ಗಾನ ಗಾರುಡಿಗ ಬಾಷಾ ಕಿನ್ನಾಳ ಗೆ,,! ಸಂಧ ಕಲಾ ಭೂಷಣ ಪ್ರಶಸ್ತಿ,,

gbnewskannada ಸುದ್ದಿ ಕೊಪ್ಪಳ.
ಕಿನ್ನಾಳ : ಕೊಪ್ಪಳ ಜಿಲ್ಲೆಯ ಕಿನ್ನಾಳ ಎಂದೊಡನೇ ತಟ್ಟನೆ ನೆನಪಿಗೆ ಬರುವುದು ಅಲ್ಲಿನ ಮರಗೆತ್ತನೆ, ಬೊಂಬೆ ತಯಾರಿಕೆ.
ಹೌದು ಕಿನ್ನಾಳ ಗ್ರಾಮವು ಬೊಂಬೆ ತಯಾರಿಕೆಯಿಂದ ರಾಷ್ಟ್ರಮಟ್ಟದ, ಅಂತರಾಷ್ಟ್ರಮಟ್ಟದಲ್ಲಿ ಚಿರ ಪರಿಚಿತ ಗ್ರಾಮವಾಗಿ ಗುರುತಿಸಿಕೊಂಡಿದ್ದಲ್ಲದೇ ತನ್ನೆದೆಯಂತರಾಳದಲ್ಲಿ ವಿಷೇಶ ಪ್ರತಿಭೆಗಳನ್ನು ಎಲೆ ಮರೆ ಕಾಯಿಯಂತೆ ಬೆಳಸಿ ಪೋಷಿಸುತ್ತಿದೆ. ಅದಕ್ಕೆ ತಾಜಾ ಉದಾಹರಣೆ ಎಂದರೇ ಬಾಷಾ ಕಿನ್ನಾಳ ಅವರು.
ಬಾಷಾ ಕಿನ್ನಾಳ ಎಂದರೇ ಇವರ ಮಧುರ ಕಂಠದಿಂದ ಜಿಲ್ಲೆಯಲ್ಲದೇ ಹಲವಾರು ಕಡೆಗಳಲ್ಲಿ ಇವರು ಚಿರ ಪರಿಚಿತ ವ್ಯಕ್ತಿಯಾಗಿದ್ದು, ತಮ್ಮ ಮಧುರ ಕಂಠದಿಂದ ಇಲ್ಲಿಯವರೆಗೆ ಸಾವಿರಾರು ಕನ್ನಡ, ಹಿಂದಿ, ತೆಲುಗು ಸೇರಿದಂತೆ ಜಾನಪದ, ಭಕ್ತಿ ಗೀತೆ ಹೀಗೆ ಹತ್ತು ಹಲವಾರು ವಿಬಿನ್ನ ಶೈಲಿಯಲ್ಲಿ ಮಧುರವಾಗಿ ಹಾಡಿ ಸಾರ್ವಜನಿಕ ವಲಯ ಮೆಚ್ಚಿ ಹೊಗಳಿರುವದಂತು ಈ ವೇಳೆ ಸ್ಮರಿಸಲೇ ಬೇಕು.
ಸುಮಾರು ಇಪ್ಪತ್ತು ವರ್ಷಗಳ ನಿರಂತರ ತಮ್ಮದೇ ಆದ ಹಾಡುಗಾರಿಕೆಯ ಮೂಲಕ ತಮ್ಮದೇ ದಾಟಿ, ಸ್ವರಗಳ ಮೂಲಕ ಹಲವಾರು ಅಭಿಮಾನಿ ಬಳಗವನ್ನು ಹೊಂದಿದ್ದು ಇವರು ಯಾವುದೇ ಕಾರ್ಯಕ್ರಮದಲ್ಲಿ ಹಾಡುತ್ತಾರೇ ಎಂದರೇ ಅವರ ಅಭಿಮಾನಿಗಳು ಮೂರರಿಂದ, ನಾಲ್ಕು ಗಂಟೆಗಳ ಕಾಲ ಮೂಖ ವಿಸ್ಮಿತರಾಗಿ ಗಾಯನ ಲೋಕದಲ್ಲಿ ಮುಳುಗೆಳುತ್ತಾರೆ.
ಇಂತಹ ಗಾನ ಗಾರುಡಿಗನಿಗೆ ದಾವಣಗೆರೆಯ ಗಾನ ಸುಧಾ ಕಲಾ ಬಳಗ ಹಾಗೂ ಪ್ರೇಂಡ್ಸ್ ಮೆಲೋಡಿಸ್ ಆರ್ಕೆಸ್ಟ್ರಾ ಇವರು ದಿ. 06.07.25ರಂದು ದಾವಣಗೆರೆ ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ಡಾ.ರಾಜಕುಮಾರ್ ಮತ್ತು ಡಾ.ವಿಷ್ಣುವರ್ಧನ್ ಇವರ 5ನೇ ವರ್ಷದ ಸ್ವರ ಸಂಭ್ರಮ ಕಾರ್ಯಕ್ರಮ ಆಯೋಜಿಸಿದ್ದು ಈ ಕಾರ್ಯಕ್ರಮದಲ್ಲಿ ಬಾಷಾ ಕಿನ್ನಾಳ ಅವರ ಕಲೆ ಮತ್ತು ಸಾಹಿತ್ಯಕ್ಕೆ ನೀಡಿರುವ ಕೊಡುಗೆ, ಅಪಾರ ಸಾಧನೆ ಗುರುತಿಸಿ ಇವರಿಗೆ ಕಲಾಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅಭಿಮಾನಿ ಬಳಗ ತಿಳಿಸಿ ಸಂಭ್ರಮ ವ್ಯಕ್ತ ಪಡಿಸಿದ್ದಾರೆ.