ಮಹಿಳಾ ದಿನಾಚರಣೆ ಪ್ರಯುಕ್ತ ಹೊಲಿಗೆ ಯಂತ್ರ ಮತ್ತು ಚಾಲಕ ತರಬೇತಿ ನೀಡಿ ಲೈಸನ್ಸ್ ಪತ್ರ ವಿತರಣೆ
ಪಬ್ಲಿಕ್ ರೈಡ್ ನ್ಯೂಸ್
ಪೀಣ್ಯ ದಾಸರಹಳ್ಳಿ:ಮಹಿಳಾ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಹಾಗೂ ಎಸ್‌ಜೆಎಸ್ ಎಂಟರ್‌ಪ್ರೈಸಸ್ ಲಿಮಿಟೆಡ್ ಮತ್ತು ಸಿಎಸ್‌ಆರ್ ಸಹಯೋಗದಲ್ಲಿ ವರ್ಚಾಸ್ ರಾಷ್ಟ್ರೀಯ ಸೇವಾ ಟ್ರಸ್ಟ್ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಲಗ್ಗರೆಯ ಎಂ.ಇ.ಐ ಕಾಲೋನಿಯ ಬಿಬಿಎಂಪಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.ಇದೇ ವೇಳೆ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ, ಡ್ರೈವಿಂಗ್ ತರಬೇತಿ ಪಡೆದವರಿಗೆ ಲೈಸೆನ್ಸ್ ಪತ್ರಗಳನ್ನು ವಿತರಿಸಿದರು.
ಈ ವೇಳೆ ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಗಣ್ಯರು ಮಹಿಳೆಯರನ್ನು ಕುರಿತು ಮಾತನಾಡಿ ರಾಷ್ಟ್ರೀಯ ಸೇವಾ ಟ್ರಸ್ಟ್ ವತಿಯಿಂದ ಮಹಿಳೆಯರ ಅಭಿವೃದ್ಧಿಗಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಎಲ್ಲ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾಯಾಧೀಶ ನ್ಯಾಯಮೂರ್ತಿ ಕೆ. ಸೋಮಶೇಖರ್, ಎಸ್‌ಜೆಎಸ್ ಎಂಟರ್‌ಪ್ರೈಸ್ ಸ್ ಲಿಮಿಟೆಡ್ ಸಿಓಓ ಸದಾಶಿವ ಬಳಿಗಾರ್, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯದರ್ಶಿಜೈಶಂಕರ್, ಸಿ.ಎಸ್.ಸಿಯ ಕರ್ನಾಟಕ ರಾಜ್ಯ ಮುಖ್ಯಸ್ಥ ಶಕೀಬ್ ಅಹಮದ್,ವರ್ಚಾಸ್ ರಾಷ್ಟ್ರೀಯ ಸೇವಾ ಟ್ರಸ್ಟ್ ನ ಸಂಸ್ಥಾಪಕಿ ವೈಶಾಲಿ, ಎಸ್ ಜೆ ಎಸ್ ಎಂಟರ್‌ಪ್ರೈಸ್ ಲಿ.ನ ಮ್ಯಾನೇಜಿಂಗ್ ಡೈರೆಕ್ಟರ್ ಕೆ.ಎ. ಜೋಸೆಫ್,ಮಲ್ಲೇಶ್ವರಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ್,ಸಹಾಯಹಸ್ತ ಸೇವಾ ಟ್ರಸ್ಟ್ ಸಂಸ್ಥಾಪಕ ಎಂ.ಆರ್. ರುದ್ರೇಗೌಡ ಭಾಗವಹಿಸಿದ್ದರು.