ಓಂ ನವ ನರಸಿಂಹ” ಇಂಗ್ಲಿಷ್ ಭಕ್ತಿಗೀತೆ ಎ2 ಭಕ್ತಿ ಸಾಗರ ಯೂಟ್ಯೂಬ್ ವಾಹಿನಿಯಲ್ಲಿ ಬಿಡುಗಡೆ

ಓಂ ನವ ನರಸಿಂಹ” ಇಂಗ್ಲಿಷ್ ಭಕ್ತಿಗೀತೆ ಎ2 ಭಕ್ತಿ ಸಾಗರ ಯೂಟ್ಯೂಬ್ ವಾಹಿನಿಯಲ್ಲಿ ಬಿಡುಗಡೆ
ಬೆಂಗಳೂರು : “ಓಂ ನವ ನರಸಿಂಹ” ಎಂಬ ಇಂಗ್ಲಿಷ್ ಭಕ್ತಿಗೀತೆಯನ್ನು ಎ2 ಭಕ್ತಿ ಸಾಗರ ಯೂಟ್ಯೂಬ್ ವಾಹಿನಿಯಲ್ಲಿ ಬಿಡುಗಡೆ ಮಾಡಲಾಗಿದೆ.ಇಂಗ್ಲಿಷ್‌ನಲ್ಲಿ ಬಿಡುಗಡೆಯಾದ ನರಸಿಂಹ ಸರಣಿಯ ಹಾಡುಗಳಲ್ಲಿ ಪ್ರಪಂಚದಲ್ಲೇ ಇದು ಮೊದಲನೆಯದು ಎಂಬುದು ವಿಶೇಷವಾಗಿದೆ.ಜೋಗಿ, ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರ ನಿರ್ಮಾಪಕರಾದ ಪಿ. ಕೃಷ್ಣ ಪ್ರಸಾದ್ ಸಾರಥ್ಯದಲ್ಲಿ ಈ ಗೀತೆ ಮೂಡಿ ಬಂದಿದೆ.
ದರ್ಶನ್ ನಾರಾಯಣ್ ಅವರ ಹಿನ್ನೆಲೆ ಗಾಯನವಿರುವ ಈ ಗೀತೆಯಲ್ಲಿ ಸ್ವಸ್ತಿಕ್ ಕಾರೇಕಡ್ ಅವರ ಸಂಗೀತ ಮತ್ತು ಶ್ರೇಯಸ್ ಎ ಪಿ ಅವರ ಸಾಹಿತ್ಯವಿದೆ. ಜೀವನ್ ನಿರ್ದೇಶನದ ಈ ಇಂಗ್ಲೀಷ್ ಭಕ್ತಿ ಗೀತೆಗೆ ಛಾಯಾಗ್ರಹಣ ಮತ್ತು ಸಂಕಲನ ಸುನಿಲ್ ಕುಮಾರ್ ರಾಜು ಅವರದ್ದು. ಸ್ಯಾನ್ ವಿ ಅವರ ತನ್ಮಯಗೊಳಿಸುವ ನೃತ್ಯ ನಿರ್ದೇಶನವಿದೆ. ಮಲ್ಲಿಕಾ ಕ್ಯಾಸೆಟ್ಸ್ ನಿಂದ ನಿರ್ಮಾಣದ ಈ ಗೀತೆಯನ್ನು ಕೋಲಾರದಲ್ಲಿ ಚಿತ್ರಿಸಲಾಗಿದೆ.
ನಾಟ್ಯಂ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಮತ್ತು ವಿದ್ಯಾರ್ಥಿಗಳ ನೃತ್ಯ ಗಮನಾರ್ಹವಾಗಿದೆ. ಭಗವಾನ್ ವಿಷ್ಣುವಿನ ಅವತಾರವಾದ ಭಗವಾನ್ ನರಸಿಂಹ ಸ್ವಾಮಿಗೆ ಇದು ಗೌರವವಾಗಿದೆ. ಎಲ್ಲಾ ವಯಸ್ಸಿನ ಜನರಿಗೆ ಆಕರ್ಷಕವಾಗುವಂತಹ ಸುಂದರ ಮತ್ತು ಭಕ್ತಿಪರವಾದ ಹಾಡು ಇದಾಗಿದೆ.