ಗಂಗಾವತಿ
ಎಸ್ ಎಸ್ ಎಲ್ ಸಿ ಫಲಿತಾಂಶ ಲಿಟಲ್ ಆರ್ಟ್ಸ್ ಶಾಲೆಗೆ ವಿದ್ಯಾರ್ಥಿ ಮೈತ್ರಿ ಟಾಪರ್

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಟಾಪರ್ ಆದ ಮೈತ್ರಿ , ಲಿಟಲ್ ಹಾರ್ಟ್ಸ್ ಶಾಲೆಯ ಕೀರುತಿ ಬೆಳಗಿದ ವಿಧ್ಯಾರ್ಥಿನಿ
ಗಂಗಾವತಿ : 2024- 25ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶದಲ್ಲಿ ಪ್ರತಿಷ್ಠಿತ ಲಿಟಲ್ ಹಾರ್ಟ್ ವಿದ್ಯಾಸಂಸ್ಥೆ ಯ ವಿದ್ಯಾರ್ಥಿನಿ ಕುಮಾರಿ ಮೈತ್ರಿ ತಂದೆ ರಾಚಪ್ಪ ಸಿದ್ದಾಪುರ ಇವರು ಪರೀಕ್ಷಾ ಫಲಿತಾಂಶದಲ್ಲಿ 625 ಕ್ಕೆ 611 ಶೇಕಡವಾರು {97,76%} ಅಂಕ ಪಡೆದು ಶಾಲೆಗೆ ಅಗ್ರಸ್ಥಾನ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ
ಪರೀಕ್ಷಾ ಪಲಿತಾಂಶದಲ್ಲಿ ಉನ್ನತ ಸಾಧನೆ ಗೈದ ವಿದ್ಯಾರ್ಥಿನಿ ಕುಮಾರಿ ಮೈತ್ರಿ ಸಿದ್ದಾಪುರ, ಇವರಿಗೆ ಲಿಟ್ಲ್ ಹಾರ್ಟ್ಸ್ ಶಾಲಾ ಆಡಳಿತ ಮಂಡಳಿಯ , ಮುಖ್ಯೋಪಾಧ್ಯಾಯರು, ಶಾಲಾ ಶಿಕ್ಷಕ ಶಿಕ್ಷಕಿಯೇತರರು, ಸಿಬ್ಬಂದಿಗಳು ಸೇರಿದಂತೆ ವಿದ್ಯಾರ್ಥಿನಿಯ ಪಾಲಕರು, ಕುಟುಂಬಸ್ಥರು, ಸ್ನೇಹಿತರು ವಿದ್ಯಾರ್ಥಿಯ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸ ಪ್ರಗತಿಯತ್ತ ಮುನ್ನಡೆಯಲಿ ಎಂದು ಹಾರೈಸಿ ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದ್ದಾರೆ