ಕುಕುನೂರಿನ ಮಂಗಳೂರು ಗ್ರಾಮದಲ್ಲಿ ಹೆಣ್ಣು ಮಕ್ಕಳ ಪ್ರೌಢಶಾಲೆ ಗ್ಯಾಸ್ ಗೌಡನ್ ಪಕ್ಕದಲ್ಲಿ; ಗ್ರಾಮಸ್ಥರ ಆಕ್ರೋಶ
ಕೊಪ್ಪಳ ಜಿಬಿ ನ್ಯೂಸ್ ಕನ್ನಡ ಸುದ್ದಿ: ಕುಕುನೂರು ತಾಲೂಕಿನ ಮಂಗಳೂರು ಗ್ರಾಮಕ್ಕೆ ಮಂಜೂರು ಆಗಿರುವ ಹೆಣ್ಣು ಮಕ್ಕಳ ಪ್ರೌಢಶಾಲೆಯ ಕಟ್ಟಡವನ್ನು ಗ್ಯಾಸ್ ಗೌಡನ್ ಪಕ್ಕದಲ್ಲಿ ಕಟ್ಟುತ್ತಿರುವುದು ವಿಪರ್ಯಾಸ ಒಂದು ವೇಳೆ ಯಾವುದೇ ರೀತಿಯ ಅವಗಡ ಸಂಭವಿಸಿದರು ಕೂಡ ವಿದ್ಯಾರ್ಥಿಗಳ ಪ್ರಾಣಕ್ಕೆ ಹಾನಿಯಾಗುವುದು ಖಚಿತ, ವಿದ್ಯಾರ್ಥಿಗಳ ಯೋಗ ಕ್ಷೇಮ ನೋಡಿಕೊಂಡು ಕಟ್ಟಡಗಳನ್ನು ಕಟ್ಟುತ್ತಾರೆ ಆದರೆ ಇಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ ಎನ್ನುವುದು ಎದ್ದು ಕಾಣುತ್ತಿದೆ.
ಕುಕನೂರು ತಾಲೂಕಿನ ಮಂಗಳೂರು ಗ್ರಾಮಕ್ಕೆ ಮಂಜೂರು ಆಗಿರುವ ಹೆಣ್ಣು ಮಕ್ಕಳ ಪ್ರೌಢಶಾಲೆಯ ಕಟ್ಟಡ ಕಾಮಗಾರಿಯ ಗುದ್ದಲಿ ಪೂಜೆಯನ್ನು ದಿನಾಂಕ : 21-10-2024 ಸೋಮವಾರದಂದು ಬೆಳಿಗ್ಗೆ 10.00 ಗಂಟೆಗೆ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನೆರವೇರಿಸಲಾಗುವುದೆಂದು ಸಾಮಾಜಿಕ ಜಾಲತಾಣಗಳಿಲ್ಲಿ ಹಾಗೂ ಊರಿನಲ್ಲಿ ಡಂಗೂರ ಸಾರಲಾಗಿದೆ ಪುಯುಕ್ತ ಸದರಿ ಸ್ಥಳವು ಭಾರತ್ ಗ್ಯಾಸ್ ಗೋಡಾನ್ ಗೆ ಕೇವಲ 10 ಮೀಟರ್ ದೂರದಲ್ಲಿದೆ. ಈಗಾಗಲೇ ಸದರಿ ಸ್ಥಳದಲ್ಲಿ ಪದವಿ ಪೂರ್ವ ಕಾಲೇಜು ಇರುವುದು ದುರ್ದೈವದ ಸಂಗತಿ, ಆದರೆ ಈಗ ಗೊತ್ತಿದ್ದು ಅದೇ ಸ್ಥಳದಲ್ಲಿ ಹೆಣ್ಣು ಮಕ್ಕಳ ಪ್ರೌಢ ಶಾಲೆಯನ್ನು ವಿದ್ಯಾರ್ಥಿಗಳ ಸುರಕ್ಷತಾ ದೃಷ್ಠಿಯಿಂದ ಕಟ್ಟುವುದು ಸೂಕ್ತವಲ್ಲ ಎಂದು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ pwd AEE ಅವರಿಗೆ ದಿನಾಂಕ : 19-10-2024 ರಂದು ಖುದ್ದಾಗಿ ನಾವೆಲ್ಲಾರೂ ಭೇಟಿಯಾಗಿ ಹಾಗೂ ಲಿಖಿತವಾಗಿ ಆಕ್ಷೇಪಣೆ ಕೊಟ್ಟಿರುತ್ತೇವೆ.
ನಾವು ಲಿಖಿತವಾಗಿ ಹಾಗೂ ಮೌಖಿಕವಾಗಿ ಸದರಿ ಸ್ಥಳದಲ್ಲಿ ಹೆಣ್ಣು ಮಕ್ಕಳ ಪ್ರೌಢ ಶಾಲೆಯನ್ನು ಕಟ್ಟಿದಂತೆ ಹಲವಾರೂ ಬಾರಿ ವಿನಂತಿಸಿಕೊಂಡರೂ, ಮತ್ತೆ ಇಂದು ದಿನಾಂಕ : 04-11-2024 ರಂದು ಅದೇ ಸ್ಥಳದಲ್ಲಿ (ಗ್ಯಾಸ್ ಗೋಡಾನ್ ನಿಂದ ಕೇವಲ 10 ಮೀ ಅಂತರದಲ್ಲಿ) ಹೆಣ್ಣು ಮಕ್ಕಳ ಪ್ರೌಢ ಶಾಲೆಯ ನೂತನ ಕಟ್ಟಡದ ಗುದ್ದಲಿ ಪೂಜೆ ನಡೆಸಿರುವುದು, ವಿದ್ಯಾರ್ಥಿಗಳ ಸುರಕ್ಷತಾ ಬಗ್ಗೆ, ಅಧಿಕಾರಿಗಳಿಗಿರುವ ನಿರ್ಲಕ್ಷತನ ತೋರಿಸುತ್ತಿದೆ. ನಮ್ಮ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಆದ ತಾವು ನಮ್ಮ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಸದರಿ ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸಿ, ಸದರಿ ಕಟ್ಟಡವನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಈ ಮೂಲಕ ಮಂಗಳೂರಿನ ಗುರು ಹಿರಿಯರು ಹಾಗೂ ಸಮಸ್ತ ನಾಗರಿಕರು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ.