ಕಾರಟಗಿ ಪಟ್ಟಣದ ಅಭಿವೃದ್ಧಿ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಪ್ರಾಧಾನ್ಯತೆ ಆರೋಪಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ…… ಸಾಬಣ್ಣ ಕಟ್ಟಿಕಾರ್
ವರದಿ ಸುಂದರರಾಜ್ BA ಕಾರಟಗಿ

ಕಾರಟಗಿ ಪಟ್ಟಣದ ಅಭಿವೃದ್ಧಿ ಸಾರ್ವಜನಿಕ ಹಿತಾಸಕ್ತಿಗೆ ಪ್ರಾಧಾನ್ಯತೆ ಆರೋಪಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ……….ಸಾಬಣ್ಣ ಕಟ್ಟಿಕಾರ್ ಮುಖ್ಯಾಧಿಕಾರಿ
ಕಾರಟಗಿ : ಪುರಸಭೆಯ ಖಡಕ್ ಅಧಿಕಾರಿ ಸಾಬಣ್ಣ ಕಟ್ಟಿಕಾರ್ ಪಟ್ಟಣದ ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗುತ್ತಿರುವುದು ಸಾರ್ವಜನಿಕರಲ್ಲಿ ಜನಪ್ರತಿನಿಧಿಗಳಲ್ಲಿ ಅಧಿಕಾರಿಯ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ, ಸಾಮಾನ್ಯರಲ್ಲಿ ಸಾಮಾನ್ಯನಂತೆ ಸಾರ್ವಜನಿಕರಲ್ಲಿ ಒಬ್ಬರಂತೆ ಕಾರ್ಮಿಕರ ಜೊತೆ ಕಾರ್ಮಿಕನಂತೆ ಎಲ್ಲರ ಜೊತೆ ಒಂದಾಗಿ ಬೆರೆತು ಜನಸ್ನೇಹಿಯಾಗಿ ಅಧಿಕಾರಿ ಎನ್ನುವ ಹಮ್ಮು ಬಿಮ್ಮು ತೋರಿಸದೆ ಪಟ್ಟಣದ ಅಭಿವೃದ್ಧಿ ಕಾರ್ಯಗಳಿಗೆ ತನ್ನನ್ನು ತಾನು ತೊಡಗಿಸಿಕೊಂಡಿರುವುದು ಶ್ಲಾಘನೀಯ, ಹೌದು ಕಾರಟಗಿ ಪುರಸಭೆಯ ನೂತನ ಅಧಿಕಾರಿ ಸಾಬಣ್ಣ ಕಟ್ಟಿಕಾರ್ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಖಡಕ್ ಜನಸ್ನೇಹಿ ಅಧಿಕಾರಿ ಎನಿಸಿಕೊಂಡಿದ್ದಾರೆ, ಆ ಕಾರಣಕ್ಕಾಗಿಯೇ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಇತ್ತೀಚಿಗೆ ಪುರಸಭೆ ಅಧಿಕಾರಿಯನ್ನು ಸಾರ್ವಜನಿಕವಾಗಿಯೇ ಮೆಚ್ಚಿಕೊಂಡಿದ್ದರು, ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ಪಾಲಿಸಿ ಅಭಿವೃದ್ಧಿ ಮತ್ತು ಸಾರ್ವಜನಿಕರ ಕಾರ್ಯಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಅಡ್ಡಿ ಆರೋಪಗಳು ಬರುವುದು ಸಹಜ, ಅಂಥಹ ಸಂದರ್ಭದಲ್ಲಿ ಇಲಾಖಾ ನಿಯಮಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಿ ಅಧಿಕಾರಿಗಳ ಕರ್ತವ್ಯ ಪ್ರಜ್ಞೆ ಪ್ರತಿಕ್ರಿಯೆಯಾಗಿರುತ್ತದೆ,
ಕಾರಟಗಿ ಪಟ್ಟಣದ 6 ಮತ್ತು 7ನೇ ವಾರ್ಡಿನಲ್ಲಿ 2023/24 ನೇ ಸಾಲಿನಲ್ಲಿ 15 ನೆಯ ಹಣಕಾಸು ಯೋಜನೆ ಅಡಿಯಲ್ಲಿ ಅನುಮೋದನೆಗೊಂಡು ಸ್ಥಗಿತಗೊಂಡಿರುವ ಕಾಮಗಾರಿಗೆಯ ಕೆಲಸಕ್ಕೆ ಚಾಲನೆ ನೀಡಿದ್ದಾರೆ,15 ನೆಯ ಹಣಕಾಸಿನ ಸುಮಾರು 15 ಲಕ್ಷ ವೆಚ್ಚದ ಚರಂಡಿ ಹಾಗೂ ಇಂಟರ್ಲಾಕ್ ಫೇವರ್ ಅಳವಡಿಕೆ ಕಾಮಗಾರಿ ಕೈಗೆತ್ತಿಕೊಂಡಿರುವುದಕ್ಕೆ ವಾರ್ಡಿನ ಜನರು ಹರ್ಷ ವ್ಯಕ್ತಪಡಿಸಿದ್ದಾರೆ,
ವಾರ್ಡುಗಳಲ್ಲಿ ಚರಂಡಿ ಮತ್ತು ಇಂಟರ್ಲಾಕ್ ಫೇವರ್ ಅಳವಡಿಕೆಯಿಂದ ಚರಂಡಿಯ ನೀರು ಸರಾಗವಾಗಿ ಹರಿಯುತ್ತದೆ ಮತ್ತು ಮಳೆಯ ನೀರು ಎಲ್ಲೆಂದರಲ್ಲಿ ನಿಲ್ಲದಂತೆ ಚರಂಡಿಗೆ ಹರಿಯುವುದರಿಂದ ವಾರ್ಡ್ಗಳು ಸ್ವಚ್ಛವಾಗಿರುತ್ತವೆ ಮತ್ತು ವಿಶೇಷವಾಗಿ ಮಳೆಗಾಲದಲ್ಲಿ ಸಾರ್ವಜನಿಕರು ತಿರುಗಾಡುವ ಸಂದರ್ಭದಲ್ಲಿ ಇಂಟರ್ಲಾಕ್ ಫೇವರ್ ಅಳವಡಿಕೆಯಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುವುದಿಲ್ಲ,
ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಅಡಿಯಲ್ಲಿ ಪುರಸಭೆ ನಗರಸಭೆ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಗಾಂವ್ ಠಾಣಾ ಪ್ರದೇಶ ವ್ಯಾಪ್ತಿಯಲ್ಲಿ ನಗರಾಭಿವೃದ್ಧಿ ಮತ್ತು ಸಾರ್ವಜನಿಕ ಹಿತಾಸಕ್ತಿಗಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಇಲಾಖೆ ತನ್ನದೇ ಆದ ಹಕ್ಕು ಮತ್ತು ಜವಾಬ್ದಾರಿಗಳನ್ನು ಹೊಂದಿದೆ, ಆ ನಿಟ್ಟಿನಲ್ಲಿ ಕಾರಟಗಿ ಪುರಸಭೆ ವ್ಯಾಪ್ತಿಯಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳಿಗೆ ಯಾರೇ ಅಡ್ಡಿಪಡಿಸಿದರು ಪೌರಾಡಳಿತ ಇಲಾಖೆ ತನ್ನ ಕೆಲಸ ಮುನ್ನಡೆಸಿಕೊಂಡು ಹೋಗುತ್ತದೆ, ಆ ನಿಟ್ಟಿನಲ್ಲಿ ಸಾರ್ವಜನಿಕರು ಪುರಸಭೆಗೆ ಸಹಕರಿಸಿ ಪಟ್ಟಣದ ನೈರ್ಮಲ್ಯ ಮತ್ತು ಅಭಿವೃದ್ಧಿಗೆ ಕೈಜೋಡಿಸಬೇಕಾಗಿದೆ ಎಂದು ಪುರಸಭೆ ಮುಖ್ಯ ಅಧಿಕಾರಿ ಸಾಬಣ್ಣ ಕಟ್ಟಿಕಾರ್ ತಿಳಿಸಿದ್ದಾರೆ