ಕಾರಟಗಿ ಪಟ್ಟಣದ ರಾಮನಗರದಲ್ಲಿ ರಾತ್ರೋ ರಾತ್ರಿ ಆಸ್ತಿ ಒತ್ತುವರಿ ಆರೋಪ

ಕಾರಟಗಿ ಪಟ್ಟಣದ ರಾಮನಗರದಲ್ಲಿ ರಾತ್ರೋ ರಾತ್ರಿ ಕಲ್ಲು ಬಂಡೆಗಳು ಹಾಕಿ ಆಸ್ತಿ ಒತ್ತುವರಿ ಘಟನೆ ಬೆಳಕಿಗೆ
ಕಾರಟಗಿ ; ಇತ್ತೀಚಿಗೆ ಕಾರಟಗಿ ಪಟ್ಟಣದಲ್ಲಿ ಯಾರದ್ದೋ ಆಸ್ತಿಯನ್ನು ಇನ್ಯಾರೋ ಒತ್ತುವರಿ ಮಾಡಿಕೊಳ್ಳುವ,ಅತಿಕ್ರಮಣ ಪ್ರವೇಶ ಮಾಡುವಂತಹ ಘಟನೆಗಳು ಒಂದಲ್ಲ ಒಂದು ನಡೆಯುತ್ತಲೇ ಇರುತ್ತವೆ, ಅತಿಕ್ರಮಣ ಪ್ರವೇಶ ಮತ್ತು ಇಲ್ಲೀಗಲ್ ಒತ್ತುವರೆಯಂತಹ ಘಟನೆಗಳು ನ್ಯಾಯಾಲಯದ ತೀರ್ಪು ತಲೆದಂಡಕ್ಕೆ ಮಂಡೆ ಬಿಸಿ ಮಾಡಿಕೊಂಡು ಸೋತು ಸುಣ್ಣಾಗಿ ತಣ್ಣಗಾದ ಪ್ರಭಾವಿಗಳನ್ನು ಪಟ್ಟಣದಲ್ಲಿ ಕಾಣಬಹುದು ! ಆದರೂ ಕೂಡ ಕಾರಟಗಿ ಪಟ್ಟಣದಲ್ಲಿ ಅತಿಕ್ರಮಣ ಘಟನೆಗಳು ನಿಂತಿಲ್ಲ, ಅಂಥದ್ದೇ ಘಟನೆಯೊಂದು ಕಾರಟಗಿಯ 14 ನೆಯ ವಾರ್ಡ್ ರಾಮನಗರದಲ್ಲಿ ನಡೆದಿದೆ, ರಾಮನಗರದ ಸರ್ವೆ ನಂಬರ್ 440 ರಲ್ಲಿನ ಆಸ್ತಿ ಸಂಖ್ಯೆ 8-4-47/133 ನೆದ್ದರ ಆಸ್ತಿಯ ಮಾಲಕರಾದ ವಿರೇಶಪ್ಪ ತಂದೆ ಮುದುಕಪ್ಪ ಈಳಿಗೇರ ಇವರು ಆಸ್ತಿಯನ್ನು ಖರೀದಿ ಮಾಡಿ ಸುಮಾರು 35 ವರ್ಷಗಳೇ ಕಳೆದಿವೆ, ಆಸ್ತಿಯು ಇಂದಿಗೂ ಇವರ ಕಬ್ಜಾದಲ್ಲಿಯೇ ಇತ್ತು ಆದರೆ ಒಂದು ವಾರದ ಹಿಂದೆ ರಾತ್ರೋ ರಾತ್ರಿ ಯಾರೋ ಅನಾಮಿಕರು ವೀರೇಶಪ್ಪ ಇವರ ಸ್ಥಳದಲ್ಲಿ ಕಲ್ಲು ಬಂಡೆಗಳನ್ನು ಹಾಕಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪ ಕೇಳಿಬಂದಿದೆ,
ಈ ಕುರಿತು ಕಳವಳ ವ್ಯಕ್ತಪಡಿಸಿರುವ ವೀರೇಶಪ್ಪ ಇವರು ನಮ್ಮ ಆಸ್ತಿಯಲ್ಲಿ ಯಾರೋ ? ಕಲ್ಲು ಬಂಡೆ ಗೋಡೆ ನಿರ್ಮಿಸಿದ್ದಾರೆ, ಕಾನೂನಾತ್ಮಕವಾಗಿ ಆಸ್ತಿಯನ್ನು 1995ರಲ್ಲಿ ಖರೀದಿ ಮಾಡಿದ್ದೇವೆ ಹಾಗೂ ಉಪನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ಆಸ್ತಿಯನ್ನು ರಿಜಿಸ್ಟರ್ ಮಾಡಿಕೊಂಡಿದ್ದೇವೆ ಸುಮಾರು 35 ವರ್ಷಗಳಿಂದ ನಾವೇ ಕಬ್ಜಾದಲ್ಲಿದ್ದೇವೆ, ಆದರೆ ಏಕಾಏಕಿ ರಾತ್ರೋರಾತ್ರಿ ನಮ್ಮ ಸ್ಥಳವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಈ ಕುರಿತು ಪುರಸಭೆ ಅಧಿಕಾರಿಗಳಿಗೆ ದೂರು ನೀಡುತ್ತೇವೆ ಹಾಗೂ ಸಂಬಂಧಿಸಿದ ಇಲಾಖೆಗಳಿಗೆ ದೂರು ಕೊಟ್ಟು ಅತಿಕ್ರಮಣ ಮಾಡಿಕೊಂಡವರ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಲು ಮುಂದಾಗುತ್ತೇವೆ ಎಂದಿದ್ದಾರೆ