದ- ವಿವಾದ ನಡೆದು ಜಗಳ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಹೊರರಾಜ್ಯದ ವಾಹನಗಳ ಗ್ಲಾಸ್ ಗಳನ್ನು ಒಡೆದಿದ್ದು ಕೆಲವರ ಮೇಲೆ ಹಲ್ಲೆ ಮಾಡಲಾಗಿದೆ.
ತಡ ರಾತ್ರಿವರೆಗೂ ಉತ್ತರ ಭಾರತದ ಯಾತ್ರಿಕರು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಠಾಣೆಯಲ್ಲಿ ಜಮಾಯಿಸಿ ದೂರು ಸಲ್ಲಿದರು. ಪ್ರವಾಸಿಗರ ದೂರನ್ನು ಪರಗಣಿಸಿರುವ ಗ್ರಾಮೀಣ ಠಾಣೆ ಪಿಐ ಪ್ರಕರಣ ದಾಖಲಿಸಿ ಪರಿಶೀಲಿಸಿ ತಪ್ಪತಸ್ಥರನ್ನು ಗುರುತಿಸಿ ಕ್ರಮ ಕೈಗೊಳ್ಳುವುದಾಗಿ ಯಾತ್ರಿಕರಿಗೆ ಭರವಸೆ ನೀಡಿದರು. ವಿಷಯ ತಿಳಿದು ಡಿವೈಎಸ್ ಪಿ ಸಿದ್ದನಗೌಡ ಪಾಟೀಲ್ ಠಾಣೆಗೆ ಆಗಿಮಿದ್ದು ಘಟಣೆಯನ್ನು ಪರಿಶಿಸುತ್ತಿದ್ದಾರೆ. ಈ ನಡುವೆ ಘಟನೆಗೆ ಸಂಬಂಧಿಸಿದಂತೆ ನಾಗರಾಜ ಎಂಬ ಸ್ಥಳೀಯ ವ್ಯಕ್ತಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಉತ್ತರ ಭಾರತದಿಂದ ಬಂದಿರುವ ತಮಗೆ
ಕಿಷ್ಕಿಂಧಾ ಭಾಗದಲ್ಲಿ ಕೆಲವು ಕಿಡಿಗೇಡಿಗಳು ವಿನಾಕಾರಣ ತೊಂದರೆ ನೀಡಿ ಹಲ್ಲೆ ನಡೆಸಿ ಬಸ್ ಗಳಿಗೆ ಜಖಂ ಮಾಡಿದ್ದಾರೆ. ಪ್ರವಾಸಿಗರ ಮೇಲೆ ಹಲ್ಲೆ ಮಾಡಿ, ದರೊಡೆ ಮಾಡಲು ಮುಂದಾಗುತ್ತಿದ್ದಾರೆ. ಈ ರೀತಿ ತೊಂದರೆಯಾಗದಂತೆ ನಿಗಾವಹಿಸಬೇಕು ಎಂದು ಕೆಲ ಪ್ರವಾಸಿಗರು ಅಗ್ರಹಿಸಿದರು.