ತಾಲೂಕ ಸುದ್ದಿಗಳು
ಕಾರಟಗಿ ಪಟ್ಟಣದ ಇಂದಿರಾನಗರದಲ್ಲಿ ನೂತನ ವಿದ್ಯುತ್ ಸ್ಥಂಭಗಳ ಅಳವಡಿಕೆ ಸಾರ್ವಜನಿಕರಿಂದ ಮೆಚ್ಚುಗೆ

ಕಾರಟಗಿ ; ಕರ್ನಾಟಕ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕಾರಟಗಿ ವಿಭಾಗದ ನಾಮ ನಿರ್ದೇಶಕರಾದ ಹನುಮೇಶ ನಡಲಮನಿ ವಿನಂತಿಯ ಮೇರೆಗೆ ಕಾರಟಗಿ ಪಟ್ಟಣದ ಇಂದೀರಾನಗರದಲ್ಲಿ ಶಿಥಿಲಾವಸ್ಥೆಯಲ್ಲಿರುವ ಹಳೆಯ ವಿದ್ಯುತ್ ಸ್ಥಂಭಗಳನ್ನು ತೆರವುಗೊಳಿಸಿ ಹೊಸ ವಿದ್ಯುತ್ ಸ್ಥಂಭಗಳನ್ನು ಅಳವಡಿಸಲಾಯಿತು.
ಮಳೆ ಗಾಳಿಗೆ ಹಳೆಯ ವಿದ್ಯುತ್ ಸ್ಥಂಭಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ನಾಮ ನಿರ್ದೇಶಕರಾದ ಹನುಮೇಶ್ ನಡಲಮನಿ ಅವರು ಕೆಇಬಿ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು ಹೀಗಾಗಿ ಕೆಇಬಿ ಅಧಿಕಾರಿಗಳು ಇಂದಿರಾನಗರದಲ್ಲಿರುವ ಕೆಲವು ಶಿಥಿಲಾವಸ್ತೆ ವಿದ್ಯುತ್ ಸ್ಥಂಭಗಳನ್ನು ತೆರವುಗೊಳಿಸಲಾಯಿತು, ಇಂದಿರಾ ನಗರದ ವಾರ್ಡಿನ ನಿವಾಸಿಗಳು ಹನುಮೇಶ್ ನಡಲಮನಿ ಅವರ ಉತ್ತಮ ಕಾರ್ಯಕ್ಕೆ ಮತ್ತು ಅಧಿಕಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ನಾಮ ನಿರ್ದೇಶಕ ಅಧಿಕಾರ ಅವಧಿಯಲ್ಲಿ ವಿದ್ಯುತ್ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹಾರ ಮಾಡುವುದಾಗಿ ಹನುಮೇಶ್ ನಡಲಮನಿ ತಿಳಿಸಿದ್ದಾರೆ