ಅತಿಥಿ ಶಿಕ್ಷಕರ ನಾಲ್ಕು ತಿಂಗಳ ವೇತನ ನೀಡುವಂತೆ ಮನವಿ..!

ಕೊಪ್ಪಳ : ಪ್ರಾಥಮಿಕ ಸೇವೆ ಸಲ್ಲಿಸುತ್ತಿರುವ 2024-25ನೇ ಸಾಲಿನ ECCE & ಬೈಲಿಂಗೈಲ್ ಅತಿಥಿ ಶಿಕ್ಷಕರ ವೇತನ ಮಂಜೂರಾತಿ ಮಾಡಬೇಕೆಂದು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾರ್ವ ಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಕಳೆದ ಶೈಕ್ಷಣಿಕ ವರ್ಷದಲ್ಲಿ 2024-25ನೇ ಸಾಲಿನ L.GK, UKG & ಬೈಲಿಂಗೈಲ್ ತರಗತಿಗಳ ಅತಿಥಿ ಶಿಕ್ಷಕರುಗಳ ಡಿಸೆಂಬರ್, ಜನೇವರಿ, ಫೆಬ್ರುವರಿ ಮತ್ತು ಮಾರ್ಚ ಒಟ್ಟು 4 ತಿಂಗಳ & ಬೈಲಿಂಗ್ನಲ್ ಅತಿಥಿ ಶಿಕ್ಷಕರ 5 ತಿಂಗಳ ನವೆಂಬರ ನಿಂದ ಮಾರ್ಚವರೆಗಿನ ಬಾಕಿ ವೇತನವನ್ನು ಒಂದುವಾರದ ಒಳಗಾಗಿ ಮಂಜೂರು ಮಾಡಬೇಕು ಇಲ್ಲವಾದರೆ ಎಲ್ಲಾ ಅತಿಥಿ ಶಿಕ್ಷಕರು ಅನಿರ್ದಿಷ್ಟಾವಧಿ ಹೋರಾಟ ಮಾಡಲಾಗುವುದು. ವೇತನ ಬಾಕಿ ಇರುವುದರಿಂದ ಜೀವನ ನಿರ್ವಹಣೆಗೆ ಸಮಸ್ಯೆಯಾಗುತ್ತಿದ್ದು, ಬಾಕಿ ವೇತನವನ್ನು ಬಿಡುಗಡೆ ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಮಂಜುಳಾ ಪಾಟೀಲ, ನಗಮಾ ಎಂ ಮಂಗಳೂರ,ರೇಖಾ ಜಿ ಕಂಬಳಿ,ಶ್ವೇತಾ, ಶಾರದಾ,ಭೀಮಮ್ಮ ಬಿ ಮ್ಯಾದಿನೇರಿ,ಪದ್ಮಾವತಿ, ರೇಣುಕಾ ಬಿ,ದ್ಯಾಮಮ್ಮ ಬಿ ಕೆ,ಪಕೀರವ್ವ ಟಿ ಎಚ್,ವಿಶಾಲಾಕ್ಷಿ ಕೆ ಕಮ್ಮಾರ,ಚನ್ನಮ್ಮ ಕದಳಿ,ವಿರೇಶ ದೇವಿ, ಮಂಜುನಾಥ, ರಹಮಾನ, ಇನ್ನು ಇತರರು ಉಪಸ್ಥಿತರಿದ್ದರು.