ದೇಶ

ಪ್ರೊ.ಸಿದ್ದು ಯಾಪಲಪರವಿ ಅವರಿಂದ ಯುರೋಪ್ ರಾಷ್ಟ್ರಗಳಲ್ಲಿ ವಿಶೇಷ ಉಪನ್ಯಾಸ

ಸಾಹಿತಿ, ವಚನ ಟಿವಿ ಪ್ರಧಾನ ಸಂಪಾದಕ ಪ್ರೊ.ಸಿದ್ದು ಯಾಪಲಪರವಿ ಅವರಿಂದ ಯುರೋಪ್ ರಾಷ್ಟ್ರಗಳಲ್ಲಿ ವಿಶೇಷ ಉಪನ್ಯಾಸ

ನಾಡಿನ ಹೆಸರಾಂತ ಸಾಹಿತಿ, ಬಸವತತ್ವ ಚಿಂತಕ ಹಾಗೂ ವಚನ ಟಿವಿಯ ಮುಖ್ಯಸ್ಥ ಪ್ರೊ.ಸಿದ್ದು ಯಾಪಲಪರವಿ ಅವರು ಈ ತಿಂಗಳು ಎಂಟರಿಂದ ಇಪ್ಪತ್ತು ದಿನಗಳ ಕಾಲ ಇಂಗ್ಲೆಂಡ್, ಫ್ರ್ಯಾನ್ಸ್, ಜರ್ಮನಿ, ಸ್ವಿಜರ್ಲ್ಯಾಂಡ್ ಹಾಗೂ ಇತರ ಎಂಟು ರಾಷ್ಟ್ರಗಳಲ್ಲಿ ಪ್ರವಾಸ ಮಾಡಲಿದ್ದರೆ.

ಬೆಂಗಳೂರಿನ ರಾಷ್ಟ್ರೀಯ ಬಸವ ಪ್ರತಿಷ್ಠಾನ, ಪರಮಪೂಜ್ಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಆಯೋಜನೆ ಮಾಡಿರುವ ಬಸವತತ್ವ ಚಿಂತನ ಗೋಷ್ಠಿಯಲ್ಲಿ ಪ್ರಧಾನ ಉಪನ್ಯಾಸಕರಾಗಿ ಪಾಲ್ಗೊಂಡು ‘ಜಗತ್ತಿನ ಮೊದಲ ಪಾರ್ಲಿಮೆಂಟ್ ಅನುಭವ ಮಂಟಪ ಹಾಗೂ ವಚನಗಳ ಜಾಗತಿಕ ಮೌಲ್ಯಗಳು’ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. ಕಳೆದ ವರ್ಷ ಜೂನ್ ತಿಂಗಳಲ್ಲಿ ಜಪಾನ್, ನವೆಂಬರ್ ತಿಂಗಳಲ್ಲಿ ಇಂಡೋನೇಷ್ಯಾ ಬಾಲಿಯಲ್ಲಿ ಪ್ರವಾಸ ಮಾಡಿ, ವಿವಿಧ ಕಾರ್ಯಕ್ರಮಗಳಲ್ಲಿ ಉಪನ್ಯಾಸ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಕಸಾಪ ಪದಾಧಿಕಾರಿಗಳು ಹಾಗೂ ಸಾಹಿತ್ಯಾಸಕ್ತರು ಪ್ರೊ.ಸಿದ್ದು ಯಾಪಲಪರವಿ ಅವರನ್ನು ಅಭಿನಂದಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!