
ಇಂದು ಗಂಗಾವತಿಯ ನಗರಸಭೆ ಕಾರ್ಯಾಲಯದಲ್ಲಿ ಶಾಸಕರಾದ ಗಾಲಿ ಜನಾರ್ದನ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ವಿವಿಧ ವಸತಿ ಯೋಜನೆಗಳ ಅಡಿ ಅರ್ಹ ಫಲಾನುಭವಿಗಳಿಗೆ ವಸತಿ ಒದಗಿಸುವ ಉದ್ದೇಶದಿಂದ ಆಶ್ರಯ ಸಮಿತಿ ಸಭೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಶ್ರೀ ಮೌಲಾ ಸಾಬ್, ಉಪಾಧ್ಯಕ್ಷರಾದ ಶ್ರೀಮತಿ ಪಾರ್ವತಿ ದುರ್ಗೇಶ್ ದೊಡ್ಮನಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ರಮೇಶ್ ಚೌಡ್ಕಿ, ನಗರಸಭೆಯ ತಹಶೀಲ್ದಾರ್ ಶ್ರೀ ಯು.ನಾಗರಾಜ್, ಪೌರಾಯುಕ್ತರಾದ ಶ್ರೀ ವಿರುಪಾಕ್ಷಮೂರ್ತಿ, ಅಧಿಕಾರಿಗಳಾದ ಶ್ರೀ ಸುಭಾಶ್, ಶ್ರೀಮತಿ ಲಕ್ಷ್ಮೀದೇವಿ, ಶ್ರೀ ರಾಜಶೇಖರ್ ಸೇರಿ ಇತರರು ಉಪಸ್ಥಿತರಿದ್ದರು.




