ರಾಜಕೀಯರಾಜ್ಯ ಸುದ್ದಿ

ಭಿನ್ನಭಿಪ್ರಾಯ ಮರೆತು ಒಂದಾದ ಶಾಸಕ ವಿಶ್ವನಾಥ್ ಹಾಗೂ ಡಾ ಕೆ ಸುಧಾಕರ್,ಮಾದಾವರದ ಬಿಜಿಪಿ ಮುಖಂಡ ಗೋವಿಂದಪ್ಪ ಮನೆಯ ಉಪಹಾರ ಕೂಟದಲ್ಲಿ ಭಾಗಿ

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯದಾಸರಹಳ್ಳಿ : ವಿಶ್ವನಾಥ್ ಅವರು ಯಲಹಂಕ ಕ್ಷೇತ್ರದಲ್ಲಿ ಸೈನ್ಯದ ರೀತಿ ಬಿಜೆಪಿ ಕೋಟೆ ಕಟ್ಟಿದ್ದಾರೆ ಅವರ ಕೋಟೆ ಬೇದಿಸುವುದು ಅಷ್ಟು ಸುಲಭವಲ್ಲ ,ವಿಶ್ವನಾಥ್ ಮೇಲೆ ಸಂಪೂರ್ಣ ವಿಶ್ವಾಸವಿದೆ’ ಎಂದು ಚಿಕ್ಕಬಳ್ಳಾಪುರ ಎನ್ ಡಿಎ ಅಭ್ಯರ್ಥಿ ಡಾ. ಕೆ. ಸುಧಾಕರ್ ಹೇಳಿದರು.

ಶಾಸಕ ವಿಶ್ವನಾಥ್ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಅವೆಲ್ಲಾ ಬರೀ ಕಾಂಗ್ರೆಸ್ ಪಕ್ಷದ ಊಹಾಪೋಹ. ನಾವು ಒಗ್ಗಟ್ಟಾಗಿದ್ದವೆ’ಎಂದುರು.

ಗೆಲುವಿನ ರೂವಾರಿಗಳೇ ಯಲಹಂಕ ಕ್ಷೇತ್ರದ ಮತದಾರರಾಗುತ್ತಾರೆ ಎಂಬ ಪೂರ್ಣ ವಿಶ್ವಾಸವಿದೆ ಯಲಹಂಕ ಫಲಿತಾಂಶದಿಂದ ಒಟ್ಟು ಕ್ಷೇತ್ರದ ಫಲಿತಾಂಶದ ದಿಕ್ಕು ಬದಲಾಯಿಸುತ್ತದೆ.ಕಾಂಗ್ರೆಸ್ ನವರು ಏನು ತಿಳಿದುಕೊಂಡಿದ್ದಾರೆ ಅದೆಲ್ಲಾ ಹುಸಿಯಾಗಲಿದೆ’ ಎಂದರು.

ಮಾದಾವರದ ಬಿಜಿಪಿ ಹಿರಿಯ ಮುಖಂಡ ಗೋವಿಂದಪ್ಪ ಮನೆಯಲ್ಲಿ ದಾಸನಪುರ ಹೋಬಳಿಯ ಚುನಾವಣಾ ಕಾರ್ಯತಂತ್ರ ಸಭೆ ಹಾಗೂ ಉಪಾಹಾರ ಕೂಟದಲ್ಲಿ ಉಭಯನಾಯಕರು ಭಾಗವಹಿಸಿದ್ದರು.

ಶಾಸಕ ವಿಶ್ವನಾಥ್ ಮಾತನಾಡಿ ‘ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಯುಲಹಂಕ ಕ್ಷೇತ್ರ ಗೆಲುವಿನ ರೂವಾರಿಗಳಾಗಬೇಕು ಎಂಬ ದೃಷ್ಟಿಯಿಂದ ಉಳಿದಿರುವ ದಿನಗಳಲ್ಲಿ ಪ್ರತಿ ಮನೆ ಮನೆಗು ಹೋಗಿ ಕೆಲಸಮಾಡಲು ತೀರ್ಮಾನಿಸಿದ್ದವೆ ಎಂದರು.

‘ಚಿಕ್ಕಬಳ್ಳಾಪುರಕ್ಕೆ ಪ್ರಧಾನಿ ಮೋದಿಯವರು ಹಾಗೂ ಯಲಹಂಕ ನಗರಕ್ಕೆ ಗೃಹಸಚಿವ ಅಮಿತ್ ಷಾ ಅಗಮಿಸುವ ಹಿನ್ನೆಲೆಯಲ್ಲಿ 10 ಸಾವಿರ ಜನ ಸೇರಿಸಿ ಸಂಚಲನ ಉಂಟು ಮಾಡುವ ಕಾರ್ಯಕ್ರಮ ರೂಪಿಸಲಾಗಿದೆ. ದಾಸನಪುರ ಹೋಬಳಿಯಿಂದ ಜೆಡಿಎಸ್ ಜೊತೆಗೂಡಿ ಒಂದು ಲಕ್ಷಕ್ಕೂ ಹೆಚ್ಚು ಬಹುಮತ ನೀಡಲು ಪ್ರಾಮಣಿಕವಾಗಿ ಪ್ರಯತ್ನ ಮಾಡಲಾಗುವುದು ಈ ಸಲ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಗೆ ಮರ್ಮಾಘಾತ ನೀಡಲಿದ್ದೆವೆ’ ಎಂದರು.

ಈ ಸಂದರ್ಭದಲ್ಲಿ ಎನ್ ಡಿ ಎ ಅಭ್ಯರ್ಥಿ ಸುಧಾಕರ್, ಶಾಸಕರಾದ ಎಸ್ ಆರ್ ವಿಶ್ವನಾಥ್, ಮಾಜಿ ಶಾಸಕರಾದ ಲಕ್ಷ್ಮೀನಾರಾಯಣ್, ನೆಲಮಂಗಲ ಮಾಜಿ ಶಾಸಕರಾದ ಶ್ರೀನಿವಾಸ್ ಮೂರ್ತಿರವರು, ಬಿಜೆಪಿ ಮುಖಂಡರಾದ ಗೋವಿಂದಪ್ಪನವರು, ಲಲಿತಮ್ಮನವರು ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ಮಾದಾವರು, ಈ ಕೃಷ್ಣಪ್ಪನವರು, ಮಂಡಲ ಅಧ್ಯಕ್ಷರಾದ ಹನುಮಯ್ಯನವರು, , ಬೆಂಗಳೂರು ಮಹಾನಗರ ಸಹ ಪ್ರಭಾರಿಗಳಾದ ಎಸ್ಎನ್ ರಾಜಣ್ಣ ಅವರು, ರೈತಾ ಮೋರ್ಚಾ ರಾಜ್ಯ ಕಾರ್ಯದರ್ಶಿಯಾದ ಸತೀಶ್ ರವರು,ಜಿಲ್ಲಾ ಉಪಾಧ್ಯಕ್ಷರಾದ ನಾರಾಯಣಪ್ಪ( GPN), ಬಿಜೆಪಿ ಮುಖಂಡರಾದ ಲಕ್ಷ್ಮಿಪುರ ಸೀನಪ್ಪನವರು, ಉದ್ದಂಡಯ್ಯನವರು, ಮಾದಾವರ ಪ್ರಧಾನ ಕಾರ್ಯದರ್ಶಿಗಳಾದ ಜನಾರ್ಧನ್ ಮತ್ತು ಸೋಮಶೇಖರ್ ಅವರು, ದಾಸನಪುರ ಹೋಬಳಿ ಎಲ್ಲ ಗ್ರಾಮ ಪಂಚಾಯತ್ ಅಧ್ಯಕ್ಷರು ಮಾಜಿ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತಿ ಸದಸ್ಯರುಗಳು ಬಿಜೆಪಿ ಪದಾಧಿಕಾರಿಗಳು ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button