ಕಾರಟಗಿ

ಹಿರಿಯ ವಕೀಲರಾದ ಶ್ರೀ ಸದಾಶಿವ ರೆಡ್ಡಿ ಯವರ ಮೇಲೆ ಹಲ್ಲೆ ಖಂಡಿಸಿ ರಾಜ್ಯಪಾಲರಿಗೆ ಮನವಿ

ಭಾರತೀಯ ವಕೀಲರ ಪರಿಷತ್ತಿನ ಸಹ ಅಧ್ಯಕ್ಷ ಸದಾಶಿವ ರೆಡ್ಡಿಯವರ ಮೇಲೆ ಮಾರಣಾಂತಿಕ ಹಲ್ಲೆ ಖಂಡನೆ, ರಾಜ್ಯಪಾಲರಿಗೆ ಮನವಿ

ಕಾರಟಗಿ ; ಇತ್ತೀಚಿಗೆ ರಾಜ್ಯದಲ್ಲಿ ವಕೀಲರ ಮೇಲೆ ನಿರಂತರ ಹಲ್ಲೆಯಂತಹ ಪ್ರಕರಣಗಳು ನಡೆಯುತ್ತಿದ್ದು ವಕೀಲರಿಗೆ ರಕ್ಷಣೆ ಇಲ್ಲದಂತಾಗಿದೆ, ಕಾನೂನನ್ನು ರಕ್ಷಣೆ ಮಾಡುವಂತಹ ವಕೀಲರಿಗೆ ಭದ್ರತೆ ಇಲ್ಲದೆ ಹೋದರೆ ಇನ್ನೂ ಸಾಮಾನ್ಯ ಜನರಿಗೆ ಭದ್ರತೆಯಲ್ಲಿ ಎನ್ನುವಂತಹ ಪ್ರಶ್ನೆ ಮೂಡಲಾರಂಭಿಸಿದೆ,ನೂರು ಜನ ಅಪರಾಧಿಗಳು ತಪ್ಪಿಸಿಕೊಂಡರು ಪರವಾಗಿಲ್ಲ ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎನ್ನುವ ನ್ಯಾಯಾಂಗ ವ್ಯವಸ್ಥೆಯ ಬುನಾದಿಯ ಸಿದ್ಧಾಂತದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ವಕೀಲರ ಮೇಲೆ ನಿರಂತರ ಕಿರುಕುಳ ಮತ್ತು ಮಾರಣಾಂತಿಕ ಹಲ್ಲೆಗಳು ನಡೆದರೆ ಇನ್ನು ನ್ಯಾಯಾಂಗ ವ್ಯವಸ್ಥೆಯ ರಕ್ಷಣೆ ಹೇಗೆ ಎಂದು ಕಾರಟಗಿ ತಾಲೂಕ ವಕೀಲರ ಸಂಘದ ಮಾಜಿ ಉಪಾಧ್ಯಕ್ಷ ಪರಶುರಾಮ್ ನಾಯಕ ಅವರು ಕಳವಳ ವ್ಯಕ್ತಪಡಿಸಿದ್ದಾರೆ

ಏಪ್ರಿಲ್ 16ರಂದು ಬೆಂಗಳೂರಿನಲ್ಲಿ ಹಿರಿಯ ವಕೀಲರು ಹಾಗೂ ಭಾರತೀಯ ವಕೀಲರ ಪರಿಷತ್ತಿನ ಸಹ ಅಧ್ಯಕ್ಷರು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಹಾಗೂ ಹಿರಿಯ ವಕೀಲರಾದ ಶ್ರೀ ಸದಾಶಿವ ರೆಡ್ಡಿಯವರ ಮೇಲೆ ಅಪರಿಚಿತರಿಂದ ಭೀಕರ ಹಲ್ಲೆ ನಡೆದಿರುವ ಘಟನೆಯನ್ನು ಖಂಡಿಸಿ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲು ಕಾರಟಗಿ ತಹಸಿಲ್ ಕಚೇರಿಯಲ್ಲಿ ಹಮ್ಮಿಕೊಂಡಿರುವ ಮೌನ ಪ್ರತಿಭಟನೆಯ ಸಂದರ್ಭದಲ್ಲಿ ಕಾರಟಗಿ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ಭಾಗವಹಿಸಿ ಕಾರಟಗಿ ತಹಸೀಲ್ದಾರರಾದ ಕುಮಾರಸ್ವಾಮಿ ಅವರ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಿದರು, ರಾಜ್ಯದಲ್ಲಿ ನ್ಯಾಯಾಂಗ ವ್ಯವಸ್ಥೆಯನ್ನು ಕಾಪಾಡುವ ವಕೀಲರ ಮೇಲೆ ಹಲ್ಲೆಗಳು ನಡೆದರೆ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಬೇಕು, ರಾಜ್ಯದ ವಕೀಲರಿಗೆ ಭದ್ರತೆಯನ್ನು ಒದಗಿಸಬೇಕು, ಹಿರಿಯ ವಕೀಲರಾದ ಸದಾಶಿವ ರೆಡ್ಡಿಯವರ ಮೇಲೆ ಹಲ್ಲೆ ಮಾಡಿದವರ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಲಾಯಿತು

ಈ ಸಂದರ್ಭದಲ್ಲಿ ಕಾರಟಗಿ ವಕೀಲರ ಸಂಘದ ಪದಾಧಿಕಾರಿಗಳಾದ ಮಾಜಿ ಉಪಾಧ್ಯಕ್ಷ ಪರಶುರಾಮ್ ನಾಯಕ್, ಮಹೇಶ್ ಸ್ವಾಮಿ ಕುಲಕರ್ಣಿ, ರಾಮಚಂದ್ರ ದೇವರ ಗುಡಿ,ಬಸವರಾಜ್ ಆರಾಪುರ, ನಾಗರಾಜ್ ಬೂದಿ, ಮಂಜುನಾಥ ಪುರ್ತಗೇರಿ, ಮಾರುತಿ ಹುಳ್ಕಿಹಾಳ, ಶರಣಪ್ಪ ರಾಂಪುರ, ರಾಚಪ್ಪ, ಬಸವರಾಜ ತಳವಾರ, ತ್ರಿಲೋಚನ ಬೂದಗುಂಪ, ಕೇಶವ ನಾಯಕ್, ಸುಮಾ ಹಿರೇಮಠ, ಕವಿತಾ, ಅಮರೇಗೌಡ,ಶ್ರೀಕಂಠಯ್ಯ ಸ್ವಾಮಿ, ಅಂಬಣ್ಣ ನಾಯಕ್, ವಿಜಯ್ ಕುಮಾರ್ ನವಲಿ, ಬಸವನಗೌಡ ,ಅಮರೇಗೌಡ ಸೇರಿದಂತೆ ಇತರರು ಇದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!