ಭೀಮ ನಾಯ್ಕ ಗೆ ದಮ್ಮು ತಾಕತ್ತು ತೋರಿಸಿದ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್

ದಮ್ಮು ತಾಕತ್ತು ಸವಾಲು ಸ್ವೀಕರಿಸಿ ಅಧ್ಯಕ್ಷನಾಗಿ ಗೆದ್ದು ಬೀಗದ ಶಾಸಕ ಹಿಟ್ನಾಳ್
ಹುಲಿಗಿ :- ನಮ್ಮ ನಿರ್ದೇಶಕರ ಸಹಕಾರದೊಂದಿಗೆ ರೈತರ ಹಿತಕಾಪಾಡುವ ದೃಷ್ಟಿಯಲ್ಲಿ ಈ ಒಕ್ಕೂಟವನ್ನು ವಿಸ್ತರಿಸಿ ಇನ್ನು ಹೆಚ್ಚು ಅಭಿವೃದ್ಧಿ ಪಡಿಸುತ್ತೇವೆ ಎಂದು ರಾಯಚೂರು ಬಳ್ಳಾರಿ ಕೊಪ್ಪಳ ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನೂತನ ಅಧ್ಯಕ್ಷ ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಹೇಳಿದರು.
ಅವರು ಬಳ್ಳಾರಿಯಲ್ಲಿ ಮಾತನಾಡಿ ಇಂದು ನನ್ನ ದಮ್ಮು ಮತ್ತು ತಾಕತ್ತು ತೋರಿಸಲು ಅಧ್ಯಕ್ಷನಾಗಿದ್ದೇನೆ ಎಂದು ಪರೋಕ್ಷವಾಗಿ ಭೀಮನಾಯಕ್ ಅವರಿಗೆ ತಿರುಗೇಟು ನೀಡಿದರು.
ಅಧ್ಯಕ್ಷನಾಗಲೇಬೇಕು ಎಂದ ಪಣ ತೊಟ್ಟ ಹಿಟ್ನಾಳ್
ರಾಯಚೂರು ಬಳ್ಳಾರಿ ಕೊಪ್ಪಳ ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿರ್ದೇಶಕ ಚುನಾವಣೆಯಲ್ಲಿ ಹಿಟ್ನಾಳ್ ಬಣವನ್ನು ಸೋಲಿಸಲು ವಿರುದ್ದ ಬಣಕ್ಕೆ ಚುನಾವಣೆಯಲ್ಲಿ ಹಣದ ಸಹಾಯ ಮಾಡಿದ್ದರೆ ಎಂಬುದನ್ನರಿತ ಶಾಸಕ ಹಿಟ್ನಾಳ್ ಶತಾಯಗತಾಯದಿಂದ ಒಕ್ಕೂಟಕ್ಕೆ ನಾಮನಿರ್ದೇಶಕನಾಗುತ್ತಾನೆ. ದಮ್ಮು -ತಾಕತ್ತು ಇದ್ರೆ ಅಧ್ಯಕ್ಷ ಚುನಾವಣೆಗೆ ಸ್ಪರ್ಧೆ ಮಾಡಲಿ ನೋಡೋಣ ಎಂದ ಮಾಜಿ ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಭೀಮಾನಾಯಕ ಅವರ ಸವಾಲು ಸ್ವೀಕರಿಸಿ ತನ್ನ ಗೆಲುವಿಗೆ ಬೇಕಾದ ನಿರ್ದೇಶಕರನ್ನು ಒಂದಡೆ ಒಟ್ಟು ಗೂಡಿಸಿ ಸುಮಾರು ಎರಡು ವಾರಗಳ ಕಾಲ ಪ್ರವಾಸ ಮಾಡಿಸಿ ಇಂದು ನೆಡೆದ ಅಧ್ಯಕ್ಷ ಚುನಾವಣೆಯಲ್ಲಿ ಇಂದು ನಾಮಪತ್ರ ಸಲ್ಲಿಸಿಯೇ ಬಿಡುತ್ತಾರೆ. ಮೊದಲೇ ಸೋಲಿನ ಸುಳಿವು ಅರಿತ ಎದುರಾಳಿ ಭೀಮನಾಯಕ್ ಅವರು ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ನಾಮಪತ್ರ ಸಲ್ಲಿಸಲಿಲ್ಲ. ಹೀಗಾಗಿ ಅವಿರೋಧವಾಗಿ ಅಧ್ಯಕ್ಷನಾಗಿ ಆಯ್ಕೆಯಾದರು.

ಶಕ್ತಿ ಪ್ರದರ್ಶನ ಮಾಡಿದ ಶಾಸಕ ಹಿಟ್ನಾಳ್ ಸಹೋದರರು
ದಮ್ಮು ಇದ್ರೆ ತಾಕತ್ತು ಸವಾಲು ಸ್ವೀಕರಿಸಿ ದಮ್ಮು ತಾಕತ್ತನಿಂದಲೇ ಅಧ್ಯಕ್ಷನಾಗಿ ಗೆದ್ದು ಬೀಗಿದ ಹಿಟ್ನಾಳ್ ಕುಟುಂಬಕ್ಕೆ ಶಕ್ತಿ ತುಂಬಲು ಕೊಪ್ಪಳ ಕ್ಷೇತ್ರದ ಪ್ರತಿ ಹಳ್ಳಿ ಹಳ್ಳಿಯಿಂದ ಸಾವಿರಾರು ಜನರು, ಕಾರ್ಯಕರ್ತರು, ಮುಖಂಡರು ಸ್ವಯಂ ಪ್ರೇರಿತರಾಗಿ ಬಂದು ಹಿಟ್ನಾಳ್ ಸಹೋದರರಿಗೆ ಬಲ ತುಂಬಿದರು. ಪಟಾಕಿ ಸಿಡಿಸಿ ಸಿಹಿ ಹಂಚಿದರು. ಇದು ಒಂದು ರೀತಿ ಶಕ್ತಿ ಪ್ರದರ್ಶನವೇ ಎಂಬಂತೆ ಕಾಣುತಿತ್ತು.