ಕೊಪ್ಪಳಜಿಲ್ಲಾ ಸುದ್ದಿ

ಜಿಲ್ಲೆಯಲ್ಲಿ ಕನ್ನಡದ ನಾಮಫಲಕಗಳು ಕಡ್ಡಾಯವಾಗಬೇಕು : ಜಿ.ಎಸ್.ಗೋನಾಳ ಆಗ್ರಹ

ಕೊಪ್ಪಳ ೧೮. ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆ ಜಾರಿಯಾಗಿ ಹಲವಾರು ವರ್ಷಗಳು ಸಂದಿವೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಪ್ರತಿಯೊಂದು ಇಲಾಖೆ ಮತ್ತು ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು. ವ್ಯಾಪಾರ ವಹಿವಾಟುಗಳಲ್ಲಿ ಕನ್ನಡವನ್ನು ಮೊದಲ ಆದ್ಯ ಭಾಷೆಯನ್ನಾಗಿ ಬಳಸಬೇಕೆಂದು ನಿಯಮವನ್ನು ಹಲವು ವರ್ಷಗಳು ಕಳೆದಿವೆ.

ಕರ್ನಾಟಕ ಸರ್ಕಾರವು ಈಗಾಗಲೇ ಕನ್ನಡ ಬಳಕೆ ಬಗೆಗೆ ಕಾನೂನನ್ನು ಮತ್ತು ದಂಡ ವಿಧಿಸುವ ನಿಯಮಗಳನ್ನು ಜಾರಿ ಮಾಡಿದೆ. ಆದರೂ ಕೂಡ ಇದನ್ನು ಅಧಿಕಾರಿಗಳು ನಿರ್ಲಕ್ಷ ಮಾಡಿ. ಕನ್ನಡ ಬಳಕೆಯಲ್ಲಿ ತಾತ್ಸಾರ ಭಾವನೆಯನ್ನು ತೋರುತ್ತಿದ್ದಾರೆ. ಇದರಿಂದ ಕನ್ನಡ ಭಾಷೆ ಬೆಳವಣಿಗೆಗೆ ಬಹಳಷ್ಟು ಅಡ್ಡಿ ಆತಂಕಗಳು ಸೃಷ್ಟಿಯಾಗಿವೆ. ಇದಕ್ಕೆ ಸಾಕ್ಷಿಯಾಗಿ ಇಂದು ಕೊಪ್ಪಳದ ಯಲಬುರ್ಗಾ ಘಟಕದ ಕೆ. ಎಸ್. ಆರ್. ಟಿ. ಸಿ. ಬಸ್ಸುಗಳೆರಡು ಶಾಲಾ ವಿದ್ಯಾರ್ಥಿಗಳ ಪ್ರವಾಸಕ್ಕೆ ತೆರಳಿವೆ. ಆದರೆ ಒಪ್ಪಂದದ ಮೇರೆಗೆ ಎನ್ನುವ ನಾಮಫಲಕವನ್ನು ಹಾಕಿಕೊಂಡು ಪ್ರಯಾಣ ಬೆಳೆಸಬೇಕಾಗಿದೆ. ಅವರು ಆಂಗ್ಲ ಭಾಷೆಯ ನಾಮಫಲಕ ಹಾಕಿಕೊಂಡು ಪ್ರಯಾಣ ಬಳಸುತ್ತಿದ್ದಾರೆ. ಇದು ಕನ್ನಡಕ್ಕೆ ಮಾಡಿದ ಅವಮಾನವಾಗಿದೆ. ಆದಕಾರಣ ಕೊಪ್ಪಳದ ಜಿಲ್ಲಾಧಿಕಾರಿಗಳು. ಕನ್ನಡ ಮತ್ತು ಸಂಸ್ಕöÈತಿ ಇಲಾಖೆ. ಹಾಗೂ ಕನ್ನಡ ಜಾಗೃತಿ ಸಮಿತಿ ಸದಸ್ಯರು, ಅಧ್ಯಕ್ಷರು ಸೇರಿ, ಈ ರೀತಿ ಕನ್ನಡದ ಕಗ್ಗೊಲೆ ಮಾಡುವ ಅಧಿಕಾರಿಗಳ ಸಾರ್ವಜನಿಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು. ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷರಾದ ಜಿ.ಎಸ್. ಗೋನಾಳ್ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರವನ್ನು ಈ ಮೂಲಕ ಒತ್ತಾಯಿಸಿದ್ದಾರೆ.

ಅಲ್ಲದೆ ಇತ್ತೀಚಿಗೆ ಕನ್ನಡ ರಾಜ್ಯೋತ್ಸವವನ್ನು ಕನ್ನಡಿಗರು ಬಹಳಷ್ಟು ಹೆಮ್ಮೆಯಿಂದ ಆಚರಿಸಿದ್ದಾರೆ. ಆದರೆ ಕನ್ನಡಿಗರೇ… ಕನ್ನಡದ ಬಗ್ಗೆ ಪದೇ ಪದೇ.. ಅವಮಾನ ಮಾಡಿದರೆ, ಬೇರೆ ರಾಜ್ಯದವರು ಇನ್ನು ಎಷ್ಟು ಅವಮಾನ, ಆತಂಕವನ್ನು ಸೃಷ್ಟಿಸಬಹುದು. ಸರ್ಕಾರದ ನಿಯಮದಂತೆ ನಾಮಫಲಕದಲ್ಲಿ ಮೊದಲು ೬೦ರಷ್ಟು ಕನ್ನಡ ಬಳಕೆ ದಪ್ಪ ಅಕ್ಷರದಲ್ಲಿ. ತದನಂತರ ಉಳಿದ ಭಾಷೆಯಲ್ಲಿ ೪೦ರಷ್ಟು ಹಿಂದಿ ಅಥವಾ ಇಂಗ್ಲಿಷ್ ಬಳಕೆ ಮಾಡಬಹುದಾಗಿದೆ ಈ ನಿಯಮವನ್ನು ಪಾಲಿಸದವರ ವಿರುದ್ಧ ಕೊಪ್ಪಳ ಜಿಲ್ಲೆಯಲ್ಲಿ ಶೀಘ್ರವಾಗಿ ಸೂಕ್ತ ಕ್ರಮ ಕೈಗೊ ಕೊಪ್ಪಳ ಜಿಲ್ಲೆಯಲ್ಲಿ ನಾಮಫಲಕಗಳು ಕನ್ನಡದಲ್ಲಿ ಕಡ್ಡಾಯವಾಗಬೇಕು. ಆ ಕಾರಣಕ್ಕಾಗಿ ಎಲ್ಲಾ ಕಚೇರಿಗಳು ಮತ್ತು ಸಾರ್ವಜನಿಕ ಸಂಘ ಸಂಸ್ಥೆಗಳು, ಕಾರ್ಖಾನೆಗಳು, ವ್ಯಾಪಾರಸ್ಥರು, ತಮ್ಮ ವ್ಯಾಪಾರಿ ಮಳಿಗೆಗಳಿಗೆ ಮೊದಲ ಆದ್ಯತೆ ಕನ್ನಡದ ಬಳಕೆ ಮತ್ತು ನಾಮ ಫಲಕವನ್ನು ಹಾಕಬೇಕು. ಇದರ ಬಗ್ಗೆ ಸರ್ಕಾರವೇ ಸುತ್ತೋಲೆಯನ್ನು ಹೊರಡಿಸಿದೆ. ಇದನ್ನು ನಿರ್ಲಕ್ಷ ವಹಿಸಿದರೇ, ಅಂತವರ ಮೇಲೆ ಸೂಕ್ತ ಕ್ರಮವನ್ನುವನ್ನು ಕೈಗೊಳ್ಳದಿದ್ದಲ್ಲಿ ಸಿರಿಗನ್ನಡವೇದಿಕೆ ಮೂಲಕ ಪ್ರತಿಭಟಿಸಲಾಗುವುದೆಂದು ಪತ್ರಿಕಾ ಪ್ರಕಟಣೆಯಲ್ಲಿ ಜಿ.ಎಸ್.ಗೋನಾಳ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button