ರೈತರ ಜಮೀನುಗಳು ವಕ್ಫ್ ಆಸ್ತಿ ಹೇಗಾಯಿತು ? ಜಿಲ್ಲಾಧಿಕಾರಿಗಳೇ ನೀವೇ ಉತ್ತರಿಸಬೇಕು. ಶರಣೇಗೌಡ ಕೇಸರಹಟ್ಟಿ ಆಗ್ರಹ*
ಜಿಲ್ಲೆಯ ರೈತರ ಆಸ್ತಿಗಳನ್ನು ವಕ್ಫ್ ಹೆಸರಲ್ಲಿ ವರ್ಗಾವಣೆಗೊಳಿಸಿರುವುದಕ್ಕೆ ದಾಖಲೆಗಳ ಸಮೇತ ಉತ್ತರಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ವಿರುದ್ಧ ನ್ಯಾಯಾಲಯದಲ್ಲಿ ಧಾವೆ ಹೂಡಬೇಕಾಗುತ್ತದೆ ಎಂದು ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ರಾಜ್ಯಧ್ಯಕ್ಷರಾದ ಶರಣೆಗೌಡ ಕೇಸರಹಟ್ಟಿ ಇವರು ಆಗ್ರಹ ವ್ಯಕ್ತಪಡಿಸಿದ್ದಾರೆ. ರೈತರ ಜಮೀನುಗಳನ್ನು ವಕ್ಫ್ ಆಸ್ತಿಯನ್ನಾಗಿ ವರ್ಗಾವಣೆಗೊಳಿಸಿರುವ ಕುರಿತು ಮಾತನಾಡಿದ ಅವರು ಜಿಲ್ಲಾದ್ಯಾಂತ ಕಂದಾಯ ಇಲಾಖೆಯ ರೈತರ ಆಸ್ತಿಗಳನ್ನು ವಕ್ಫ್ ಹೆಸರಲ್ಲಿ ವರ್ಗಾವಣೆಯಾಗಿರುವುದರಿಂದ ರೈತರು ಅಂತಂಕದಲ್ಲಿದ್ದು ಅದಕ್ಕೆ ಜಿಲ್ಲಾಧಿಕಾರಿಗಳೇ ಉತ್ತರಿಸಬೇಕಾಗಿದೆ ರೈತರು ಜಮೀನು ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ ರೈತರು ಉಳುಮೆ ಮಾಡುತ್ತಿದ್ದ ಜಮೀನು ವಕ್ಫ್ ಆಸ್ತಿ ಎಂದು ನಮೂದಿಸಲಾಗಿದ್ದು ಇದು ಕಾನೂನು ಬಾಹಿರವಾಗಿದೆ ಅಲ್ಲದೆ ಕಂದಾಯ ಇಲಾಖೆಯ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ.
ವಾಸ್ತವಿಕವಾಗಿ ರೈತರ ಜಮೀನುಗಳು ವಕ್ಫ್ ಆಸ್ತಿ ಎಂಬುದಕ್ಕೆ ಪೂರಕ ಪುರಾವೆ ಇಲ್ಲ ಆದಾಗ್ಯೂ ಒಂದು ವೇಳೆ ಇದ್ದರೂ ವಕ್ಫ್ ಮಂಡಳಿ ಅದು ವಕ್ಫ್ ಆಸ್ತಿ ಎಂದು ಸಾಬೀತಪಡಿಸಬೇಕಾಗಿದೆ ವಕ್ಫ್ ಕಾಯ್ದೆಯ ಸೆಕ್ಷನ್ 28 ಮತ್ತು 29 ರಲ್ಲಿ ವಕ್ಫ್ ಮಂಡಳಿ ಮತ್ತು ಅದರ ಮುಖ್ಯಸ್ಥರು ವಕ್ಫ್ ಮಂಡಳಿ ನಿರ್ಧಾರಗಳನ್ನು ಅನುಷ್ಠಾನಗೊಳಿಸಲು ಜಿಲ್ಲೆಯ ಮೆಜಿಸ್ಟ್ರೇಟ್ ಹೆಚ್ಚುವರಿ ಜಿಲ್ಲಾ ಮೆಜಿಸ್ಟ್ರೇಟ್ ಅಥವಾ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ನಿರ್ದೇಶನಗಳನ್ನು ಪಾಲಿಸಬೇಕಾಗುತ್ತದೆ. ಆದರೆ ಯಾವುದೇ ನಿರ್ದೇಶನಗಳ ಆದೇಶಗಳಿಲ್ಲದೆ ಕಾನೂನುಬಾಹಿರವಾಗಿ ಕಂದಾಯ ಇಲಾಖೆಯ ನಿಯಮಾವಳಿಗಳ ಉಲ್ಲಂಘನೆ ಮಾಡಿ ಜಿಲ್ಲೆಯ ರೈತರ ಆಸ್ತಿಗಳನ್ನು ವಕ್ಫ್ ಆಸ್ತಿಗಳನ್ನಾಗಿ ಮಾರ್ಪಾಡುಗೊಳಿಸಿ ಕೊಪ್ಪಳ ಜಿಲ್ಲಾಧಿಕಾರಿಗಳಾದ ನೀವು ಜಿಲ್ಲೆಯ ರೈತರನ್ನು ತೀವ್ರತರದ ಆತಂಕಕ್ಕೆ ಒಳಗಾಗಿಸಿದ್ದೀರಿ. ಇದೊಂದು ಗಂಭೀರ ಪ್ರಕರಣವಾಗಿದ್ದು, ಜಿಲ್ಲೆಯ ಜಿಲ್ಲಾಧಿಕಾರಿಗಳಾದ ನೀವೇ ಇದಕ್ಕೆ ನೇರ ಹೊಣೆಗಾರರು ಎಂದು ಆಗ್ರಹ ವ್ಯಕ್ತಪಡಿಸಿದರು.
ಈ ಕೂಡಲೇ ವಕ್ಫ್ ಆಸ್ತಿ ಎಂದು ಮಾರ್ಪಾಡುಗೊಂಡಿರುವ ಭೂಮಿಗಳು,ಸರ್ಕಾರಿ ಜಾಗಗಳು, ರೈತರ ಭೂಮಿಗಳು ಮತ್ತು ಸರ್ಕಾರಿ ಜಾಗಗಳು ಹಾಗೂ ಧಾರ್ಮಿಕ ಸ್ಥಳಗಳು ಎಲ್ಲವೂ ಪುನಃ ಮೊದಲಿನಂತೆ ರೈತರ ಹೆಸರಲ್ಲಿ ಮತ್ತು ಧಾರ್ಮಿಕ ಸಂಸ್ಥೆಗಳ ಹೆಸರಲ್ಲಿ ಯಥಾ ಸ್ಥಿತಿಯಲ್ಲಿ ಇಡಬೇಕು ಹಾಗೂ ರೈತರ ಆಸ್ತಿಗಳನ್ನು ವಕ್ಫ್ ಆಸ್ತಿಗಳನ್ನಾಗಿ ಪರಿವರ್ತಿಸಲು ಸರ್ಕಾರದಿಂದ ಬಂದಿರುವ ನೋಟಿಫಿಕೇಶನ್ ದಾಖಲೆಗಳೊಂದಿಗೆ ಒಂದು ವಾರದೊಳಗೆ ಉತ್ತರಿಸಲು ಜಿಲ್ಲಾಧಿಕಾರಿಗಳಿಗೆ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘಟನೆ ವತಿಯಿಂದ ಪತ್ರ ಬರೆಯಲು ನಿರ್ಧರಿಸಿದ್ದು ಹಾಗೂ ರೈತ ಸಂಕುಲವನ್ನು ಆತಂಕಕ್ಕೊಳಗಾಗಿಸಿದ ಜಿಲ್ಲಾಡಳಿತ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿ ಘನವೆತ್ತ ರಾಜ್ಯ ಉಚ್ಚನ್ಯಾಲಯದಲ್ಲಿ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸುತ್ತೇವೆ ಎಂದಿದ್ದಾರೆ.
ವರದಿ: ಸುಂದರ್ ರಾಜ್ ಕಾರಟಗಿ