ಗಂಗಾವತಿ; ತಾಲೂಕಿನ ಶ್ರೀರಾಮಾನಗರದ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿನಿಯಾದ ಎಂ ಶ್ರೀದೇವಿ ತಂದೆ ಮಹಾಂಕಾಳಪ್ಪ ಇವರು 2025 ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ 625 ಕ್ಕೆ 582 (93.13%) ಅಂಕಗಳನ್ನು ಪಡೆದು ಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದವರ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿ ಸೇರ್ಗಡೆಯಾಗಿದ್ದಾರೆ. ಈ ವಿದ್ಯಾರ್ಥಿನಿ ಒಂದರಿಂದ ಐದನೇ ತರಗತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಿಕ್ಯಾಂಪನಲ್ಲಿ 6 ರಿಂದ 10 ನೇ ತರಗತಿವರೆಗೆ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಶ್ರೀರಾಮನಗರದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ
ಮೂರನೇ ರಾಂಕ್ ಪಡೆದು ಆ ಶಾಲೆಗೆ ಕೀರ್ತಿಯನ್ನು ತಂದಿರುತ್ತಾಳೆ ಈ ಕುರಿತು ಶಿಕ್ಷಕರ ವೃಂದ ಮತ್ತು ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.ಕಾರಟಗಿ ಇಂದಿರಾನಗರದ ಸರ್ವೋದಯ ವಿದ್ಯಾ ಪ್ರಸಾರಕ ಸಂಘ ಕಾರ್ಯದರ್ಶಿಗಳು ಶಿವಪ್ಪ ಮ್ಯಾಗಳ ಮನಿ ಗಾಳೇಶ್ ಮ್ಯಗಳಮನಿ ವೀರೇಶ್ ಗಿಣಿವಾರ ಆಂಜನೇಯ ತಾವರಗೇರ ಹಾಗೂ ಸಮಾಜದ ಗುರುಹಿರಿಯರು ಹಾಗೂ ಮುಖಂಡರು