ಮರದ ಶಶಿಗಳನ್ನು ನೆಡುವ ಮೂಲಕ ಸಾರ್ಥಕತೆ ಮೆರೆದ ಕೊಪ್ಪಳದ ಧ್ರುವ ಸಂಸ್ಥೆ
ಮನುಕುಲದ ಉಳಿವಿಗಾಗಿ ಗಿಡ ಮರಗಳನ್ನು ನೆಟ್ಟು ಪರಿಸರ ಕಾಪಾಡುವುದು ಅನಿವಾರ್ಯ
ಪರಿಸರ ಸಂರಕ್ಷಣೆ ಭಾರತದ ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯ:ಅಮರ್ ಅಧಿಕಾರಿಗಳು ಪರಿಸರ ಇಲಾಖೆ
ಕೊಪ್ಪಳ, ಜುಲೈ 11 :ಕೊಪ್ಪಳ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಧ್ರುವ ಪರಿಸರ ಮಾಲಿನ್ಯ ನಿಯಂತ್ರಣ ಸಂರಕ್ಷಣೆ ಸಂಸ್ಥೆ ಕೊಪ್ಪಳ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅರಣ್ಯ ಇಲಾಖೆ ಹಾಗೂ ಕೊಪ್ಪಳ ನೆಹರು ಯುವ ಕೇಂದ್ರ ಇವರ ಸಹಯೋಗದಲ್ಲಿ ಜುಲೈ 11ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳಲಾಗಿದ್ದ ವನಮಹೋತ್ಸವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಸಹಾಯಕ ಪರಿಸರ ಅಧಿಕಾರಿಗಳಾದ ಅಮರ ಅವರು ಮಾತನಾಡಿದರು.
ಭೂಮಿಯಲ್ಲಿ ಜನಸಂಖ್ಯೆ ಜಾಸ್ತಿ ಆಗುತ್ತಿದೆ ಅಭಿವೃದ್ಧಿಯ ಜೊತೆಗೆ ಪರಿಸರವನ್ನು ಮಾಲಿನ್ಯ ಮಾಡದಂತೆ ತಡೆಯಲು ಗಿಡ ಮರಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಒಂದು ಗಿಡ ಸುಮಾರು ಐದುಕೋಟಿಗೂ ಅಧಿಕ ಬೆಲೆ ಬಾಳುವಷ್ಟು ಆಕ್ಷಿಜನ್ ಕೊಡುತ್ತದೆ ಆದ್ದರಿಂದ ಪರಿಸರ ಸಂರಕ್ಷಣೆಯನ್ನು ಸಂವಿಧಾನದ 51-ಎ (ಜಿ) ಅಡಿಯಲ್ಲಿ ಭಾರತದ ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವನ್ನಾಗಿ ಮಾಡಲಾಗಿದೆ, ಅದು “ಕಾಡುಗಳು, ಸರೋವರಗಳು, ನದಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ರಕ್ಷಿಸುವುದು ಮತ್ತು ಸುಧಾರಿಸುವುದು ಭಾರತದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು.
ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡಿ: ಪಾವಡಿ ಗೌಡರ.
ಜೀವ ರಾಶಿಗಳಿಗೆ ಪರಿಸರ ಅತ್ಯವಶ್ಯಕವಿದ್ದು, ಇದರ ಸಂರಕ್ಷಣೆಗಾಗಿ ನಮ್ಮ ಕರ್ತವ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. ಎಲ್ಲರೂ ತಮ್ಮ ಮನೆಗಳ ಸುತ್ತಮುತ್ತಲಿನಲ್ಲಿ ಸಸಿಗಳನ್ನು ನೆಡುವ ಹವ್ಯಾಸ ರೂಡಿಸಿಕೊಳ್ಳಬೇಕು. ಇಂದಿನ ಯುವ ಜನಾಂಗವು ನಾಳೆಯ ಭವ್ಯ ನಾಗರಿಕರಾಗಿದ್ದು, ಪರಿಸರ ರಕ್ಷಣೆಯಲ್ಲಿ ಯುವ ಜನಾಂಗವು ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದರು. ಸಹಾಯಕ ಪರಿಸರ ಅಧಿಕಾರಿಗಳಾದ ಅಮರ,ಮಾತನಾಡಿ ಪರಿಸರದಲ್ಲಿ ಆಮ್ಲಜನಕ ಅತ್ಯಾವಶ್ಯಕ ಆದ್ದರಿಂದ ಮರಗಳನ್ನು ಸಂರಕ್ಷಣೆ ಮಾಡಬೇಕು ಎಂದರು,ಅಂತವರನ್ನು ತಡೆಹಿಡಿದು, ಅವರಿಗೆ ಮರ ಕಡಿಯದಂತೆ ಎಚ್ಚರಿಕೆಯನ್ನು ನೀಡಬೇಕು. ಮರಗಳನ್ನು ಕಡಿಯುತ್ತಿರುವ ಮಾಹಿತಿಯನ್ನು ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಬೇಕು. ಅಂತವರ ವಿರುದ್ಧ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತರರಾದ ಜಿ.ಎಸ್ ಗೋನಾಳ ಅವರು ಮಾತನಾಡಿ, ಪರಿಸರ ಸಂರಕ್ಷಣೆಯು ಪ್ರತಿಯೊಬ್ಬ ವ್ಯಕ್ತಿಯ ಮುಖ್ಯ ಕರ್ತವ್ಯ ವಾಗಿದೆ. ಮಲೆನಾಡು ಪ್ರದೇಶಗಳಂತೆ ಕೊಪ್ಪಳ ನಗರವನ್ನು ಹಸೀರಿಕರಣ ಮಾಡುತ್ತೆವೆ ಎಂದು ಈ ಸಂಧರ್ಭದಲ್ಲಿ ಪಣತೋಟ್ಟು ಪ್ರತಿಯೊಬ್ಬರು ಒಂದೋಂದು ಗಿಡವನ್ನು ನೆಡಬೇಕು. ಪರಿಸರ ಸಂರಕ್ಷಣೆಯಿಂದ ಸದೃಢ ಆರೋಗ್ಯವನ್ನು ಸಾಧಿಸಬಹುದಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಪರಿಸರವನ್ನು ಸಂರಕ್ಷಿಸಬೇಕು. ನಾವು ನಮ್ಮ ಮುಂದಿನ ಪೀಳಿಗೆಯನ್ನು ರಕ್ಷಿಸಬೇಕಾದರೆ ಪರಿಸರ ಸಂರಕ್ಷಣೆ ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಠ್ಠಲ್ ಜಾಬಗೌಡ್ರ ಅವರು ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ, ಎಲ್ಲಾರೂ ಹೆಚ್ಚು ಹೆಚ್ಚು ಗಿಡಗಳನ್ನು ನೆಡುವುದರ ಮೂಲಕ ಪರಿಸರ ಸಂರಕ್ಷಣೆಯನ್ನು ಮಾಡೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರರಾದ ಎಂ.ಸಾಧಿಕ್ ಅಲಿ, ಸಹಾಯಕ ಪರಿಸರ ಅಧಿಕಾರಿಗಳಾದ ಅಮರ, ಪರಿಸರ ಬಳಗದ ಸದಸ್ಯರು ಹಾಗೂ ಪತ್ರಕರ್ತರಾದ ಗೋವಿಂದರಾಜ್ ಬೂದಗುಂಪ, ರಾಘವೇಂದ್ರ, ಅರಕೆರೆ ಉಮೇಶ್ ಪೂಜಾರ್, ಉದಯ ತೋಟದ, ತಾಜ್ ಪಾಷಾ,ಶಿವಯ್ಯ ಹಿರೇಮಠ (ಅರ್ಚಕರು)’ ಕಾರ್ಯಕ್ರಮದ ಆಯೋಜಕರಾದ ಎಂ.ಎನ್ ಕುಂದಗೋಳ್ ಧ್ರುವ, ಪರಿಸರ ಮಾಲಿನ್ಯ ನಿಯಂತ್ರಣ ಸಂರಕ್ಷಣಾ ಸಂಸ್ಥೆಯ ಮುಖ್ಯಸ್ಥರಾದ ಎಸ್.ಎಂ ಹಿರೇಮಠ ಸೇರಿದಂತೆ ಎಲ್ಲಾ ಪರಿಸರ ಬಳಗ ಸದಸ್ಯರು ಅರಣ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.