ಪ್ರಭಾವಿ ವ್ಯಕ್ತಿಯಿಂದ ನೀರಾವರಿ ಜಾಗ ಒತ್ತುವರಿ. ನಾಮ್ ಕೇ ವಾಸ್ತೆ ನೋಟಿಸ್ ನೀಡಿದ ಅಧಿಕಾರಿಗಳ ಕರ್ತವ್ಯ ಲೋಪ, ಮೇಲಾಧಿಕಾರಿಗಳು ಇತ್ತ ಗಮನ ಹರಿಸಿ

ಪ್ರಭಾವಿ ವ್ಯಕ್ತಿಯಿಂದ ನೀರಾವರಿ ಜಾಗ ಒತ್ತುವರಿ. ನಾಮ್ ಕೇ ವಾಸ್ತೆ ನೋಟಿಸ್ ನೀಡಿದ ಅಧಿಕಾರಿಗಳ ಕರ್ತವ್ಯ ಲೋಪ
ಕಾರಟಗಿ : ನೀರಾವರಿ ಇಲಾಖೆಯ ಜಾಗ ಒತ್ತುವರಿ ಮಾಡಿ ಸಮಾಧಿ ಕಟ್ಟಡ ನಿರ್ಮಾಣ ಮಾಡುತ್ತಿರುವುದರ ಬಗ್ಗೆ ಕ್ರಮ ಕೈಗೊಳ್ಳುವಂತೆ ದಲಿತ ಮುಖಂಡ ಮೌನೇಶ್ ಭಜರಂಗಿ ಇವರು ಸಹಾಯಕ ಕಾರ್ಯನಿರ್ವಾಹಕ
ಅಭಿಯಂತರರು ನೀರಾವರಿ ಕರ್ನಾಟಕ ನೀರಾವರಿ ನಿಗಮ ಉಪವಿಭಾಗ 32 ವಿತರಣಾ ಕಾಲುವೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಕಾರಟಗಿ ಹೋಬಳಿಯ ಪನ್ನಾಪುರ ಸೀಮೆಯ ಸರ್ವೇ ನಂಬರ್ 41ರಲ್ಲಿನ ಒಟ್ಟು ಜಮೀನು 22 ಎಕರೆ 15 ಗುಂಟೆ ಪೈಕಿ 1979 ರಲ್ಲಿ 01 ಎಕರೆ 18 ಗುಂಟೆ ಜಮೀನು ನೀರಾವರಿ ಇಲಾಖೆಯ ವ್ಯಾಪ್ತಿಯ ಕಾಲುವೆಗೆ ಮೀಸಲಿರಿಸಲಾಗಿರುತ್ತದೆ.ಅಲ್ಲದೆ ನೀರಾವರಿ ಕಾಲುವೆ ಮಧ್ಯಭಾಗದಿಂದ ಬಲಭಾಗಕ್ಕೆ 99 ಫೀಟ್ ನೀರಾವರಿ ಇಲಾಖೆಗೆ ಸೇರಿರುತ್ತದೆ.
ಆದರೆ ಗ್ರಾಮದ ಶ್ರೀಮಂತ ಉದ್ಯಮಿ ಪ್ರಭಾವಿ ವ್ಯಕ್ತಿ ವೆಂಕೋಬ ಎನ್ನುವವರು ನೀರಾವರಿ ಇಲಾಖೆಯ ಸ್ಥಳ ಒತ್ತುವರಿ ಮಾಡಿಕೊಂಡು ಅವರ ತಂದೆಯರ ಸಮಾಧಿಯನ್ನು ಸಿಮೆಂಟ್ ಕಾಂಕ್ರೀಟ್ ಪಿಲ್ಲರ್ ಗಳ ಮೂಲಕ ನಿರ್ಮಿಸಲು ಮುಂದಾಗಿರುತ್ತಾರೆ.
ಈಗಾಗಲೆ ಗ್ರಾಮದ ಸಾರ್ವಜನಿಕ ಸ್ಮಶಾನವನ್ನು ಗ್ರಾಮದ ಸರ್ವೇ ನಂಬರ್ 40 ರ ವ್ಯಾಪ್ತಿಯಲ್ಲಿ ಮೀಸಲಿರಿಸಲಾಗಿರುತ್ತದೆ. ನೀರಾವರಿ ಆಸ್ತಿಯನ್ನು ಒತ್ತುವರಿ ಮಾಡಿ ಸಮಾಧಿ ನಿರ್ಮಾಣ ಮಾಡುತ್ತಿದ್ದು ಅಧಿಕಾರಿಗಳು ನೋಟಿಸ್ ನೀಡಿ ಕೈ ತೊಳೆದುಕೊಂಡಿದ್ದಾರೆ
ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳದಿರುವುದರಿಂದ ಸಮಾಧಿ ಕಟ್ಟಡ ನಿರ್ಮಾಣ ಕಾರ್ಯ ಮುಂದುವರೆದಿರುತ್ತದೆ, ನೀರಾವರಿ ಇಲಾಖೆಯ ಆಸ್ತಿಯ ಒತ್ತುವರಿ ಮಾಡಿದರೂ ಸಹ ನೀರಾವರಿ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳದೆ ನಾಮ್ ಕೇ ವಾಸ್ತೆ ನೋಟಿಸ್ ನೀಡಿದ್ದಾರೆ, ಕಟ್ಟಡ ತೆರವುಗೊಳಿಸಿ ನೀರಾವರಿ ಇಲಾಖೆಯ ಆಸ್ತಿಯನ್ನು ರಕ್ಷಿಸಬೇಕು ಮತ್ತು ಸಾರ್ವಜನಿಕ ಹಿತಾಶಕ್ತಿಯನ್ನು ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಹಾಗೂ ನೀರಾವರಿ ಇಲಾಖೆಯ ಆಸ್ತಿ ರಕ್ಷಣೆ ಮಾಡುವಲ್ಲಿ ವಿಫಲಾರದ ಅಧಿಕಾರಿಗಳ ಮೇಲೆ ಮೇಲಾಧಿಕಾರಿಗಳುಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ




