ಅಂಜನಾದ್ರಿ ಹೆಸರಿನಲ್ಲಿ ಸೆಟ್ಟೇರಿದ ಸಸ್ಪೆನ್ಸ್ ತ್ರಿಲ್ಲರ್ ಮೂವಿ

ಇಂದು ಸಸ್ಪೆನ್ಸ್, ಮಾಸ್ ಸಿನಿಮಾ ಅಂಜನಾದ್ರಿ ಮುಹೂರ್ತ
— ನಿರ್ದೇಶಕ ರಾಜ್ ಚುರ್ಚಿಹಾಳ
— ಒಂದು ಕೋಟಿ ನಿರ್ಮಾಣದಲ್ಲಿ ಸಿನಿಮಾ ತಯಾರಿ
ಕೊಪ್ಪಳ:
ಸಸ್ಪೆನ್ಸ್, ಪ್ರೀತಿ, ಕಥಾಹಂದರ ಒಳಗೊಂಡಿರುವ ಸ್ಪಿರಿಚುಯಲ್ ಮಾಸ್ ಸಿನಿಮಾ ಇದೇ ಜು.9ಕ್ಕೆ ತಾಲೂಕಿನ ನೀರಲಗಿ ಗ್ರಾಮದ ಶ್ರೀ ಅನ್ನದಾನೇಶ್ವರ ಮಠದಲ್ಲಿ ಗಣ್ಯರಿಂದ ಸಿನಿಮಾ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಚಿತ್ರಕ್ಕೆ ಚಾಲನೆ ದೊರೆಯಲಿದೆ ಎಂದು ನಿರ್ದೇಶಕ ರಾಜ್ ಚುರ್ಚಿಹಾಳ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕನ್ನಡಿಗರ ಆಶೀರ್ವಾದದಿಂದ ಮೊದಲ ಬಾರಿಗೆ ಉತ್ತರ ಕರ್ನಾಟಕದ ಗಾಂಧಿ ನಗರ ಖ್ಯಾತಿಯ ಕೊಪ್ಪಳದಲ್ಲಿ ರಾಜ್ ಪ್ರೊಡಕ್ಷನ್ ಬ್ಯಾನರ್ ಅಡಿ ನಿರ್ಮಾಣಗೊಳ್ಳುತ್ತಿರುವ
ನನ್ನ ನಿರ್ದೇಶನ, ಚಿತ್ರಕಥೆ, ಸಂಭಾಷಣೆಯಲ್ಲಿ ಮೂಡಿಬಂದಿರುವ ಅಂಜನಾದ್ರಿ ಎಂಬ
ಸಸ್ಪೆನ್ಸ್, ಮಾಸ್, ಸಿನಿಮಾ ಸೆಟ್ಟೇರಲಿದ್ದು, ಒಂದು ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಲಿದೆ ಎಂದರು.
ಚಿತ್ರದ ನಾಯಕ ನಟನನ್ನು ಇನ್ನೂ ಸಸ್ಪೆನ್ಸ್ ನಲ್ಲಿಟ್ಟಿದೆ. ಇನ್ನೂ ಈ ಸಿನಿಮಾದಲ್ಲಿ ಮೂವರು ನಟಿಯರು ಇರಲಿದ್ದು ಪ್ರೇಕ್ಷರಕ ಮನ ಗೆಲ್ಲಲಿದೆ ಎಂಬುದು ಸಿನಿಮಾ ನಿರ್ದೇಶಕರ ಮಾತಾಗಿದೆ. ಕಲಾವಿದರಾಗಿ ಹೈದರಾಬಾದಿನ ಸುಂಕಾರಿ, ವರ್ಷೀಣಿ, ಗಜಾ ಕೊಪ್ಪಳ, ಸುರೇಶ ಹಲಗೇರಿ ಸೇರಿದಂತೆ ಇತರರು ಅಭಿನಯಿಸಲಿದ್ದಾರೆ.
ಚಿತ್ರಕಥೆ, ನಿರ್ದೇಶನ, ಸಂಭಾಷಣೆ ರಾಜ್ ಚುರ್ಚಿಹಾಳ, ಛಾಯಾಗ್ರಾಹಣ ಆನಂದ್ ಸ್ಟುಡಿಯೋ ಮತ್ತು ರಾಜ್ ಫೋಟೋಗ್ರಫಿ, ಸಂಗೀತ ವಿಶ್ವಾಸ್ ಕೌಶಿಕ್, ಡ್ಯಾನ್ಸ್ ಕೊರಿಯೋಗ್ರಾಫರ್ ರಾಹುಲ್ ಕೊಪ್ಪಳ ಮತ್ತು ಶ್ರೇಯಾ ಹಿರೇಮಠ, ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಯಮನೂರ ನಾಯಕ ಹಾಗೂ ನಿರ್ಮಾಪಕರಾದ ಶಾಂತಲಾ ರಾಜ್ ಮತ್ತು ಮಂಜುನಾಥ ನಾಯಕ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸುಮಾರು ಎರಡು ವರ್ಷಗಳ ಕಾಲ ಸಿನಿಮಾ ಸಿನಿಮಾ ಶೂಟಿಂಗ್ ನಡೆಯಲಿದೆ. ಅಂದಕೊಂಡಂತೆ ಎಲ್ಲ ಕೆಲಸ ಶೀಘ್ರ ಫೂರ್ಣಗೊಂಡಲ್ಲಿ 2026 ಅಂತ್ಯಕ್ಕೆ ಅಂಜನಾದ್ರಿ ಸಿನಿಮಾ ತೆರೆಗೆ ಬರಲಿದೆ ಎಂದರು.
ಇನ್ನೂ ಸಿನಿಮಾ ಚಿತ್ರೀಕರಣವನ್ನು ಕೊಪ್ಪಳ, ಹೈದರಾಬಾದ್ ಸೇರಿದಂತೆ ವಿವಿಧ ಕಡೆ ಶೂಟಿಂಗ್ ಮಾಡಲಿದ್ದೇವೆ. ಕೊಪ್ಪಳದಲ್ಲೇ ಸಣ್ಣ ಪ್ರಮಾಣದ ಸೆಟ್ ತಯಾರಿ ಮಾಡಿ ಶೂಟಿಂಗ್ ಮಾಡಲಿದ್ದು, ಚಿತ್ರೀಕರಣ ಎರಡು ಹಂತದಲ್ಲಿ ನಡೆಯಲಿದೆ. ಸಂಗೀತ ನಿರ್ದೇಶಕ ವಿಶ್ವಾಸ್ ಕೌಶಿಕ್ ಅವರು ಅಂಜನಾದ್ರಿ ಚಿತ್ರದಲ್ಲಿ ಐದು ಹಾಡು ಬರೆದಿದ್ದು, ಈ ಹಾಡುಗಳು ನಮ್ಮ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಲಿದ್ದು, ಕನ್ನಡಿಗರ ಮನ ಗೆಲ್ಲಲಿದೆ ಎಂಬ ನಂಬಿಕೆಯಿದೆ ಎಂದು ನಿರ್ದೇಶಕ ರಾಜ್ ಚುರ್ಚಿಹಾಳ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಲಾವಿದರಾದ ಗಜಾ ಕೊಪ್ಪಳ, ಸುರೇಶ ಹಲಗೇರಿ, ಅಸಿಸ್ಟೆಂಟ್ ಡೈರೆಕ್ಟರ್ ಯಮನೂರ ನಾಯಕ, ಡ್ಯಾನ್ಸ್ ಕೊರಿಯೋಗ್ರಾಫರ್ ರಾಹುಲ್ ಕೊಪ್ಪಳ, ಶ್ರೇಯಾ ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಫೋಟೋ ಕ್ಯಾಪ್ಸನ್: ಕೊಪ್ಪಳ ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಂಜನಾದ್ರಿ ಸಿನಿಮಾ ನಿರ್ದೇಶಕ ರಾಜ್ ಚುರ್ಚಿಹಾಳ ಮಾತನಾಡಿದರು.