ಪಾಕ್‌ಪರ ಘೋಷಣೆ: ಸಿಂಗನಾಳ ಮಹೇಶ ಆಕ್ರೋಶ- ಬಂಧಿತ ಆರೋಪಿಗಳಿಗೆ ಕಠಿಣ ಕ್ರಮಕ್ಕೆ ಅಗ್ರಹ
ಗಂಗಾವತಿ.
ಪ್ರಜಾಪ್ರಭುತ್ವದ ದೇಗುಲವಾಗಿರುವ ವಿಧಾನಸೌಧದಲ್ಲಿ ಶತೃ ರಾಷ್ಟ್ರವಾಗಿರುವ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ವಾಣಿಜ್ಯೋಧ್ಯಮಿ ಸಿಂಗನಾಳ ಮಹೇಶ ಆಕ್ರೋಪಡಿಸಿದ್ದು, ದೇಶ ವಿರೋಧಿ ಘೋಷಣೆ ಕೂಗಿದವರಪರವಾಗಿ ಕಾಂಗ್ರೆಸ್ ಸರಕಾರ ಮೃದು ಧೋರಣೆ ತೋರಿದ್ದರೂ ರಾಜ್ಯದ ಪೊಲೀಸರು ನಿರ್ಲಕ್ಷ ಮಾಡದೇ ಆರೋಪಿಗಳನ್ನು ಬಂಧಿಸಿರುವುದು ಶ್ಲಾಘನೀಯವಾಗಿದೆ. ಬಂಧಿತ ಆರೋಪಿಗಳಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಅವರು ಮಾಧ್ಯಮಗಳಿಗೆ ಪ್ರಕಟಣೆ ನೀಡಿ ಪಾಕ್‌ಪರ ಘೋಷಣೆ ಕೂಗಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ದೇಶದ ಮಹತ್ವವಾದ ಸಂಸತ್ತಿಗೆ ಪ್ರವೇಶ ಮಾಡಲು ಕಾಂಗ್ರೆಸ್ ಪಕ್ಷದ ನಾಸೀರ್‌ಖಾನ್ ಅವರು ರಾಜ್ಯಸಭೆ ಚುನಾವಣೆಯಲ್ಲಿ ಆಯ್ಕೆಯಾಗುತ್ತಿದ್ದಂತೆ ದೇಶ ವಿರೋಧಿ ಶಕ್ತಿಗಳು ತಲೆ ಎತ್ತುವ ಕೆಲಸ ಮಾಡಿದ್ದಾರೆ. ರಾಜ್ಯಸಭೆ ಸದಸ್ಯನ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿ ದೇಶ ದ್ರೋಹಿ ಮನಸ್ಥಿತಿಯನ್ನು ಬಹಿರಂಗಪಡಿಸಿದ್ದಾರೆ. ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದರೂ ಸರಕಾರದ ಹಲವು ಸಚಿವರು ಇಂತಹ ಘೋಷಣೆ ಕೂಗಿಲ್ಲ ಎಂದು ಸಮರ್ಥನೆ ಮಾಡಿಕೊಂಡು ಮಾಧ್ಯಮಗಳ ವಿರುದ್ಧವೇ ಆರೋಪ ಮಾಡಿದ್ದರು. ಆದರೆ ಕಳೆದ ದಿನ ಎಫ್‌ಎಸ್‌ಎಲ್ ವರದಿ ಬಹಿರಂಗವಾಗಿ ರಾಜ್ಯದ ಪೊಲೀಸರು ಮೂರು ಜನ ಆರೋಪಿಗಳನ್ನು ಬಂಧಿಸಿ ಕೊನೆಗೂ ದೇಶದ್ರೋಹದ ಗೋಷಣೆ ಕೂಗಿರುವುದನ್ನು ದೃಢಪಡಿಸಿದ್ದಾರೆ. ಸರಕಾರ ಮತ್ತು ಪೊಲೀಸ್ ಅಧಿಕಾರಿಗಳು ಇಂತಹ ಆರೋಪಿಗಳಪರವಾಗಿ ಮೃದು ಧೋರಣೆ ತೋರದೇ ಅವರನ್ನು ಶಾಸ್ವತವಾಗಿ ಜೈಲುವಾಸ ಅನುಭವಿಸುವಂಹ ಶಿಕ್ಷೆಗೆ ಗುರಿಪಡಿಸಬೇಕು. ಮತ್ತು ಪಾಕಿಸ್ತಾನ ಪರವಾದ ಘೋಷಣೆ ಕೂಗುವವರಿಗೂ ಕಠಿಣ ಶಿಕ್ಷೆ ಕೈಗೊಳ್ಳುವ ಕಾನೂನು ಜಾರಿ ಮಾಡಬೇಕು ಎಂದು ಮಹೇಶ ಸಿಂಗನಾಳ ಅಗ್ರಹಿಸಿದ್ದಾರೆ.