ಗಂಗಾವತಿ ತಾಲೂಕಿನ ವಿರುಪಾಪೂರ ಗ್ರಾಮದ ತಹಶೀಲ್ ಕಾರ್ಯಾಲಯದ ಪಕ್ಕದಲ್ಲಿರುವ ಪಿಲ್ಟರ್ ನೀರಿನ ಟ್ಯಾಂಕ್ಗೆ ದಕ್ಕೆ ಖಂಡಿಸಿ ಮನವಿ ಸಲ್ಲಿಸಿದ ಕ.ರ.ವೇ.ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ:

ಗಂಗಾವತಿ: ತಾಲೂಕಿನ ವಿರುಪಾಪೂರ ಗ್ರಾಮದ ತಹಶೀಲ್ ಕಾರ್ಯಾಲಯದ ಪಕ್ಕದಲ್ಲಿರುವ ಸರ್ವೇ ನಂ.53 ಭೂಮಿಯ ಮಾಲೀಕರು ಗಂಗಾವತಿ ತಾಲೂಕಿಗೆ ಕುಡಿಯುವ ನೀರು ಸರಬರಾಜು ಮಾಡುವ ಪಿಲ್ಟರ್ ಟ್ಯಾಂಕ್ ನಿರ್ಮಾಣವಿರುವ ಜಮೀನ ಪಕ್ಕದಲ್ಲಿ ಅನಧೀಕೃತವಾಗಿ ಸುಮಾರು 1೦ ರಿಂದ 12 ಅಡಿಗಳಷ್ಟು ಆಳವಾಗಿ ಭೂಮಿಯನ್ನು ಅಗೆದು ಅಕ್ರವಾಗಿ ಮಣ್ಣನ್ನು ಅಗೆದು ಬಗೆದು ಮಣ್ಣಿನಿಂದ ದುಡ್ಡು ಸಂಪಾದನೇ ಮಾಡುವ ದುರಾಸೆಯಿಂದ ಸಾಗಿಸುತ್ತಿದ್ದಾನೆ. ಇದು ಗಂಗಾವತಿ ತಹಶೀಲ್ದಾರರ ಕಾರ್ಯಾಲಯಕ್ಕೆ ಹೊಂದಿಕೊಂಡಿದ್ದು ಇದು ತಹಶೀಲ್ದಾರರ ಕಣ್ಣಿಗೂ ಕಂಡರೂ ಸಹ ಸದರಿ ಭೂಮಿಯ ಮಾಲೀಕರ ಮೇಲೆ ಯಾವುದೇ ಕ್ರಮವನ್ನು ಜರುಗಿಸದೆ ಕಣ್ಣು ಮುಚ್ಚಿ ಕೂಳಿತಿರುತ್ತಾರೆ. ಮತ್ತು ನಮ್ಮ ಸಂಘಟನೆಯು ತಹಶೀಲ್ದಾರರು ಮತ್ತು ಕೊಪ್ಪಳ ಜಿಲ್ಲೆಯ ಗಣಿ ಮತ್ತು ಭೂ ವಿಜ್ಙಾನ ಇಲಾಖೆಯ ಅಧಿಕಾರಿಗಳಿಗೆ ಇದರ ಕುರಿತು ಮನವಿ ಸಲ್ಲಿಸಿ ಗಮನಕ್ಕೆ ತಂದರೂ ಸಹ ಸದರಿ ಅಧಿಕಾರಿಗಳು ಭೂಮಿಯ ಮಾಲೀಕರ ಮೇಲೆ ಯಾವುದೇ ಕ್ರಮವನ್ನು ಜರುಗಿಸಿರುವುದಿಲ್ಲ. ಸದರಿ ಭೂಮಿಯ ಮಾಲೀಕರ ಪಕ್ಕದಲ್ಲಿಯೇ ಸರ್ಕಾರದ ವತಿಯಿಂದ ಇಡೀ ಗಂಗಾವತಿ ನಗರಕ್ಕೆ ಸರಬರಾಜು ಮಾಡುವ ಶುದ್ದ ಕುಡಿಯುವ ನೀರಿನ ಟ್ಯಾಂಕರ್ ನಿರ್ಮಾಣವಾಗಿದ್ದು, ಸದರಿ ಭೂಮಿಯನ್ನು ಸುಮಾರು 1೦-12 ಅಡಿಗಳಷ್ಟು ಅಗೆಯುವುದರಿಂದ ಸದರಿ ಶುದ್ಧ ಕುಡಿಯುವ ಪಿಲ್ಟರ್ ಮಾಡುವ ನೀರಿನ ಟ್ಯಾಂಕರ್ ಸತತವಾಗಿ ಮಳೆಗಾಲದಲ್ಲಿ ಮೂರು ನಾಲ್ಕು ದಿನಗಳ ಸತತವಾಗಿ ಮಳೆಯಾದರೆ ಸದರಿ ಪಿಲ್ಟರ್ ಟ್ಯಾಂಕರ್ ಕುಸಿದು ಬೀಳುವ ಆಪತ್ತಿನಲ್ಲಿರುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಗಂಗಾವತಿ ನಗರದ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯನ್ನು ಅನುಭವಿಸಬೇಕಾಗುವ ಪರಿಸ್ಥಿತಿ ಉಂಟಾಗುತ್ತದೆ.
ಸದರಿ ಸರ್ವೇ ನಂಬರ್-53 ರ ಭೂ ಮಾಲೀಕರ ಮೇಲೆ ಕಂದಾಯ ಇಲಾಖೆ ಮತ್ತು ಕೊಪ್ಪಳ ಗಣಿ ಮತ್ತು ಭೂ ಇಲಾಖೆಯು ಇವರ ಮೇಲೆ ಯಾವುದೇ ಕ್ರಮ ಜರುಗಿಸದೇ ಇರುವುದನ್ನು ನೋಡಿದರೆ ಸದರಿ ಅಧಿಕಾರಿಗಳ ಮೇಲೆ ನಮ್ಮ ಸಂಘಟನೆಗೆ ಅನುಮಾನ ಉಂಟು ಮಾಡುತ್ತಿದೆ. ಆದ ಕಾರಣ ಸರ್ವೇ ನಂಬರ್-53 ರ ಭೂ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮವನ್ನು ಜರುಗಿಸಿ ಮುಂದೆ ಆಗುವಂತಹ ಅನಾಹುತವನ್ನು ತಪ್ಪಿಸಬೇಕೆಂದು ಮತ್ತು ಸದರಿ ಪಿಲ್ಟರ್ ಟ್ಯಾಂಕರ್ ಸುತ್ತಮುತ್ತಲಿನಲ್ಲಿ ಸುಮಾರು 1೦೦ ಮೀಟರ್ ಯಾವುದೇ ವ್ಯಕ್ತಿಗಳನ್ನು ಮಣ್ಣನ್ನು ಹಗೆಯದಂತೆ ಆದೇಶ ಹೊರಡಿಸಬೇಕು ಮತ್ತು ಸದರಿ ಭೂ ಮಾಲೀಕರ ಮೇಲೆ ಯಾವುದೇ ಕ್ರಮವನ್ನು ಜರುಗಿಸದೇ ಇರುವಂತಹ ಸಂಬಂಧಫಟ್ಟ ಅಧಿಕಾರಿಗಳಾದ ಕೊಪ್ಪಳ ಗಣಿ ಮತ್ತು ಭೂ ವಿಜ್ಙಾನ ಇಲಾಖೆಯ ಅಧಿಕಾರಿಗಳ ಹಾಗೂ ಗಂಗಾವತಿ ಕಂದಾಯ ಇಲಾಖೆಯ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮವನ್ನು ಜರುಗಿಸುವಂತೆ ಸಂಘಟನೆಯು ಸದರಿ ಭೂ ಮಾಲೀಕರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಯಾವುದೇ ಕ್ರಮವನ್ನು ಜರುಗಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಭವನ ಮುಂದೆ ಧರಣಿ ಮಾಡಲಾಗುವುದು ಎಂದು ಪಂಪಣ್ಣ ನಾಯಕ ಕರವೇ ಜಿಲ್ಲಾ ಅಧ್ಯಕ್ಷರು ಮನವಿ ಪತ್ರ ಸಲ್ಲಿಸಿ ಹೇಳಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಶಂಕರ ಪೂಜಾರಿ ತಾಲೂಕ ಅಧ್ಯಕ್ಷರು,
ಮುತ್ತಣ್ಣ ಈಳಿಗೇರ, ಉಮೇಶ ಬಂಡಿ, ಬಸವರಾಜ ನಾಯಕ, ರಮೇಶ ಭೋವಿ,ನಾಗರಾಜ ನಾಯಕ, ವೆಂಕಟೇಶ, ಮುತ್ತಣ್ಣ ಆಡಿದ್ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.