ಬಸವಣ್ಣ ಕ್ಯಾಂಪ್ ನಲ್ಲಿ ಮಿತಿ ಮೀರಿದ ಅಕ್ರಮ ಮಧ್ಯ ಮಾರಾಟ ,ಕಡಿವಾಣ ಹಾಕಲು ಸುಂದರರಾಜ್ ಆಗ್ರಹ

ಬಸವಣ್ಣ ಕ್ಯಾಂಪ್ ನಲ್ಲಿ ಮಿತಿ ಮೀರಿದ ಅಕ್ರಮ ಮಧ್ಯ ಮಾರಾಟ , ಬಾರ್ ಗಳಿಂದಲೇ ಮಧ್ಯ ಸರಬರಾಜು
ಕಾರಟಗಿ : ತಾಲೂಕಿನ ಬಸವಣ್ಣ ಕ್ಯಾಂಪ್ ನಲ್ಲಿ ಅಕ್ರಮ ಮದ್ಯ ಮಾರಾಟ ಹಗಲು ರಾತ್ರಿ ರಾಜಾರೋಷವಾಗಿ ನಡೆಯುತ್ತಿದ್ದು ಅಧಿಕಾರಿಗಳು ಕಂಡು ಕಾಣದಂತೆ ಇರುವುದು ದುರಂತವೇ ಸರಿ, ಕ್ಯಾಂಪಿನಲ್ಲಿ ಓಣಿ ಓಣಿಯಲ್ಲಿ ಅಕ್ರಮ ಮದ್ಯ ಮಾರಾಟ ಯಥೇಚ್ಛವಾಗಿ ನಡೆಯುತ್ತಿದ್ದು ಪರವಾನಿಗೆ ಇರುವ ಬಾರ್ ಗಳಿಂದ ಕಾನೂನು ಬಾಹಿರವಾಗಿ ಅಂಗಡಿಗಳಿಗೆ ಸರಬರಾಜು ಮಾಡಲಾಗುತ್ತಿದೆ, ಕ್ಯಾಂಪಿನಲ್ಲಿ ಸುಮಾರು 20 ಕ್ಕೂ ಅಧಿಕ ಕಡೆ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದ್ದು ಗ್ರಾಮದ ಜನಗಳು ಯುವಕರು ಮಧ್ಯ ವ್ಯಸನಿಗಳಾಗಿ ಕ್ಯಾಂಪಿನ ಸ್ವಾಸ್ಥ್ಯ ಹಾಳಾಗುತ್ತಿದ್ದು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವುದು ಅನಿವಾರ್ಯವಾಗಿದೆ,
ಅಕ್ರಮ ಮದ್ಯ ಮಾರಾಟಕ್ಕೆ ಬಾರ್ ಗಳಿಂದಲೇ ಮಧ್ಯ ಸರಬರಾಜು ಆಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆರೊಪ ಕೇಳಿಬರುತ್ತಿದ್ದು, ಬಾರ್ ಗಳಿಂದ ಕ್ಯಾಂಪಿನ ಅಂಗಡಿಗಳಿಗೆ ಮಧ್ಯ ಸರಬರಾಜು ಮಾಡುವ ಮೂಲಕ ಬಾರ್ ಮಾಲಕರು ಜನರನ್ನು ವ್ಯಸನಿಗಳಾಗಿ ಮಾಡುತ್ತಿದ್ದಾರೆ. ನಿಯಮ ಪಾಲನೆ ಮಾಡದ ಬಾರ್ ಗಳ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು, ಬಸವಣ್ಣ ಕ್ಯಾಂಪ್ ನಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ಸಾರ್ವಜನಿಕ ಹಿತಾಸಕ್ತಿ ಕಾಪಾಡುವಂತೆ ಸಾಮಾಜಿಕ ಹೋರಾಟಗಾರ ಸುಂದರರಾಜ್ ಒತ್ತಾಯಿಸಿದ್ದಾರೆ.




