Blog

ಜಾತಿ ಗಣತಿ ವರದಿ ಜಾರಿಗೆ ಜನಾರ್ಧನರೆಡ್ಡಿ ಬೆಂಬಲ.. ವರದಿ ನೋಡದೇ ವಿರೋಧಿಸುವುದು ಸರಿಯಲ್ಲ

ಗಂಗಾವತಿ.
ಹಿಂದುಳಿದ ವರ್ಗದ ಆಯೋಗ ನೀಡಿರುವ ಜಾತಿ ಗಣತಿ ವರದಿಯನ್ನು ನೋಡದೇ ವಿರೋಧಿಸುವುದು ಸರಿಯಲ್ಲ ಎಂದು ಸರಕಾರದ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದ ಗಂಗಾವತಿ ಶಾಸಕ ಗಾಲಿ ಜನಾರ್ಧನರೆಡ್ಡಿ ವರದಿ ವಿರೋಧಿಸುತ್ತಿರುವ ಅಖಿಲ ಭಾರತ ವಿರಶೈವ ಸಂಘಟನೆ ನಿಲುವಿಗೆ ಟಾಂಗ್ ನೀಡಿದರು.
ಶನಿವಾರ ನಗರಸಭೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಸುದ್ದಿಗಾರರ ಪ್ರಶ್ನೇಗೆ ಉತ್ತರಿಸಿ ತಾವು ಆಯೋಗದ ವರದಿ ಮಂಡಿಸಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಬೆಂಬಲಿಸುವ ಸುಳಿವು ನೀಡಿದರು. ಹಿಂದುಳಿದ ಆಯೋಗ ಸರಕಾರಕ್ಕೆ ಜಾತಿ ಗಣತಿ ವರದಿಯನ್ನು ಸಲ್ಲಿಸಿದೆ. ಇದರಲ್ಲಿ ಎನಿದೆ ಎಂಬುದು ನಮಗಾರಿಗೂ ತಿಳಿದಿಲ್ಲ. ಸರಕಾರ ಈ ವರದಿಯನ್ನು ಸ್ವೀಕರಿಸಿದ್ದು, ಬಹಿರಂಗಪಡಿಸಲು ಸಹಕಾರ ನೀಡಬೇಕು. ನಂತರ ಅದರಲ್ಲೇನಾದರೂ ಲೋಪಗಳಿದ್ದರೆ ವಿರೋಧಿಸಬೇಕು. ಆದರೆ ವರದಿಯನ್ನೇ ನಾವು ಗಮನಿಸದೇ ಏಕಾ ಏಕಿ ವಿರೋಧಿಸಿದರೆ ಹೇಗೆ. ವರದಿಯಲ್ಲಿ ಎನಿದೆ ಎಂಬುದು ನನಗೂ ಗೊತ್ತಿಲ್ಲ. ಹೀಗಾಗಿ ಈ ಕುರಿತು ನಾನು ಯಾವುದೇ ಪ್ರತಿಕ್ರೀಯೆ ನೀಡುವುದಿಲ್ಲ. ಮೊದಲು ಅದನ್ನು ನಾವೆಲ್ಲರೂ ನೋಡಬೇಕಿದೆ ಎಂದರು. ಮುಂದುವರದು ಮಾತನಾಡಿದ ಅವರು ರಾಜ್ಯ ಸಭಾ ಚುನಾವಣೆಯಲ್ಲಿ ಆತ್ಮ ಸಾಕ್ಷಿಗನುಣವಾಗಿ ಮತ ಚಲಾಯಿಸಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುವಂತೆ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇನೆ. ನನ್ನ ಮನವಿಗೆ ಇರ್ವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಮತ್ತು ನಾನು ಕೈಗೊಳ್ಳುವ ಅಭಿವೃದ್ಧಿ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ನಾನು ರಾಜ್ಯ ಮತ್ತು ಕೇಂದ್ರ ಸರಕಾರದೊಂದಿಗೆ ಉತ್ತಮ ಬಾಂಧವ್ಯ ಹೊಂದುವುದು ತಪ್ಪಲ್ಲ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಜನ ಹೇಳುತ್ತಿದ್ದಾರೆ. ಹೀಗಾಗಿ ನಾನು ಮೋದಿಗೆ ಬೆಂಬಲಿಸುವ ಹೇಳಿಕೆ ನೀಡಿದ್ದೇನೆ. ಆದರೆ ಚುನಾವಣೆಯಲ್ಲಿ ಯಾವ ನಿಲುವು ಕೈಗೊಳ್ಳಬೇಕೆಂಬುದು ಉತ್ಸವದ ನಂತರ ನನ್ನ ನಿಲುವು ಬಹಿರಂಗಪಡಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಕೆಆರ್‌ಪಿಪಿ ರಾಜ್ಯ ಉಪಾಧ್ಯಕ್ಷ ಮನೋಹರಗೌಡ ಹೇರೂರು, ನಗರಸಭೆ ಸದಸ್ಯ ರಮೇಶ ಚೌಡ್ಕಿ, ಮುಖಂಡ ಚಂದ್ರು ಹಿರೂರು, ವಿರೇಶ ಬಲಕುಂದಿ, ದುರಗಪ್ಪ ದಳಪತಿ, ಯಮನೂರ ಚೌಡ್ಕಿ, ರಮೇಶ ನಾಯಕ ಹೊಸಮಲಿ, ಪಂಪಣ್ಣ ನಾಯಕ, ಬಾಷಾ, ಜಿಲಾನಿ ಪಾಷಾ, ವಿರೇಶ ಸುಳೇಕಲ್ ಮತ್ತಿತರು ಇದ್ದರು.

ಬಾಕ್ಸ್:
ರೊಪವೇಗೆ ರೂ.೧೧ ಕೋಟಿ ಅನುದಾನ
ಅಂಜನಾದ್ರಿ ಬೆಟ್ಟಕ್ಕೆ ರೊಪವೇ ನಿರ್ಮಾಣಕ್ಕೆ ಕೇಂದ್ರ ಸರಕಾರ ರೂ.೧೧ ಕೋಟಿ ಮಾತ್ರ ಅನುದಾನ ನೀಡಿದೆ. ಉತ್ಸವ ಸಂದರ್ಭದಲ್ಲಿ ರೊಪವೇ ಕಾಮಗಾರಿ ಭೂಮಿಪೂಜೆ ಮಾಡುವ ಕುರಿತು ಕೇಂದ್ರ ಸಚಿವ ನಿತೀನ್ ಗಡ್ಕರಿಗೆ ಮನವಿ ಮಾಡುತ್ತಿದ್ದೇನೆ. ಆದರೆ ಕೇಂದ್ರ ಸರಕಾರ ರೂ.೮೦ ಕೋಟಿ ಅನುದಾನ ನೀಡಿದೆ ಎಂದು ಬಿಜೆಪಿ ಮುಖಂಡರು ನೀಡಿರುವ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಇದರ ಬಗ್ಗೆ ನನಗೆ ಮಾಹಿತಿ ಇಲ್ಲ.

Related Articles

Leave a Reply

Your email address will not be published. Required fields are marked *

Back to top button