ಕೊಪ್ಪಳಜಿಲ್ಲಾ ಸುದ್ದಿಗಳು
ಕೊಪ್ಪಳದಲ್ಲಿ ಕೊಲೆಯಾದ ಗವಿಸಿದ್ದಪ್ಪನ ತಂದೆ ತಾಯಿ ಮತ್ತು ಅಕ್ಕನ ಮೇಲೆ ಪೋಕ್ಸೋ ಪ್ರಕರಣ

ಕೊಪ್ಪಳ: ಕೆಲದಿನಗಳ ಹಿಂದೆ ಕೊಪ್ಪಳದಲ್ಲಿ ಪ್ರೇಮ ವಿಚಾರಕ್ಕೆ ಕೊಲೆಯಾದ ಗವಿಸಿದ್ದಪ್ಪ ನಾಯಕ್ ಕೊಲೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಸಹಕರಿಸಿದ ಆರೋಪದಲ್ಲಿ ಮೃತ ಗವಿಸಿದ್ದಪ್ಪನ ತಂದೆ, ತಾಯಿ ಮತ್ತು ಸಹೋದರಿಯ ಮೇಲೆ ಕೊಪ್ಪಳ ಮಹಿಳಾ ಠಾಣೆಯಲ್ಲಿ ಪೋಕೋ ಪ್ರಕರಣ ದಾಖಲಾಗಿದೆ.
ಮೃತ ಗವಿಸಿದ್ದಪ್ಪನು ನನ್ನ ಅಪ್ರಾಪ್ತ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ವೆಸಗಿದ್ದಾನೆ. ಆತನ ಕೃತ್ಯಕ್ಕೆ ತಂದೆ-ತಾಯಿ ಮತ್ತು ಸಹೋದರಿ ಸಹಕರಿಸಿದ್ದಾರೆ. ನಮಗೆ ನ್ಯಾಯ ಕೊಡಿಸಿ ಎಂದು ಅಪ್ರಾಪ್ತ ಬಾಲಕಿಯ ತಾಯಿ ಮತ್ತು ಸಹೋದರಿ ಕೆಲದಿನಗಳ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಕುಳಿತು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಅಪ್ರಾಪ್ತ ಬಾಲಕಿಯ ತಾಯಿ ನೀಡಿದ ದೂರಿನ ಅನ್ವಯ, ಗವಿಸಿದ್ದಪ್ಪ ಹಾಗೂ ಅವರ ತಂದೆ-ತಾಯಿ, ಸಹೋದರಿಯ ಮೇಲೆ ಕೊಪ್ಪಳ ಮಹಿಳಾ ಠಾಣೆಯಲ್ಲಿ ಪೋಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.