ರಾಷ್ಟಿಯ ನವಜಾತು ಶಿಶು ಸಪ್ತಾಹ ಕಾರ್ಯಕ್ರಮ
ಕೊಪ್ಪಳ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ ಕೊಪ್ಪಳ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕಿನ್ನಾಳ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟಿಯ ನವಜಾತು ಶಿಶು ಸಪ್ತಾಹ ಕಾರ್ಯಕ್ರಮವು ನವೆಂಬರ್ 15 ರಂದು ಟಣಕನಕಲ್ ಗ್ರಾಮದಲ್ಲಿ ನಡೆಯಿತು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಮಾತನಾಡಿ ಜಿಲ್ಲೆಯಲ್ಲಿ ನವೆಂಬರ್ 15 ರಿಂದ ನ.21 ರವರೆಗೆ ರಾಷ್ಟಿಯ ನವಜಾತು ಶಿಶು ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಮತ್ತು ತಾಲೂಕಾ ಮಟ್ಟದ ಆಸ್ಪತ್ರೆಗಳಲ್ಲಿ ನವಜಾತ ಶಿಶುವಿನ ರಕ್ಷಣೆ ಸಿಗುವ ಸೇವಾ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿ, ಮಗು ಮತ್ತು ತಾಯಿಯನ್ನು ಒಂದೇ ಕೋಣೆಯಲ್ಲಿ ಇರಿಸಿ ಮತ್ತು ಮಗುವಿಗೆ ಬೇಡಿಕೆಯ ಮೇಲೆ ಆಹಾರವನ್ನು ನೀಡಲು ಅವಕಾಶ ಮಾಡಿಕೊಡಬೇಕು. ಯಾವುದೇ ಮಗು ಅಪೌಷ್ಠಿಕತೆಯಿಂದ ಬಳಲದಂತೆ ನೋಡಿಕೊಳ್ಳಲು ಸಾರ್ವಜನಿಕರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಡಚಪ್ಪ ಭೋವಿ, ಕಸ್ತೂರಮ್ಮ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಸರೋಜಾಬಾಯಿ, ಮಂಜುಳಾ, ಆಶಾ ಕಾರ್ಯಕರ್ತೆಯರಾದ ಬಸವಣ್ಣಮ್ಮ, ಮಂಜುಳಾ, ತಾಯಂದಿರು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.