ಬಾರ್ ಸನ್ನದ್ದುದಾರರು ನಿಯಮ ಪಾಲನೆ ಮಾಡುವುದು ಕಡ್ಡಾಯ…….! ವಿಠ್ಠಲ್ ಪಿರಗಣ್ಣನವರು ಅಬಕಾರಿ ನಿರೀಕ್ಷಕರು

ಬಾರ್ ಸನ್ನದ್ದುದಾರರು ನಿಯಮ ಪಾಲನೆ ಮಾಡುವುದು ಕಡ್ಡಾಯ…….! ವಿಠ್ಠಲ್ ಪಿರಗಣ್ಣನವರು ಅಬಕಾರಿ ನಿರೀಕ್ಷಕರು
ಕಾರಟಗಿ; ತಾಲೂಕಿನ ಬಸವಣ್ಣ ಕ್ಯಾಂಪ್ ನ ಶ್ರೀ ಲಕ್ಷ್ಮೀ ವೆಂಕಟೇಶ್ವರ ಬಾರ್ ಅಂಡ್ ರೆಸಿಡೆನ್ಸಿ CL-7 ನಿಯಮ ಉಲ್ಲಂಘಿಸಿ ಮಧ್ಯ ಮಾರಾಟದಲ್ಲಿ ತೊಡಗಿ ಸ್ವಾರ್ಥಕ್ಕಾಗಿ ಕ್ಯಾಂಪಿನ ಜನರ ಹಿತಾಸಕ್ತಿ ಬದಿಗೊತ್ತಿ ಮಧ್ಯ ಮಾರಾಟ ಮಾಡುತ್ತಿರುವುದರಿಂದ ಗ್ರಾಮದ ಸ್ವಾಸ್ಥ್ಯ ಹಾಳಾಗುತ್ತಿದ್ದು ,ನಿಯಮ ಉಲ್ಲಂಘಿಸಿದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಬಾರ್ ಅಂಡ್ ರೆಸಿಡೆನ್ಸಿ ಪರವಾನಿಗೆ ರದ್ದು ಮಾಡಬೇಕೆನ್ನುವ ಒತ್ತಾಯದ ಕೂಗು ಕೇಳಿಬಂದಿತ್ತು.
ಈ ಕುರಿತು ಬಸವಣ್ಣ ಕ್ಯಾಂಪ್ ನ ಸಾಮಾಜಿಕ ಹೋರಾಟಗಾರ ಹಾಗೂ ಪೊಲೀಸ್ ವಾರ್ತೆ ವರದಿಗಾರರಾದ ಸುಂದರರಾಜ್ ಆಗ್ರಹವೂ ವ್ಯಕ್ತ ಪಡಿಸಿದ್ದರು.ಬಸವಣ್ಣ ಕ್ಯಾಂಪಿನ ಬಾರ್ ಮತ್ತು ರೆಸಿಡೆನ್ಸಿ ಸಂಪೂರ್ಣ ನಿಯಮ ಉಲ್ಲಂಘಿಸುತ್ತಿದೆ ವ್ಯವಹಾರದ ಅವಧಿಯ ಆದೇಶಗಳನ್ನು ಗಾಳಿಗೆ ತೂರಿ ಬಾರ್ ಬಾಗಿಲು ತೆರೆದು ಮಧ್ಯ ಮಾರಾಟ ಮಾಡುತ್ತಾ ಕ್ಯಾಂಪಿನ ಬಡ ಕುಟುಂಬಗಳ ಬದುಕು ಬೀದಿಪಾಲು ಮಾಡುತ್ತಿದೆ,
ವ್ಯವಹಾರದ ಅವಧಿಯ ಅರಿವಿಲ್ಲದೆ ಬಾರ್ ಬಾಗಿಲು ತೆಗೆಯುವುದರಿಂದ ಯುವಕರು ಬೆಳ್ಳಂ ಬೆಳಗ್ಗೆ ಬಾರ್ ಗೆ ಹೋಗಿ ಮಧ್ಯ ವ್ಯಸನಿಗಳಾಗಿ ಆರೋಗ್ಯವನ್ನು ಹದೆಗೆಡಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಯುವಕರನ್ನೇ ನಂಬಿಕೊಂಡಿರುವ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಬೀದಿ ಪಾಲಾಗುತ್ತಿವೆ. ನಿಯಮ ಉಲ್ಲಂಘಿಸುತ್ತಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ಬಾರ್ ಅಂಡ್ ರೆಸಿಡೆನ್ಸಿ ಪರವಾನಿಗೆ ರದ್ದು ಮಾಡಬೇಕೆಂದು ಒತ್ತಾಯಿಸಿದ್ದರು.

ಬೆಳ್ಳಂ ಬೆಳಗ್ಗೆ ಬಾರ್ ಓಪನ್ ಮಾಡಿ ಮಧ್ಯ ಮಾರಾಟ ಮಾಡುತ್ತಿದ್ದು ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಗಂಗಾವತಿ ಅಬಕಾರಿ ನಿರೀಕ್ಷಕರಿಗೆ ಹೋರಾಟಗಾರ ಸುಂದರರಾಜ್ ಅವರು ಮಾಹಿತಿ ನೀಡಿದ್ದಾರೆ.ಅಬಕಾರಿ ಇಲಾಖೆ ನೀಡಿರುವ ಪರವಾನಿಗೆ ರದ್ದು ಮಾಡಿ ಕ್ಯಾಂಪಿನ ಸ್ವಾಸ್ಥ್ಯ ಕಾಪಾಡುವಂತೆಯೂ ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಅಬಕಾರಿ ನಿರೀಕ್ಷಕರಾದ ವಿಠ್ಠಲ್ ಪಿರಗಣ್ಣನವರು ಅಬಕಾರಿ ಇಲಾಖೆಯ ನಿಯಮ ವಿರುದ್ಧ ಬಾರ್ ಸನ್ನದ್ದುದಾರರು ನಡೆದುಕೊಳ್ಳಬಾರದು, ನಿಯಮ ಪಾಲನೆ ಮಾಡದೇ ವ್ಯವಹಾರ ನಡೆಸಿರುವ ಬಗ್ಗೆ ಆಧಾರ ಮತ್ತು ಲಿಖಿತ ದೂರು ನೀಡಿದರೆ ಪರಿಶೀಲಿಸಿ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದ್ದಾರೆ




