Blog

ಕುಷ್ಟಗಿ ಮತ್ತು ಸಿಂಧನೂರು ವರೆಗೆ ಮಾಸಾಂತ್ಯದಲ್ಲಿ ರೈಲು ಸಂಚಾರ ಪ್ರಾರಂಭ

ಕುಷ್ಟಗಿ ಮತ್ತು ಸಿಂಧನೂರು ವರೆಗೆ
ಮಾಸಾಂತ್ಯದಲ್ಲಿ ರೈಲು ಸಂಚಾರ ಪ್ರಾರಂಭ
ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಜೊತೆ ಸಂಸದ ಕರಡಿ ಸಂಗಣ್ಣ ಚರ್ಚೆ
ಗದಗ-ವಾಡಿ ಮಾರ್ಗದಲ್ಲಿ ಗದಗ-ಕುಷ್ಟಗಿ | ಗಿಣಿಗೇರಾ-ರಾಯಚೂರು ಮಾರ್ಗದಲ್ಲಿ ಕಾರಟಿಗಿ-ಸಿಂಧನೂರು

ಸಮರ್ಥವಾಣಿ ವಾರ್ತೆ
ಕೊಪ್ಪಳ,ಜ.9: ಗದಗ-ವಾಡಿ ಮಾರ್ಗ ದಲ್ಲಿ ಗದಗದಿಂದ ಕುಷ್ಟಗಿ ವರೆಗೆ ಮತ್ತು ಗಿಣಿಗೇರಾ ರಾಯಚೂರು ಮಾರ್ಗದಲ್ಲಿ ಕಾರಟಗಿಯಿಂದ ಸಿಂಧನೂರು ವರೆಗೆ ಮಾಸಾಂತ್ಯದಲ್ಲಿ ರೈಲುಗಳು ಸಂಚಾರ ಪ್ರಾರಂಭಿಸಲಿವೆ ಎಂದು ಕೊಪ್ಪಳ ಲೊಕಸಭಾ ಸಂಸದ ಕರಡಿ ಸಂಗಣ್ಣ ತಿಳಿಸಿದ್ದಾರೆ.
ಲೋಕಸಭಾ ವ್ಯಾಪ್ತಿಯ ರೈಲ್ವೆ ಅಭಿವೃದ್ಧಿ ಕಾಮಗಾರಿಗಳು, ಲೋಕಾರ್ಪಣೆ ಸಂಬಂಧಿಸಿ ಹಲವು ವಿಷಯಗಳ ಕುರಿತು ಮಂಗಳವಾರ ಲೋಕಸಭಾ ವ್ಯಾಪ್ತಿಯ ರೈಲ್ವೆ ಅಭಿವೃದ್ಧಿ ಕಾಮಗಾರಿಗಳು, ಲೋಕಾರ್ಪಣೆ ಸಂಬಂಧಿಸಿ ಹಲವು ವಿಷಯಗಳ ಕುರಿತು ಮಂಗಳವಾರ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಜೊತೆ ಚರ್ಚೆ ನಡೆಸಿದ ನಂತರ ಪ್ರಕಟಣೆ ಬಿಡುಗಡೆ ಮಾಡಿರುವ ಸಂಸದ ಸಂಗಣ್ಣ ಕರಡಿ ಅವರು, ಗದಗ-ವಾಡಿ ರೈಲು ಮಾರ್ಗ ಲೋಕಾರ್ಪಣೆ ಮಾಡಿ ಕುಷ್ಟಗಿ ವರೆಗೆ ರೈಲು ಓಡಿಸುವುದು, ಗಿಣಿಗೇರಾ-ರಾಯಚೂರು ರೈಲು ಮಾರ್ಗದ ಕಾರಟಗಿ ಯಿಂದ ಸಿಂಧನೂರು ವರೆಗೆ ರೈಲು ಓಡಿಸು ವುದು ಬಗ್ಗೆ ಚರ್ಚಿಸಲಾಗಿದೆ. ತಿಂಗಳೊಳಗೆ ಚಾಲನೆ ನೀಡುವ ಭರವಸೆ ನೀಡಿದ್ದಾರೆ ಎಂದರು.
ಹುಲಿಗೆ ಮುನಿರಾಬಾದ ಮೇಲ್ಸೇತುವೆ ಭೂಮಿ ಪೂಜೆ ಶೀಘ್ರದಲ್ಲೇ ದಿನಾಂಕ ನಿಗದಿಪಡಿಸುವ ಕುರಿತು ಚರ್ಚಿಸ ಲಾಗಿದೆ. ಗಿಣಿಗೇರಾ ಮೇಲ್ಸೇತುವೆ ಶೇ. ೯೦ ರಷ್ಟು ಪೂರ್ಣ ಗೊಂಡಿದ್ದು, ಶೀಘ್ರವೇ ಲೋಕಾರ್ಪಣೆ ಮಾಡ ಲಾಗುವುದು. ಇನ್ನು ಕೊಪ್ಪಳ ನಗರದ ರೈಲ್ವೆ ಗೇಟ್ ನಂ.೬೩ ( ಸ್ವಾಮಿ ವಿವೇಕಾನಂದ ಸ್ಕೂಲ್ ಹತ್ತಿರ) ಹಾಗೂ-೬೫ (ಕೆಇಬಿ ಗೇಟ್) ಕೆಳಸೇತುವೆ ಕಾಮಗಾರಿ ಪ್ರಾರಂಭ ಮಾಡುವ ಬಗ್ಗೆ ಚರ್ಚಿಸಲಾಗಿದ್ದು, ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಜ.೨೨ರಂದು ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರನ ಮಂದಿರ ಲೋಕಾರ್ಪಣೆ ಯಾಗಲಿದ್ದು, ರಾಮನ ಬಂಟ ಹನುಮನ ಜನ್ಮಭೂಮಿ ಅಂಜನಾದ್ರಿ ಬಳಿಯ ಗಂಗಾವತಿ ಯಿಂದ ಅಯೋಧ್ಯೆಗೆ ವಿಶೇಷ ರೈಲು ಬಿಡಲು ಒತ್ತಡ ತರಲಾಗಿದೆ. ರೈಲ್ವೆ ಅಧಿಕಾರಿ ಗಳು ತಾಂತ್ರಿಕವಾಗಿ ಪರಿಶೀಲಿಸುತ್ತಿ ದ್ದಾರೆ. ವಾರದೊಳಗೆ ಮತ್ತೊಂದು ಸಭೆ ಇದ್ದು, ನಿರ್ಧಾರವಾಗಲಿದೆ. ಗಂಗಾವತಿ- ಅಯೋಧ್ಯೆಗೆ ವಿಶೇಷ ರೈಲು ಬಿಡಲು ವಿಶ್ವಾಸವಿದೆ ಎಂದರು.

ಇಂದು ಸಂಸದ ಸಂಗಣ್ಣ ಕರಡಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ಕೊಪ್ಪಳ ಲೋಕಸಭಾ ಕ್ಷೇತ್ರದ ರೈಲ್ವೆಗೆ ಸಂಬಂಧಿಸಿದ ಅಭಿವೃದ್ಧಿ ಕಾಮಗಾರಿ ಆರಂಭಿಸಲು ಮನವಿ ಮಾಡಿದರು. ಗಂಗಾವತಿ-ಅಯೋಧ್ಯೆ ಗೆ ವಿಶೇಷ ರೈಲು ಸಂಚರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ತಾಂತ್ರಿಕ ಸ್ಥಿತಿ ಆಧರಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಮಾಜಿ ಅಧ್ಯಕ್ಷ ಅನಿಲ್ ಸಹಸ್ರಬುದ್ದಿ, ಬಿಜೆಪಿ ಮುಖಂಡರು ಗಳಾದ ಸಂತೋಷ್ ಕಲೋಜಿ, ನರಸಿಂಗರಾವ್ ಕುಲಕರ್ಣಿ, ಸಿದ್ದರಾಮ ಸ್ವಾಮಿ, ವಿರುಪಾಕ್ಷಸ್ವಾಮಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button