ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಿಂಗೇಶ್ ಕಲ್ಗುಡಿ ನೇತೃತ್ವದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬೃಹತ್ ಹೋರಾಟ

ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಿಂಗೇಶ ಕಲ್ಗುಡಿ ನೇತೃತ್ವದಲ್ಲಿ ಪೆಟ್ರೋಲ್ ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಬೃಹತ್ ಪ್ರತಿಭಟನೆ
ಕಾರಟಗಿ ; ಕೇಂದ್ರ ಬಿ.ಜೆ.ಪಿ ಸರ್ಕಾರದ ವಿರುದ್ಧ ಪೆಟ್ರೋಲ್ ಡೀಸೆಲ್, ಎಲ್.ಪಿ.ಜಿ ಗ್ಯಾಸ್ ಬೆಲೆ ಏರಿಕೆ ಹೆಚ್ಚಿಸುವುದನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಕೇಂದ್ರ ಬಿಜೆಪಿ ಸರ್ಕಾರವು ಜನ ವಿರೋಧಿ ಆಡಳಿತವನ್ನು ನಡೆಸುತ್ತಾ ದೇಶದ ಜನರು ಬಳಸುವ ದಿನನಿತ್ಯ ಬಳಸುವ ವಸ್ತು ಸಾಮಗ್ರಿ ಮತ್ತು ಡೀಸೆಲ್ ಪೆಟ್ರೋಲ್ ಮತ್ತು ಎಲ್ಪಿಜಿ ಗ್ಯಾಸ್ ಇವುಗಳ ಬೆಲೆ ಏರಿಕೆ ಮಾಡಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ ಎಂದು ಕೊಪ್ಪಳ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಲಿಂಗೇಶ್ ಕಲ್ಗುಡಿ ಅವರು ಆಗ್ರಹ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಆಡಳಿತವನ್ನು ವಿರೋಧಿಸಿ ಕೊಪ್ಪಳದಲ್ಲಿ ಹಮ್ಮಿಕೊಂಡ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು,
ನೂರಾರು ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಯುವ ಘಟಕದ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಹಾಗೂ ಕಾಶ್ಮೀರ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದರು ದೇಶದ ಪ್ರಜೆಗಳ ರಕ್ಷಣಾ ವಿಚಾರದಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಜ್ಯೋತಿ ಗೊಂಡಬಾಳ ಆರೋಪಿಸಿದರು. ಕೊಪ್ಪಳ ಪ್ರವಾಸಿ ಮಂದಿರದಿಂದ ಗಂಜಿ ಸರ್ಕಲ್ ವರೆಗೆ ನಡೆದ ಪ್ರತಿಭಟನೆ ಮೆರವಣಿಗೆ ನಡೆಯಿತು , ಈ ಕೂಡಲೇ ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಹಾಗೂ ಅಡುಗೆ ಅನಿಲ ಸಿಲಿಂಡರ್ ದರ ಇಳಿಕೆ ಮಾಡುವಂತೆ ಕೊಪ್ಪಳ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ
ಕೊಪ್ಪಳ ಯುವ ಕಾಂಗ್ರೆಸ್ ಜಿಲ್ಲಾದ್ಯಕ್ಷರು ಲಿಂಗೇಶ ಕಲ್ಗುಡಿ, ಜಿಲ್ಲಾ ಉಪಾಧ್ಯಕ್ಷ ಗವಿಸಿದ್ದನಗೌಡ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಮಲ್ಲಾಡದ, ಸಾಹಿಲ್ ಸಾಬ್, ಖಲಂದರ್ ಸಾಬ್, ಈರಣ್ಣ ಬದಾಮಿ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅದ್ಯಕ್ಷರು, ಅಯ್ಯಪ್ಪ ಹವಾಲ್ದಾರ್ ಕುಷ್ಟಗಿ ಬ್ಲಾಕ್ ಅದ್ಯಕ್ಷರು, ನಾಗರಾಜ ಭಂಗಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ರು, ಜೋಗದ ರವಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅದ್ಯಕ್ಷರು, ಬಾಬರ್ ಗಂಗಾವತಿ ನಗರ, ಸಿದ್ದು ಹೊಸಮಠ ಗಂಗಾವತಿ ಗ್ರಾಮೀಣ, ದೇವರಾಜ ಕಟ್ಟಿಮನಿ ಕನಕಗಿರಿ ವಿಧಾನಸಭಾ, ಮಂಜುನಾಥ ನಾಗಲಾಪೂರ ಕನಕಗಿರಿ ನಗರ, ಸುನೀಲ್‌ಮೂಲಿಮನಿ ಕಾರಟಗಿ ನಗರ, ಬಸು ಮೈಲಾಪುರ, ವಿಜಯ ಕಂಬಳಿ, ಹನುಮೇಶ ಹಿರೇಖೇಡ, ಶಿವು, ನಾಗರಾಜ, ಪಂಚಾಕ್ಷರಿ, ಅಮರೇಶ ಮಡಿವಾಳ, ಹನುಮೇಶ ಅಂಟರಠಾಣಾ ಇಯರರು ಇದ್ದರು.



