ಅಪರಾಧ ಮತ್ತು ಅಪರಾಧಿಗಳಿಗೆ ದುಸ್ವಪ್ನವಾದ ಕೊಪ್ಪಳದ ಪೊಲೀಸರು
ಅಪರಾಧ ಪತ್ತೆ ಹಚ್ಚುವಲ್ಲಿ ಕೊಪ್ಪಳದ ಪೊಲೀಸರು ಚುರುಕು
ಕೊಪ್ಪಳ, ಯಲಬುರ್ಗಾ, ದಲ್ಲಿ ಕಳ್ಳತನ ಮಾಡಿದ್ದ ಕಳ್ಳರನ್ನು ಪತ್ತೆ ಹಚ್ಚಿದ ಪೊಲೀಸರು
ಕೊಪ್ಪಳ ಜಿಬಿ ವಾಯ್ಸ್ ಸುದ್ದಿ: ಕೊಪ್ಪಳದ ಮುನಿರಾಬಾದ್ ಮತ್ತು ಯಲಬುರ್ಗಾ ಪಟ್ಟಣದಲ್ಲಿ ಕಳ್ಳತನ ಮಾಡಿದ್ದ ಕಳ್ಳರನ್ನು ಕೊಪ್ಪಳದ ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ ಎಂದು ಕೊಪ್ಪಳದ ಎಸ್ ಪಿ ಗಳಾದ ಡಾ. ರಾಮ್ ಎಲ್ ಅರಸಿದ್ದಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೊಪ್ಪಳ ಪೊಲೀಸ್ ವ್ಯವಸ್ಥೆ ಬಲಿಷ್ಠವಾಗಿದೆ ಎನ್ನುವುದಕ್ಕೆ ಇತ್ತೀಚೆಗೆ ಸಾಕಷ್ಟು ಪ್ರಕರಣಗಳನ್ನು ಕೊಪ್ಪಳದ ಪೊಲೀಸರು ಪತ್ತೆ ಹಚ್ಚುವ ಮುಖಾಂತರ ತೋರಿಸಿದ್ದಾರೆ, ಯಾವುದೇ ಕಾನೂನುಭಾಯೀರ ಚಟುವಟಿಕೆ ಮಾಡಿದವರು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ, ಎಂಬ ಸಂದೇಶವನ್ನು ಕೊಪ್ಪಳದ ಪೊಲೀಸರು ಸಾರ್ವಜನಿಕ ವಲಯದಲ್ಲಿ ಇರುವ ಅಪರಾಧಿ ಮನೋಭಾವದ ವ್ಯಕ್ತಿಗಳಿಗೆ ಸಂದೇಶ ರವಾನಿಸಿದ್ದಾರೆ.
ಯಲಬುರ್ಗಾ ಠಾಣಾ ವ್ಯಾಪ್ತಿಯಲ್ಲಿ ಮನೆಯ ಬೀಗ ಮುರಿದು 2,69 ಸಾವಿರ ರೂ ಬೆಲೆ ಬಾಳುವ ಒಂದು ತೊಲೆ ಬಂಗಾರ 15 ತೊಲೆ ಬೆಳ್ಳಿ ಮತ್ತು ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿದ್ದ ಫಕ್ರುಸಾಬ್ ಅಲಿಯಾಸ್ ಪಕೀರ ಸಾಬ್ @ಲಕ್ಷ್ಮಣ್ ತಂದೆ ಇಮಾಮ್ ಸಾಬ್ ಜಾತಗಾರ ವಯಸ್ಸು 50 ವರ್ಷ ಈತನನ್ನು ಪತ್ತೆ ಮಾಡಿ ವಶಕ್ಕೆ ಪಡೆದುಕೊಳ್ಳಲಾಗಿದೆ,
ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಹುಲಗಿ ಗ್ರಾಮದಲ್ಲಿ ಬೀಗ ಹಾಕಿದ ಮನೆಯ ಬೀಗವನ್ನು ತೆಗೆದು ಮನೆಯ ಒಳಗೆ ಹೋಗಿ ಗಾಡ್ರೇಜ್ ತೆಗೆದು ಅದರಲ್ಲಿದ್ದ 5 ಲಕ್ಷ 95,000 ಮೌಲ್ಯದ 85 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು ಪ್ರಕರಣ ದಾಖಲಿಸಿದ ಮುನಿರಾಬಾದ್ ಪೊಲೀಸರು ಕಳ್ಳರ ಪತ್ತೆಗೆ ವಿಶೇಷ ತಂಡ ರಚನೆ ಮಾಡಿ ರಿಜ್ವಾನ್ ಪಾಷಾ @ರಿಜ್ಜು ತಂದೆ ನಜೀರ್ ಅಹ್ಮದ್ ವಯಸ್ಸು 36 ವರ್ಷ ಹೊಸಪೇಟೆ ಮೂಲದವನು ಮತ್ತು ಮೌಲಾ ಹುಸೇನ್ ತಂದೆ ಸೀನಪ್ಪ ಕೊಂಡಿ @ರಾಜಾಸಾಬ್ 27 ವರ್ಷದ ವ್ಯಕ್ತಿಯನ್ನು ಪತ್ತೆ ಹಚ್ಚಿ ಪೊಲೀಸರು ವಶಕ್ಕೆ ಪಡೆದಿದ್ದಾರೆ, ಮತ್ತು ಅವರಿಂದ ಕಳ್ಳತನ ಮಾಡಿದ 81.66 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಸುಮಾರು 5 ಲಕ್ಷ 94,360 ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡ ಪೊಲೀಸರು ಕಳ್ಳರನ್ನು ಸೆರೆಮನೆಗೆ ಕಳುಹಿಸಿದ್ದಾರೆ,
ಕೊಪ್ಪಳದ ನಗರ ಠಾಣಾ ವ್ಯಾಪ್ತಿಯಲ್ಲಿ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂದೆ ಪಾರ್ಕಿಂಗ್ ಮಾಡಿದ್ದ ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂಬರ್ KA37-U-9271 ಸುಮಾರು 50 ಸಾವಿರ ಬೆಲೆ ಬಾಳುವ ಮೋಟಾರ್ ಸೈಕಲ್ ಅನ್ನು ಕಳ್ಳತನ ಮಾಡಲಾಗಿತ್ತು ಜಂಗಮರ ಕಲ್ಗುಡಿ ತಾಲೂಕ ಗಂಗಾವತಿ ಇವರು ನೀಡಿದ ದೂರಿನ ಮೇಲೆ ವಿಶೇಷ ಪಡೆ ರಚನೆ ಮಾಡಿದ ಕೊಪ್ಪಳ ಪೊಲೀಸ್ ಠಾಣೆಯ ಪಿಐ ಜಯ ಪ್ರಕಾಶ್ ಅವರು ಆರೋಪಿಯಾದ ಶ್ರೀಕಾಂತ್ ಅಲಿಯಾಸ್ ಗಿಡ್ಡ ತಂದೆ ವೀರೇಶ್ ಬೆಟಗೇರಿ 21 ವರ್ಷ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಆತನ ಪ್ರಕರಣದಲ್ಲಿ ಇದು ಒಂದೇ ಕಳ್ಳತನ ಅಲ್ಲದೆ ಇನ್ನು ಎರಡು ಮೋಟರ್ ಸೈಕಲ್ ಕಳ್ಳತನ ಮಾಡಿದ್ದನ್ನು ಪತ್ತೆ ಹಚ್ಚಿದ್ದಾರೆ,
ಈತನಿಂದ ಮೋಟಾರ್ ಸೈಕಲ್ಗಳನ್ನು ಹೊಸಪಡಿಸಿಕೊಳ್ಳಲಾಗಿದೆ ಸುಮಾರು 2,10,000 ಮೌಲ್ಯದ 3 ಮೋಟರ್ ಸೈಕಲ್ ಹೊಸಪಡಿಸಿಕೊಂಡು ಕಳ್ಳತನ ಮಾಡಿದ್ದ ವ್ಯಕ್ತಿಯನ್ನು ಜೈಲಿಗೆ ಕಳುಹಿಸಲಾಗಿದೆ.
ಎಂದು ಸುದ್ದಿಗೋಷ್ಠಿ ಕರೆದಿದ್ದ ಕೊಪ್ಪಳದ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀರಾಮ್ ಎಲ್ ಅರಸಿದ್ದಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.