ಜಿಲ್ಲಾ ಸುದ್ದಿಗಳು
ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾದ ಶಾಲೆ ಮಕ್ಕಳು

ಸಿಂಧನೂರಿನಲ್ಲಿ: ನಡೆಯುವ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಗೆ ಕೊಪ್ಪಳದ ಆರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ನಿವೇದಿತ ಶಾಲೆಯ ಖುಷಿ ಗರವಾಡ ಮಠ, ಆದರ್ಶ ವಿದ್ಯಾಲಯ ಶಾಲೆಯ ಸಂಜನಾ ಕ್ವಾಟಿಮಠ,ಎಸ್ ಎಫ್ ಶಾಲೆಯ ಅಖಿಲೇಶ್ ಯಾದವ್, ಶಾರದಾಂಬ ಶಾಲೆಯ ಪ್ರಿಯಾಂಕ ಯಾದವ್,ವೈಷ್ಣವಿ ಯಾದವ್, ಅರ್ಜುನ್ ಯಾದವ್, ಆರು ಜನ ವಿದ್ಯಾರ್ಥಿಗಳು ರಾಜ್ಯಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.
ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜಯ ಸಾಧಿಸಿ ಕೊಪ್ಪಳ ಜಿಲ್ಲೆಯ ಕೀರ್ತಿ ಬೆಳಗಿಸಲಿ ಎಂದು ಕ್ರೀಡಾ ಅಭಿಮಾನಿಗಳು ಕರಾಟೆ ವಿದ್ಯಾರ್ಥಿಗಳಿಗೆ ಶುಭ ಕೋರಿದರು.