ರಾಯಚೂರು ಭಾ.ಜಾ.ಪ.ಜಿಲ್ಲಾ ಘಟಕಕ್ಕೆ ಜಂಬಣ್ಣ ನೀಲಗಲ್ ಅವರಿಗೆ ಕಾರ್ಯದರ್ಶಿ ಪಟ್ಟ ಸ್ವಾಗತ: ಸಾಬಣ್ಣ ತಾಳದ ಸಲಿಕ್ಯಾಪುರ್
ವರದಿ ಸುಂದರರಾಜ್ BA ಕಾರಟಗಿ

ರಾಯಚೂರು ಭಾ.ಜಾ.ಪ.ಜಿಲ್ಲಾ ಘಟಕಕ್ಕೆ ಜಂಬಣ್ಣ ನೀಲಗಲ್ ಅವರಿಗೆ ಕಾರ್ಯದರ್ಶಿ ಪಟ್ಟ ಸ್ವಾಗತ: ಸಾಬಣ್ಣ ತಾಳದ ಸಲಿಕ್ಯಾಪುರ್
ರಾಯಚೂರು : ಜಿಲ್ಲೆಯ ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕದ ನೂತನ ಕಾರ್ಯದರ್ಶಿಗಳಾಗಿ ಜಂಬಣ್ಣ ನೀಲಗಲ್ ಆಯ್ಕೆಯಾಗಿದ್ದಾರೆ.ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವುದಕ್ಕೆ ಅವರ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಜಂಬಣ್ಣ ನೀಲಗಲ್ ರವರು ಸುಮಾರು ವರ್ಷಗಳಿಂದ ಪಕ್ಷದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕೆ ನಿಷ್ಠೆಯಿಂದ ಕಾರ್ಯ ನಿರ್ವಹಿಸಿ ಇಂದು ಜಿಲ್ಲಾ ಕಾರ್ಯದರ್ಶಿಯಾಗಿ ನೇಮಕಗೊಂಡಿರುವುದು ತುಂಬಾ ಸಂತೋಷವಾಗಿದೆ ಎಂದು ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಜಿಲ್ಲಾ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಜಂಬಣ್ಣ ನೀಲಗಲ್ ಅವರಿಗೆ ದೇವದುರ್ಗ ತಾಲೂಕಿನ ಬಿಜೆಪಿ ಕಾರ್ಯಕಾರಿಣಿ ಓಬಿಸಿ ಮೋರ್ಚಾದ ಸದಸ್ಯರಾಗಿರುವ ಸಾಬಣ್ಣ ತಾಳದವರು ಸನ್ಮಾನಿಸಿದರು,
ಸನ್ಮಾನಿಸಿ ಮಾತನಾಡಿದ ಅವರು ಜಂಬಣ್ಣ ನೀಲಗಲ್ ಅವರು ಭಾರತೀಯ ಜನತಾ ಪಕ್ಷದ ಶಿಸ್ತಿನ ಸಿಪಾಯಿಯಂತೆ ಪಕ್ಷ ನಿಷ್ಠೆ ಗಮನಿಸಿದ ಹಿರಿಯರು ಅವರಿಗೆ ಜಿಲ್ಲಾ ಕಾರ್ಯದರ್ಶಿಯಾಗಿ ನೇಮಕಮಾಡಿ ಆದೇಶ ನೀಡಿರುವುದು ತುಂಬಾ ಸಂತೋಷವಾಗಿದೆ ಎಂದರು.
ನಂತರ ಕಾರ್ಯದರ್ಶಿಯಾಗಿ ಸನ್ಮಾನಿತಗೊಂಡ ಜಂಬಣ್ಣ ನಿಲಗಲ್ ರವರು ಮಾತನಾಡಿದರು. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿರುವ ನನಗೆ ಪಕ್ಷದ ನಾಯಕರು ಜಿಲ್ಲಾ ಕಾರ್ಯದರ್ಶಿ ಪಟ್ಟ ನೀಡುತ್ತಾರೆ ಊಹಿಸಿರಲಿಲ್ಲ, ಪಕ್ಷ ನಿಷ್ಠೆ ತೋರುವ ಕಾರ್ಯಕರ್ತರನ್ನು ಗುರುತಿಸಿ ಉನ್ನತ ಸ್ಥಾನ ನೀಡುವ ಏಕೈಕ ಪಕ್ಷ ಅದು ಭಾರತೀಯ ಜನತಾ ಪಕ್ಷ. ನನಗೆ ನೀಡಿರುವ ಜವಾಬ್ದಾರಿಯನ್ನು ಗೌರವದಿಂದ ಸ್ವೀಕರಿಸುತ್ತೇನೆ ಮತ್ತು ಪಕ್ಷದ ಸಂಘಟನಾ ಶಕ್ತಿಯನ್ನು ಹೆಚ್ಚಿಸಲು ಕಾರ್ಯಪ್ರವೃತ್ತನಾಗುತ್ತೇನೆ ಎಂದರು. ನಂತರ ಜಿಲ್ಲಾ ಕಾರ್ಯದರ್ಶಿಯಾಗಿ ನೇಮಕಮಾಡಿದ ಮಾಜಿ ಸಚಿವರು ಜನಪ್ರಿಯ ನಾಯಕರು ಸನ್ಮಾನ್ಯ ಶ್ರೀ ಶಿವನಗೌಡ ನಾಯಕ್ ಅವರ ಹಾದಿಯಾಗಿ ಪಕ್ಷದ ಎಲ್ಲಾ ಮುಖಂಡರಿಗೂ ಕಾರ್ಯಕರ್ತರಿಗೂ ಧನ್ಯವಾದಗಳು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಕೆ ಶಿವನಗೌಡ ನಾಯಕರವರು ಉಪಸ್ಥಿತಿಯಲ್ಲಿ ಸಲಿಕ್ಯಾಪುರ್ ಗ್ರಾಮದ ಬಿಜೆಪಿ ಮುಖಂಡರಾಗಿರುವ ಮಹದೇವಪ್ಪ ಮಡಿವಾಳದ ಮಲ್ಲಪ್ಪ ಸೊಂಟೆಲದ್, ಹಾಗೂ ಗ್ರಾಮದ ಗೂರು ಹಿರಿಯರು ಉಪಸ್ಥಿತಿ ಇದ್ದರು,
ಪ್ರಭುಲ್ ವಾಗ್ಲಿ ಸಲೀಕ್ಯಪುರ,ಸಾಬಣ್ಣ ತಾಳದ್,ಸಲೀಕ್ಯಪುರ,ದೇವದುರ್ಗ ಒಬಿಸಿ ಮೋರ್ಚಾದ ಕಾರ್ಯಕಾರಿಣಿ ಸದಸ್ಯರು, ನೂತನವಾಗಿ ಆಯ್ಕೆಯಾಗಿರುವ ರಾಯಚೂರು ಜಿಲ್ಲಾ ಬಿಜೆಪಿ ಘಟಕದ ಕಾರ್ಯದರ್ಶಿಗಳಾದ ಜಂಬಣ್ಣ ನೀಲಗಲ್ ಅವರಿಗೆ ಮಾನ್ಯ ಮಾಜಿ ಸಚಿವ ಶಿವನಗೌಡ ನಾಯಕ್ ಅವರ ಉಪಸ್ಥಿತಿಯಲ್ಲಿ ಸನ್ಮಾನಿಸಿ ಗೌರವಿಸಿದರು,