ಕಾರಟಗಿ

ಕಾರಟಗಿ ಪ್ರತಿಷ್ಠಿತ ಕೇಂಬ್ರಿಡ್ಜ್ ಶಾಲೆಯ 600 ವಿದ್ಯಾರ್ಥಿಗಳಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ.! ಯೋಗ ಮನುಷ್ಯನ ದೇಹಕ್ಕೆ ರಕ್ಷಾ ಕವಚದಂತೆ ಕೆಲಸ ಮಾಡುತ್ತದೆ…..ಮಲ್ಲಿಕಾರ್ಜುನ ಬಿಚಗಲ್ ಕಾರ್ಯದರ್ಶಿಗಳು

ವರದಿ ಸುಂದರರಾಜ್ BA ಕಾರಟಗಿ

ಕಾರಟಗಿ ಪ್ರತಿಷ್ಠಿತ ಕೇಂಬ್ರಿಡ್ಜ್ ಶಾಲೆಯ 600 ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ವಿದ್ಯಾರ್ಥಿಗಳಲ್ಲಿ ಯಾವುದೇ ರೀತಿಯ ಋಣಾತ್ಮಕ ಆಲೋಚನೆಗಳು ಬರದಂತೆ ಯೋಗವು ಮನುಷ್ಯನ ದೇಹಕ್ಕೆ ರಕ್ಷಾ ಕವಚದಂತೆ ಕೆಲಸ ಮಾಡುತ್ತದೆ..ಮಲ್ಲಿಕಾರ್ಜುನ ಬಿಚಗಲ್ ಕಾರ್ಯದರ್ಶಿಗಳುಕಾರಟಗಿ ; ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಕಾರಟಗಿ ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಈ ಕುರಿತು ಮಾತನಾಡಿದ ಶಾಲೆಯ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ರವರು ಮಾತನಾಡಿ ದೇಶದ್ಯಾಂತ ವರ್ಷಕ್ಕೊಮ್ಮೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಣೆ ಮಾಡುತ್ತಿರುವುದು ವಾಡಿಕೆ ಆದರೆ ಪ್ರತಿದಿನವೂ ಕೂಡ ನಮ್ಮ ವಿದ್ಯಾ ಸಂಸ್ಥೆಯಲ್ಲಿ ಮಕ್ಕಳಿಗೆ ಪಠ್ಯದ ಜೊತೆಗೆ ಯೋಗ ಕುರಿತು ನಿತ್ಯವೂ ಕೂಡ ಹೇಳಿಕೊಡುತ್ತೇವೆ ಇಂದಿನ ದಿನಮಾನಗಳಲ್ಲಿ ಯುವಪೀಳಿಗೆ ಹಲವು ದುಶ್ಚಟಗಳಿಗೆ   ವ್ಯಸನಿಗಳಾಗುತ್ತಿದ್ದಾರೆ ಇದು ಬದಲಾಗಬೇಕು ಎಂದರು ಯೋಗದಿಂದ ದೇಹ ಮತ್ತು ಮಾನಸಿಕ ಸ್ಥಿತಿ ಆರೋಗ್ಯಕರವಾಗಿರುತ್ತದೆ ವಿದ್ಯಾರ್ಥಿಗಳಲ್ಲಿ ಯಾವುದೇ ರೀತಿಯ ಋಣಾತ್ಮಕ ಆಲೋಚನೆಗಳು ಬರದಂತೆ ಯೋಗವು ಮನುಷ್ಯನ ದೇಹಕ್ಕೆ ರಕ್ಷಾ ಕವಚದಂತೆ ಕೆಲಸ ಮಾಡುತ್ತದೆ,

ಸತತ 11 ವರ್ಷಗಳಿಂದ ನಮ್ಮ ವಿದ್ಯಾ ಸಂಸ್ಥೆಯಲ್ಲಿ ಯೋಗ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದೇವೆ. ಕಳೆದ ವರ್ಷ ಕಾರಟಗಿ ಬಸ್ಟ್ಯಾಂಡ್ ಮುಂಭಾಗದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳಿಂದ ಯೋಗ ಕುರಿತು ಸಾರ್ವಜನಿಕವಾಗಿ ಪ್ರಾಯೋಜಿತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಅದರಿಂದಾಗಿ ಸಾರ್ವಜನಿಕವಾಗಿ ಯೋಗದ ಮಹತ್ವವನ್ನು ತಿಳಿಸಲು ಪ್ರಯತ್ನವನ್ನು ಮಾಡಲಾಗಿತ್ತು. ಈ ವರ್ಷ ನಮ್ಮ ವಿದ್ಯಾ ಸಂಸ್ಥೆಯಿಂದ ಏಕಕಾಲದಲ್ಲಿ 600 ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು ಎಂದರು
ಈ ಸಂದರ್ಭದಲ್ಲಿ ಕೇಂಬ್ರಿಡ್ಜ್ ಶಾಲೆಯ ಅಧ್ಯಕ್ಷರಾದ ಶ್ರೀಮತಿ ಲೀಲಾ ಮಲ್ಲಿಕಾರ್ಜುನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಬಿಚಗಲ್ ಪ್ರಾಂಶುಪಾಲರಾದ ಹನುಮಂತಪ್ಪ ಯೋಗ ಶಿಕ್ಷಕರಾದ ಬಸವರಾಜ ಯರಡೋಣ ಹಾಗೂ ಶಾಲೆ ಶಿಕ್ಷಕ ಸಿಬ್ಬಂದಿಯವರು ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!